ಕನ್ನಡ ಪರ ಸಂಘಟನೆಗಳಲ್ಲಿ ನವಕರ್ನಾಟಕ ಯುವಶಕ್ತಿಯು ಒಂದಾಗಿದೆ
ಬಳ್ಳಾರಿ 12: ಕನ್ನಡ ಪರ ಸಂಘಟನೆಗಳು ಅಂದರೆ ಕೇವಲ ಹೋರಾಟಗಳಲ್ಲಿ ಭಾಗವಹಿಸುವುದಲ್ಲ ಜೊತೆ-ಜೊತೆಗೆ ಸಮಾಜಕ್ಕೆ ಮನೋರಂಜನೆ ನೀಡುವುದು ನಮ್ಮ ಉದ್ದೇಶ ಎಂದು ತೋರಿಸಿಕೊಟ್ಟಿರುವ ಕನ್ನಡ ಪರ ಸಂಘಟನೆಗಳಲ್ಲಿ ನವಕರ್ನಾಟಕ ಯುವಶಕ್ತಿಯು ಒಂದಾಗಿದೆ ಎಂದು ಅಣ್ಣಾ ಫೌಂಡೇಷನ್ನಿನ ಸ್ಥಾಪಕ ಅಧ್ಯಕ್ಷರಾದ ರಾಜಶೇಖರ್ ಮುಲಾಲಿ ಅಭಿಪ್ರಾಯಪಟ್ಟರು.
ಮಹಾಶಿವರಾತ್ರಿ ಪ್ರಯುಕ್ತ ಮಹಾನಗರದ ತೇರುಬೀದಿಯ ದೊಡ್ಡಮಾರ್ಕೆಟ್ ಹತ್ತಿರದಲ್ಲಿ ನವಕರ್ನಾಟಕ ಯುವಶಕ್ತಿ ಸಂಘಟನೆಯು ಹಮ್ಮಿಕೊಂಡಿದ್ದ ಹತ್ತನೆ ವರ್ಷದ ಮಹಾರಾತ್ರಿ ಮನೋರಂಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಬ್ರೂಸ್ಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್.ನಾಗರಾಜ ಅವರು ಮಾತನಾಡಿ ನಮ್ಮ ನವಕರ್ನಾಟಕ ಯುವಶಕ್ತಿ ಸಂಘಟನೆಯು ಪ್ರತಿವರ್ಷ ಶಿವರಾತ್ರಿ ದಿನದಮದು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳುತ್ತಾ, ಕರೋನಾ ಮಹಾಮಾರಿಯ ಎರಡನೆ ರೂಪಾಂತರ ಪ್ರಭೇದದ ಬಗ್ಗೆ ಎಚ್ಚರವಿರಲಿ, ಮೈಮರೆತರೇ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ಸಂದೇಶ ನೀಡಿದರು.
ಮತ್ತೋರ್ವ ಅತಿಥಿ ಉದ್ಯಮಿಗಳಾದ ಕೋರಿ ವಿರುಪಾಕ್ಷಪ್ಪ ಮಾತನಾಡಿ, ಶಿವರಾತ್ರಿಯ ಈ ಮಹಾಜಾಗರಣೆಯ ಸುಸಂದರ್ಭದಲ್ಲಿ ನಾಗರೀಕರಿಗೆ ಇಂತಹ ಸಾಂಸ್ಕೃತಿಕ ವಾತಾವರಣ ಸಂಘಟನೆ ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದು ನುಡಿದರು.
ಜಾಗೃತಿ ಕಿರಣ ಪತ್ರಿಕೆಯ ಸಂಪಾದಕ ಯಾಳ್ಪಿ ವಲಿಬಾಷಾ, ಅವರು ಅತಿಥಿ ನುಡಿಗಳನ್ನು ಮಾತನಾಡುತ್ತಾ ಸಂಘಟನೆಯ ಈ ಶಿವರಾತ್ರಿ ಕಾರ್ಯಕ್ರಮಗಳು ನೂರು-ಸಾವಿರವಾಗಲಿ ಎಂದು ಸದಾಶಯ ವ್ಯಕ್ತಪಡಿಸಿದರು. ಕನ್ನಡ ಪರ ಹೋರಾಟಗಾರರಾದ ಮಹಾಲಿಂಗಯ್ಯ(ರಾಜಣ್ಣ) ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉದಯೋನ್ಮುಖ ಚಿತ್ರಕಲಾವಿದ ಮಲ್ಲಿಕಾರ್ಜುನ ಅಪಗುಂಡಿ ಅವರು ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಸಿದ್ಮಲ್ ಮಂಜುನಾಥ ಅವರ ರೇಖಾಚಿತ್ರವನ್ನು ಶ್ರೀಯುತರಿಗೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಚಿತ್ರಕಲಾವಿದರಾದ ಮಲ್ಲಿಕಾರ್ಜುನ ಅಪಗುಂಡಿ ಅವರನ್ನು ಸನ್ಮಾನಿಸಲಾಯಿತು.
ನಂತರ ಜರುಗಿದ ಸಾಂಸ್ಕೃಇಕ ಕಾರ್ಯಕ್ರಮಗಳ ಮಾಲಿಕೆಯಲ್ಲಿ ಮಹಾನಗರದ ಸುಪ್ರಸಿದ್ಧ ವಾದ್ಯಗೋಷ್ಠಿಯಾದ ಪ್ರತಿಭಾ ವಆದ್ಯಗೋಷ್ಠಿಯ ಕಲಾಔಇದರು ಕೇವಲ ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಉಪಸ್ಥಿತರಿದ್ದ ಸಾವಿರಾರು ಶಿವಭಕ್ತಿಗೆ ತಮ್ಮ ಹಾಡು, ಮಿಮಿಕ್ರಿ, ನೃತ್ಯದ ಮುಖಾಂತರ ಜನಮನ ರಂಜಿಸಿದರು. 11 ಜನ ಕಲಾವಿದರಿಂದ ಕೂಡಿದ ಪ್ರತಿಭಾ ವಾದ್ಯಗೋಷ್ಠಿಯ ಸಂಗೀತ ಗಾಯನ ಕಾರ್ಯಕ್ರಮ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ನವಕರ್ನಾಟಕ ಯುವ ಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಸಿದ್ಮಲ್ಮಂಜುನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಕ್ಷಕರು, ಬಳ್ಳಾರಿ ಆಕಾಶವಾಣಿ ಎಫ್.ಎಂ.ನ ಉದ್ಘೋಷಕರಾದ ಅಮಾತಿ ಬಸವರಾಜ ನಿರೂಪಿಸಿದರು. ಈ ಸಂದರ್ಭದಲ್ಲಿ ನವಕರ್ನಾಟಕ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ರಮೇಶ್, ನಗರ ಘಟಕದ ಅಧ್ಯಕ್ಷ ಹಲಕುಂದಿ ರವಿಕುಮಾರ್ ದೇವೇಶ್, ಚಾಂದ್ಬಾಷಾ, ಮಾದೆಗೊಂಡೆ ಮಂಜುನಾಥ, ಬಿ.ಗಿರಿಬಾಬು, ಡಿ.ಮಹೇಶ್ಕುಮಾರ್, ರಾಧಾಕೃಷ್ಣ, ಅಪ್ಪು ಸೇವಾಸಮಿತಿಯ ಜೆ.ಪಿ.ಮಂಜುನಾಥ ಇನ್ನು ಹಲವಾರು ಕಾರ್ಯಕರ್ತರು ಹಾಜರಿದ್ದರು. ಕಾರ್ಯಕ್ರಮದಲ್ಲಿ ದೊಡ್ಡಮಾರ್ಕೆಟ್ ಪ್ರದೇಶದ ನೂರಾರು ಜನರು ಭಾಗವಹಿಸಿದ್ದರು.