ಗ್ರಾಮದ ಆದರ್ಶ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಕ್ರೀಡಾ ಸ್ಪರ್ಧೆ
ಬಳ್ಳಾರಿ 07: ಕನ್ನಡ ಚೈತನ್ಯ ವೇದಿಕೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಂಗನಕಲ್ಲು ಗ್ರಾಮದ ಆದರ್ಶ ವೃದ್ಧಾಶ್ರಮದಲ್ಲಿ ದಿನಾಂಕ_ 7ರಂದು ಭಾನುವಾರ ವೇದಿಕೆಯ ಮಹಿಳೆಯರಿಗೂ ಹಾಗೂ ಆಶ್ರಮದ ಹಿರಿಯರಿಗೂ ಬಿಸ್ಕೆಟ್ ತಿನ್ನುವ ಸ್ಪರ್ಧೆ ಬಕೆಟ್ಗೆ ಬಾಲ್ ಹಾಕುವ ಕ್ರೀಡೆಗಳನ್ನು ಎರ್ಪಡಿಸಲಾಗಿತ್ತು ಆಶ್ರಮದ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಮಹಿಳೆ ನಾಗರತ್ನ ಶಿವಕುಮಾರ್ ಇವರಿಗೆ ಸೀಮಂತ ಕಾರ್ಯವನ್ನು ವೇದಿಕೆಯ ಮಹಿಳೆಯರು ನೆರವೇರಿಸಿಕೊಟ್ಟರು.É ಆಶ್ರಮದಲ್ಲಿ ಇರುವವರಿಗೆ ಬೆಡ್ ಶೀಟ್ಗಳನ್ನು ನೀಡಲಾಯಿತು ವೇದಿಕೆಯ ಮಹಿಳಾ ಸದಸ್ಯರು ಹಿರಿಯ ಜೀವಿಗಳಿಗೆ ಭೋಜನವನ್ನು ಏರ್ಪಡಿಸಿದ್ದರು . ಆಶ್ರಮದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ವೆಂಕೋಬಾ ಇವರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ಬಿ ಎಸ್ ಪ್ರಭುಕುಮಾರ್,ರಘುರಾಮ್ ಶೆಟ್ಟಿ, ಹಾಗೂ ಮಹಿಳಾ ಅಧ್ಯಕ್ಷರಾದ ಜ್ಯೋತಿಪ್ರಕಾಶ್ ವೇದಿಕೆಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.