ತಾಳಿಕೋಟಿ

ತಾಳಿಕೋಟಿ ಮಾದರಿ ನಗರವಾಗಲಿದೆ : ಶಾಸಕ ನಡಹಳ್ಳಿ

ತಾಳಿಕೋಟಿ ಮಾದರಿ ನಗರವಾಗಲಿದೆ : ಶಾಸಕ ನಡಹಳ್ಳಿ

ತಾಳಿಕೋಟಿ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಟ್ಟಣವಾಗಿರುವದರಿಂದ ಇದನ್ನು ಜಿಲ್ಲೆಯಲ್ಲಿಯೇ ಒಂದು ಮಾದರಿ ನಗರವನ್ನಾಗಿ ಮಾಡುವ ಉದ್ದೇಶದಿಂದ ಇದರ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಅನುದಾನವನ್ನು ತಂದು ಕೆಲಸ ಮಾಡುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.

ರವಿವಾರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಸ್ತೆ ಡಿವೈಡರ್ಗಳ ಮಧ್ಯದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ನಾನು ಸುಮಾರು 2 ಕಿ.ಮೀ. ನಗರ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಇಡೀ ಪಟ್ಟಣ ಸುಂದರ ಹಾಗೂ ಹಸಿರಿನಿಂದ ಕಂಗೊಳಿಸುವಂಥಾಗಲು ವಿಶೇಷ ಅನುದಾನವನ್ನು ತಂದು ಚಾಲನೆ ನೀಡಿದ್ದೇನೆ. ಇದರ ಜೊತೆಗೆ ಪಟ್ಟಣದಲ್ಲಿರುವ ಎಲ್ಲ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಲು ರೂ. 2.5 ಕೋಟಿ ಅನುದಾನ ಮಂಜೂರಾಗಿದೆ ಶೀಘ್ರದಲ್ಲಿಯೇ ಅದಕ್ಕೂ ಚಾಲನೆ ನೀಡಲಿದ್ದೇನೆ ಎಂದರು.

ಮುದ್ದೇಬಿಹಾಳ ನಗರದಲ್ಲಿ ಆದಂತೆಯೇ ಇಲ್ಲಿಯೂ ರಸ್ತೆ ಎರಡೂ ಬದಿಯ ಮಧ್ಯದಲ್ಲಿ ಗಿಡಗಳನ್ನು ನೆಡಲಾಗುವುದು ಇದರ ಜವಾಬ್ದಾರಿಯನ್ನು ಇಲಾಖಾ ಅಧಿಕಾರಿಗಳಿಗೆ ನೀಡಲಾಗಿದೆ, ಆಂಧ್ರಪ್ರದೇಶದ ರಾಜಮಂಡ್ರಿಯಿಂದ ವಿಶೇಷ ಗಿಡಗಳನ್ನು ತಂದು ನೆಡಲಾಗುತ್ತಿದೆ. ಇದರ ಸೌಂದರೀಕರಣ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರದ್ದು ಆಗಿದೆ. ಇಲ್ಲಿ ಜಾಹೀರಾತುಗಳನ್ನು ಹಚ್ಚಬೇಡಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಆದೇಶಿಸುತ್ತೇನೆ. ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೊಂದಣಿ ಕಾಯರ್ಾಲಯ ಮಂಜೂರಾಗಿದೆ. ಇದಕ್ಕೆ ಅಗತ್ಯ ಕಾರ್ಯಾಲಯ ಹಾಗೂ ಸಿಬ್ಬಂದಿಯನ್ನು ಒದಗಿಸಲಾಗುತ್ತಿದೆ. ನಾನು ಮಾನ್ಯ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಅಭಿನಂದಿಸುತ್ತೇನೆ ಎಂದರು.

ಫೆಬ್ರುವರಿ ತಿಂಗಳಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಇಲ್ಲಿಗೆ ಬರಲಿದ್ದಾರೆ. ಇಲ್ಲಿಯ ಪ್ರಮುಖ ಬೇಡಿಕೆಯಾದ ಹೊಸ ತಾಲೂಕಾ ಆಸ್ಪತ್ರೆ ಹಾಗೂ ಮಿನಿ ವಿಧಾನಸೌಧ ಮಂಜೂರು ಮಾಡುವ ಆಶಾಭಾವನೆ ಹೊಂದಿದೇನೆ. ಅಂದು ಅವರು ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಪಟ್ಟಣದಲ್ಲಿ ನಗರೋತ್ಥಾನ ಯೋಜನೆ ಅಡಿ ರೂ. 10 ಕೋಟಿ ಕಾಮಗಾರಿಗಳು ನಡೆದಿವೆ. ಇನ್ನೂ ರೂ. 10 ಕೋಟಿ ಮಂಜೂರಾಗಿದೆ. ಶೀಘ್ರದಲ್ಲಿ ಅದಕ್ಕೂ ಪೂಜೆ ನೆರವೇರಿಸಲಿದ್ದೇನೆ. ಸ್ವಾತಂತ್ರ್ಯ ಬಂದ 75 ವರ್ಷಗಳ ಅವಧಿಯಲ್ಲಿಯೇ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನವನ್ನು ತಂದು ನಾನು ಕೆಲಸ ಮಾಡಿದ್ದೇನೆ, ಇದಕ್ಕೆ ನಿಮ್ಮೆಲ್ಲರ ಸಹಕಾರವೇ ಕಾರಣ ನನಗೆ ಮುಂದೆಯೂ ನಿಮ್ಮೆಲ್ಲರ ಆಶೀವರ್ಾದ ಬೇಕು ಎಂದರು.

ಈ ಸಮಯದಲ್ಲಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗೇರಿ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಜಯಸಿಂಗ್ ಮೂಲಿಮನಿ, ನಿಂಗಪ್ಪ ಕುಂಟೋಜಿ, ಅಣ್ಣಪ್ಪ ಜಗತಾಪ, ಮಲ್ಲಪ್ಪ ಕಟ್ಟಿಮನಿ, ಮುಖಂಡ ಶಿವಶಂಕರ ಹಿರೇಮಠ, ಪ್ರಕಾಶ ಹಜೇರಿ, ಶರಣಗೌಡ ಗೊಟಖಂಡ್ಕಿ, ಮಲ್ಲು ಮೇಟಿ, ವಿಸ್ತಾರಕರ ಶಿವಪ್ಪ ಸವದೆ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಅರಣ್ಯ ಇಲಾಖೆಯ ಮಹಾಂತೇಶ ಹಾದಿಮನಿ, ಮಹಿಳಾ ಕಾರ್ಯಕರ್ತೆಯರಾದ ಬೋರಮ್ಮ ಕುಂಬಾರ, ಶಿವಮ್ಮ ಬಿರಾದಾರ, ಗೀತಾ ಗೌಡಗೇರಿ, ಕಾಶಿಬಾಯಿ ಕೊಳ್ಳಿ, ಸಾವಿತ್ರಮ್ಮ ಹಿರೇಮಠ, ಕೌಶಲ್ಯ ಗೌಡಗೇರಿ, ರೇಣುಕಾ ಹಂಚಾಟೆ, ಯಮನವ್ವ ಇದ್ದರು

ಸುದ್ದಿ ಓದಿ