ಭಾರತೀಯ ಅಂಚೆ ಅಭಿರುಚಿಯ ಪತ್ರ ಲೇಖನ ಸ್ಪಧರ್ೆ
ಸಿರುಗುಪ್ಪ09: ಜನಸಾಮಾನ್ಯರಲ್ಲಿ ಹಾಗೂ ವಿದ್ಯಾಥರ್ಿಗಳಲ್ಲಿ ಪತ್ರ ಲೇಖನ ಅಭಿರುಚಿ ಬರವಣಿಗೆ ಕೌಶಲ್ಯವನ್ನು ಹಾಗೂ ದೇಶಪ್ರೇಮವನ್ನು ಜಾಗೃತಿಗೊಳಿಸಲು ಭಾರತ ಸಕರ್ಾರದ ಅಂಚೆ ಇಲಾಖೆ ಉದ್ದೇಶಿಸಿದೆ ಎಂದು ಬಳ್ಳಾರಿ ವಿಭಾಗ ಅಂಚೆ ಅಧೀಕ್ಷರಾದ ಕೆ. ಬಸವರಾಜ ಅವರು ಪ್ರಕಟಿಸಿದ್ದಾರೆಂದು ಸಿರುಗುಪ್ಪ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಫೋರಂ ಸದಸ್ಯರಾದ ಅಬ್ದುಲ್ ನಬಿ ಅವರು ಹೇಳಿದರು.
ಇದಕ್ಕಾಗಿ ಅಂಚೆ ಇಲಾಖೆಯು ಭಾರತ ದೇಶಾದ್ಯಂತ ರಾಷ್ಟ್ರಮಟ್ಟದ ಮುಕ್ತ ಪತ್ರ ಪತ್ರ ಲೇಖನ ಸ್ಪಧರ್ೆಯನ್ನು ಏರ್ಪಡಿಸಿದೆ 18 ವರ್ಷದೊಳಗಿನ ಮತ್ತು 18ವರ್ಷ ಮೇಲ್ಪಟ್ಟ ಎಂಬ ಎರಡು ವಿಭಾಗಗಳಿರುತ್ತದೆ.
ರಾಷ್ಟ್ರಮಟ್ಟದ ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಪತ್ರಕ್ಕೆ 50 ಸಾವಿರ ಹಾಗೂ ರಾಜ್ಯ ಮಟ್ಟದ ಅತ್ಯುತ್ತಮ ಪತ್ರಕ್ಕೆ 25 ಸಾವಿರ ಬಹುಮಾನವನ್ನು ನೀಡಲಾಗುವುದು ಪತ್ರವನ್ನು ಕನ್ನಡ, ಹಿಂದಿ, ಇಂಗ್ಲಿಷ್, ಭಾಷೆಯಲ್ಲಿ ಬರೆದು ಸಲ್ಲಿಸಬೇಕು. ಮುದ್ರಿತ ಪತ್ರ ಸ್ವೀಕರಿಸುವುದಿಲ್ಲ.
ಲೆಟರ್ ಟು ಮೈ ಮದರ್, ಮೇರಿ ದೇಶ್ ಕೆ ನಾಮ್ ಖಾತಾ, ಮಾತೃಭೂಮಿಗೆ ಪತ್ರ ಎಂಬ ವಿಷಯದ ಮೇಲೆ ಂ4 ಸೈಜ್ ಅಳತೆಯ ಒಂದು ಸಾವಿರ ಪದಗಳು ಮೀರದಂತೆ ಬರೆದು ಎನ್ಆ್ಯಪ್ನಲ್ಲಿ ಅಥವಾ ಇನ್ಲ್ಯಾಂಡ್ ಅಂತದರ್ೆಶೀಯ ಪತ್ರದಲ್ಲಿ 500 ಪದಗಳಿಗೆ ಮೀರದಂತೆ ಬರೆದು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕನರ್ಾಟಕ ವೃತ್ತ ಬೆಂಗಳೂರು ಇವರಿಗೆ ಸೆ.30ರ ಒಳಗಾಗಿ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗೆ (08396-266037, 8884123436, 9449848976), ದೂರವಾಣಿ ಸಂಪಕರ್ಿಸಬಹುದು ಎಂದು ಅಬ್ದುಲ್ ನಬಿ ಅವರು ವಿವರಿಸಿದರು.