ಬಳ್ಳಾರಿ ನಗರವನ್ನು ಸುಂದರ ಸ್ವಚ್ಛ ನಗರವನ್ನಾಗಿ ಮಾಡಬೇಕು: ಲಕ್ಷ್ಮಿ
ಬಳ್ಳಾರಿ: 2008ರಲ್ಲಿ ಜನಾರ್ದನ್ ರೆಡ್ಡಿ ಅವರು ಕಂಡ ಕನಸುಗಳು ನನಸಾಗಬೇಕು. ಅವುಗಳನ್ನು ಈಡೇರಿಸುವ ಸಲುವಾಗಿ ಕೃಷಿ ಮಾಡಬೇಕು ಮಹಿಳಾ ಸಮಾನತೆ ಅದು ಮಹಿಳಾ ಮೀಸಲಾತಿ ಬಗ್ಗೆ ಕಾರ್ಯಕ್ರಮ ರೂಪಿಸುವುದು. ಗೆಳೆಯರ ಬೆಂಬಲವಾಗಿ ನಿಲ್ಲುವುದು ಬಳ್ಳಾರಿ ನಗರವನ್ನು ಸುಂದರ ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ಮಾಡಬೇಕು ಎಂಬುದು ನನ್ನ ಆಶಯ ಎಂದು ಲಕ್ಷ್ಮಿ ಅರುಣ ಜನಾರ್ದನ ರೆಡ್ಡಿಯವರು ತಿಳಿಸಿದರು.
ನಗರದಲ್ಲಿ ಫೆ.11ರಂದು ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ನಕ್ಷತ್ರ ಹೋಟೆಲಲ್ಲಿ ಲಕ್ಷ್ಮಿಅರುಣ ಜನಾರ್ಧನ್ ರೆಡ್ಡಿ ಅವರು ಹಾಗೂ ಜಿಲ್ಲಾಧ್ಯಕ್ಷ ಗೋನಾಳ್ ರಾಜಶೇಖರ್ ಗೌಡ ರವರ ಅಧ್ಯಕ್ಷತೆಯಲ್ಲಿ ಮಹಿಳಾ ಶಕ್ತಿ ಘಟಕದ ಅಧ್ಯಕ್ಷ ಹಂಪಿರಮಣರವರ ನೇತೃತ್ವದಲ್ಲಿ ಮಹಿಳಾ ಸಮಾವೇಶ ನಡೆಯಿತು.
ನಂತರ ಮಾತನಾಡಿದ ಜನಾರ್ಧನ್ ರೆಡ್ಡಿ ಅವರ ಸುಪುತ್ರಿ ಬ್ರಾಹ್ಮಣಿ ರಾಜೀವ್ ರೆಡ್ಡಿಯವರು ಮಾತನಾಡಿ ಅಲ್ಲಂ ಸುಮಂಗಳಮ್ಮನವರು, ಶಾರದ ಮಳೆ ಬೆನ್ನೂರು ನಂತರ ಮಹಿಳಾ ಅಭ್ಯರ್ಥಿಯಾಗಿ ನನ್ನ ತಾಯಿ ನಗರದಲ್ಲಿ ಸ್ಪರ್ಧೆಸುತ್ತಿದ್ದಾರೆ. ಎಲ್ಲಾ ಮಹಿಳಾ ಮಣಿಗಳು ನನ್ನ ತಾಯಿಯನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕೋರಿದರು.
ತರುವಾಯ ನಗರದ ಮಹಿಳೆಯರು ಮಾತನಾಡಿ ್ಯ ಜನಾರ್ಧನ್ ರೆಡ್ಡಿ ಅವರ ದೂರ ದೃಷ್ಟಿ ಅಭಿವೃದ್ಧಿ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಲಕ್ಷ್ಮಿ ಅರುಣ ರವರ ಪರ ನಿಲ್ಲಬೇಕು ಎಂಬ ಮಾತುಗಳಾಡಿದರು. ಈ ಕಾರ್ಯಕ್ರಮದಲ್ಲಿ ಲಕ್ಷ್ಮಿ ಅರುಣ್ ಜನಾರ್ದನ ರೆಡ್ಡಿ, ಬ್ರಾಹ್ಮಣಿ ರಾಜು ರೆಡ್ಡಿಯವರು, ಗೋನಾಳ ರಾಜಶೇಖರ ಗೌಡ, ಹಂಪಿ ರಮಣ, ಜಿಲ್ಲಾ ಮಾಧ್ಯಮ ವಕ್ತರರಾದ ಕೆ.ಮಲ್ಲಿಕಾರ್ಜುನ ಆಚಾರಿ, ಮಹಿಳಾ ಘಟಕದ ಸದಸ್ಯರು ಕಾರ್ಯಕರ್ತರು ಇತರರು ಭಾಗವಹಿಸಿದ್ದರು