ಪ್ರತಿಯೊಬ್ಬರು ನೀರಿನ ಮಹತ್ವ ಅರಿಯುವುದು ಅಗತ್ಯ: ಕಲರಾ ಕರೆ
ಚಿಕ್ಕೋಡಿ 12: ಮನುಷ್ಯನ ಜೀವನಕ್ಕೆ ಕುಡಿಯಲು ನೀರು ಬಳಕೆಗೆ ನೀರು ಅತ್ಯುಮುಲ್ಯವಾಗಿ ಬೇಕಾಗಿರುವುದು ಅಂತಹ ನೀರನ್ನು ದುರ್ಬಳಕೆ ಮಾಡದೇ ಮಿತವಾಗಿ ಬೆಳೆಸಿಕೊಂಡು ಪ್ರತಿಯೊಬ್ಬರು ನೀರಿನ ಮಹತ್ವ ತಿಳಿಯಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳಾದ ರೋಹಿತ ಕಲರಾ ಸಮುದಾಯಕ್ಕೆ ಕರೆ ನೀಡಿದರು. ಅವರು ಕಳೆದ ದಿ. 10 ರಂದು ನೆಹರು ಯುವ ಕೇಂದ್ರ ಬೆಳಗಾವಿ ಗ್ರಾಮ ಪಂಚಾಯತ ಯಮಕನಮರಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಳೆ ನೀರು ಸಂಗ್ರಹ ಅಭಿಯಾಣ ಕಲಾ ಜಾಥಾ ಕಾರ್ಯಕ್ರಮಕ್ಕೆ ತಮಟೆ ವಾದ್ಯ ನುಡಿಸಿ ಚಾಲನೆ ನೀಡಿ ಮಾತನಾಡಿ ಶುದ್ದವಾದ ಕುಡಿಯುವ ನೀರನ್ನು ಕುಡಿಯಬೇಕು, ಕಲ್ಮಶ ನೀರು ಆರೋಗ್ಯಕ್ಕೆ ಹಾನಿಕರವಾಗುತ್ತದೆ ಅಂತರಜಲ ಹೆಚ್ಚಿಸಲು ಮಳೆ ಕೊಯ್ಲು ಯೋಜನೆಯಲ್ಲಿ ಮಳೆ ನೀರು ಸಂಗ್ರಹ ಮಾಡಲು ಪ್ರತಿಯೊಬ್ಬರು ಮುಂದಾಗಬೇಕೆಂದರು.
ನಂತರ ನಡೆದ “ಜೀವಜಲ” ಬೀದಿ ನಾಟಕ ಜಾಗೃತಿ ಹಾಡುಗಳ ಮುಖಾಂತರ ಮಳೆ ನೀರು ಸಂಗ್ರಹ, ಸ್ವಚ್ಛತೆ, ಬೋರ ನಲ್ಲಿಯ ಸುತ್ತಮುತ್ತ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹಿತಕರವಾದ ಸ್ವಚ್ಛ ಪರಿಸರದ ಕುರಿತು ಕಲಾ ಪ್ರದರ್ಶನ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ಮಳೆ ನೀರು ಸಂಗ್ರಹಣಾ ಬಿತ್ತಿ ಪತ್ರ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ವಿತರಿಸಲಾಯಿತು. ಕಲಾ ತಂಡದಲ್ಲಿ ಭರತ ಕಲಾಚಂದ್ರ, ಪುಂಡಲೀಕ ನಾಯಿಕ, ಸಂತ್ರಾಮ ಕಾಂಬಳೆ, ಸಾವಿತ್ರಿ ಹಲಕಲ, ಮಾರುತಿ ಕಮತೆ, ಶಂಕರ ಖೋತ, ಅಪ್ಪಾಸಾಬ ಚಿಮನೆ, ವಿಷ್ಣು ಹಲಗೆಕರ ಭಾಗವಹಿಸಿದ್ದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಎಸ್.ಎಸ್.ಢಂಗ ಹಾಗೂ ಸಿಬ್ಬಂದಿ ವರ್ಗ, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಸುಜಾತಾ ಮಗದುಮ್ಮ ನಿರೂಪಿಸಿದರು, ಗೋಪಾಲ ಚಪನಿ ವಂದಿಸಿದರು.