ನೂತನ ಶಸ್ತ್ರ ಚಿಕಿತ್ಸಾ ಕೊಠಡಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಚಾಲನೆ
ಸಿರುಗುಪ್ಪ: ಬಡಜನರ ಆರೋಗ್ಯದ ಅನುಕೂಲಕ್ಕಾಗಿ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಮತ್ತು ಸಾರ್ವಜನಿಕರ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ವೈದ್ಯರು ಎಲ್ಲ ಜನರಿಗೆ ಉತ್ತಮ ಸೇವೆ ನೀಡಬೇಕು ಎಂದು ಶಾಸಕ ಎಂಎಸ್ ಸೋಮಲಿಂಗಪ್ಪ ಹೇಳಿದರು ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಳ್ಳಾರಿ ಜಿಲ್ಲಾ ಖನಿಜ ನಿಧಿ ಅನುದಾನದಲ್ಲಿ 50 ಲಕ್ಷ ರೂಪಾಯಿ ವೆಚ್ಚದ ನೂತನ ನಿರ್ಮಿಸಿದ ಶಸ್ತ್ರ ಚಿಕಿತ್ಸೆ ಕೊಠಡಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ ಅವರು ಮಾತನಾಡುತ್ತಾ ಆರೋಗ್ಯವೇ ಮಹಾಭಾಗ್ಯ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಬೇಕು ಇದರ ಸೌಲಭ್ಯವನ್ನು ಸದುಪಯೋಗಿಸಿಕೊಳ್ಳಬೇಕು ಎಂದರು ವೈದ್ಯರಾದ ಡಾ ದಿನೇಶ್, ಡಾ ರಾಮಕೃಷ್ಣ ,ಡಾ ಓ ವಿ ಕೊತ್ವಾಲ್, ಮುಖಂಡರಾದ ಹೆಚ್ ಕೆ ತಿಮ್ಮಪ್ಪ, ಣೆಣಿಕ್ಯಪ್ಪ, ರುದ್ರಪ್ಪ, ನರಸಿಂಹ, ಮೊಹಮ್ಮದ್ ನೌಶಾದ್ ಅಲಿ, ಆಸ್ಪತ್ರೆಯ ಸಿಬ್ಬಂದಿ ವರ್ಗದವರಿದ್ದರು.