ಮಹಿಳೆಯರಿಗೆ ಸರ್ಕಾರ ಯೋಜನೆಗಳ ಜಾಗೃತಿ ಮೂಡಿಸಬೇಕು: ಕವಟಗಿಮಠ
ಚಿಕ್ಕೋಡಿ: ಸ್ವಾವಲಂಬಿ ಮಹಿಳೆಯರಿಗಾಗಿ ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರ್ಕಾರದ ನರೇಂದ್ರ ಮೋದಿರವರ ಅಡಳಿತ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವು ಕಟ್ಟ ಕಡೆಯ ಸಾಮಾನ್ಯ ಮಹಿಳೆಗೆ ದೊರೆಯಲು ಬಿಜೆಪಿ ಮಹಿಳಾ ಮೊರ್ಚಾದ ಸದ್ಯಸರು ಸಮಾಜದ ಮಹಿಳೆಯರಿಗೆ ಯೋಜನೆಯ ಜಾಗೃತಿ ಮೂಡಿಸಬೇಕೆಂದು ವಿಧಾನ ಪರಿಷತನ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಹೇಳಿದರು.ರವಿವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬಿಜೆಪಿ ಮಹಿಳಾ ಮೊರ್ಚಾ ಹಾಗೂ ಕೆ ಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಜೀರವರ ಕನಸಿನಂತೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದರು.
ಹಳ್ಳಿ ಹಾಗೂ ನಗರದ ಪ್ರತಿಯೊಂದು ಬಡ ಮಹಿಳೆಗೆ ಆರೋಗ್ಯ ಸೌಲಭ್ಯ ಸಿಗಲ್ಲಿ ಮತ್ತು ಹೆಣ್ಣು ತಾಯಿಯಾಗಿ ಸಹೋದರಿಯಾಗಿ ಹೆಂಡತಿಯಾಗಿ ಇಡೀ ಮನೆತನದ ಮತ್ತು ಸಮಾಜದ ಜವಾದ್ದಾರಿಯನ್ನು ನಿರ್ವಹಿಸುವಲ್ಲಿ ಅತ್ಯಂತ ಯಶಸ್ವಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದರು.ಸ್ವಾವಲಂಬನೆ ಬದುಕಬೇಕು ಹಾಗೂ ತಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಅಂತರಾಷ್ಟೀಯ ಮಹಿಳಾ ದಿನಾಚರಣೆ ಆಚರಿಸುವ ಸಂದರ್ಬದಲ್ಲಿ ನಿಮಿತ್ಯ ಅನೇಕ ಯೋಜನೆಗಳು ರೂಪಿಸಲಾಗಿದೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗದ ಸಹ ಕಾರ್ಯವಾಹÀ ಸಂಜಯ ಅಡಕೆ ಮಾತನಾಡುತ್ತಾ ಯವಕರು ಹಾಗೂ ಮಹಿಳೆಯರು ನಮ್ಮ ದೇಶದ ಪ್ರಮುಖವಾದ ಶಕ್ತಿ ಹಾಗೂ ಸದೃಡವಾಗಿರಬೇಕೆಂದು ಮತ್ತು ಇಡಿ ಮನೆಯ ಸದಸ್ಯರನ್ನು ಆರೋಗ್ಯವಾಗಿಡಲು ಯವಕರು ಹಾಗೂ ಮಹಿಳೆಯರು ಪಾತ್ರ ಪ್ರಮುಖವಾಗಿದೆ ಎಂದರು.
ಶಿಬಿರದಲ್ಲಿ ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕಿನ ಉಪಾದ್ಯಕ್ಷರಾದ ಜಗದೀಶ ಕವಟಗಿಮಠ, ಪುರಸಭೆ ಅದ್ಯಕ್ಷರಾದ ಪ್ರವೀಣ ಕಾಂಬಳೆ, ಉಪಾದ್ಯಕ್ಷರಾದ ಸಂಜಯ ಕವಟಗಿಮಠ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಮಹಿಳಾ ಮೊರ್ಚಾದ ಅದ್ಯಕ್ಷರಾದ ಶಾಂಬವಿ ಅಶ್ವತಪೂರ, ಚಿಕ್ಕೋಡಿ ಸದಲಗಾ ಬಿಜೆಪಿ ಮಂಡಳ ಅದ್ಯಕ್ಷರಾದ ಸಂಜಯ ಪಾಟೀಲ್, ಚಿಕ್ಕೋಡಿ ಸದಲಗಾ ಬಿಜೆಪಿ ಮಹಿಳಾ ಮಂಡಳ ಅದ್ಯಕ್ಷರಾದ ಶಕುಂತಲಾ ದೊಣವಾಡೆ, ಜಿಪಂ ಮಾಜಿ ಸದಸ್ಯರಾದ ಮಹೇಶ ಭಾತೆ, ಪರಸಭೆ ಸದ್ಯಸರಾದ ವೀಣಾ ಕವಟಗಿಮಠ, ಸುಮಾ ಗಾವಿ, ಆಶಾ ಪಾಟೀಲ್, ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿಡಾ. ಧೀರಜ ಶಿವರಾಮ ಪೋಳ್, ಡಾ. ತೀರುಮಲ, ಡಾ ಪ್ರಿಯಂಕಾ ಪಾಟೀಲ್, ಡಾ. ಸೈದಾಪೂರ ಆಡಳಿತಾಧಿಕಾರಿ ಪ್ರಶಾಂತ ಪೂಜಾರಿ, ವೈದ್ಯರುಗಳಾದÀ ಡಾ. ಸೌಮ್ಯಾ ಹಾಗೂ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 150 ಕ್ಕೂ ಅಧಿಕ ರೋಗಿಗಳನ್ನು ತಪಾಸಿಸಿ ಉಚಿತ ಔಷದಗಳನ್ನು ವಿತರಿಸಲಾಯಿತು.