ಇಲಕಲ್ಲ ನಗರ ಮಾತ್ರ ಲಾಕ್ಡೌನ್: ನಾಗರಾಳ
ಹುನಗುಂದ 16; ಇಲಕಲ್ಲ ನಗರ ಸೇರಿದಂತೆ ಸುತ್ತಲಿನ ಕೆಲವು ಗ್ರಾಮಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ನಿಯಂತ್ರಣಕ್ಕೆ ಇಲಕಲ್ಲ ನಗರವನ್ನು ಮಾತ್ರ ಲಾಕ್ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ ಬಸವರಾಜ ನಾಗರಾಳ ಹೇಳಿದರು.
ನಗರದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತ ಕಳೆದ ಮೂರ್ನಾಲ್ಕು ದಿನಗಳ ಹಿಂದಿನವರೆಗೆ ಹುನಗುಂದ ತಾಲೂಕಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದೆ ಶಾಂತಿ ನೆಮ್ಮದಿ ಕಾಯ್ದುಕೊಂಡಿತ್ತು. ಆದರೆ ಇತ್ತೀಚಿನ ನಾಲ್ಕು ದಿನಗಳ ಹಿಂದೆ ಏಕಾಏಕಿ ಎನ್ಎಚ್ಗೆ ಹೊಂದಿ ಪಂಚರ್ ಅಂಗಡಿ ಕೆಲಸ ಮಾಡುತ್ತಿದ್ದ ಓರ್ವನು ಮೃತನಾಗಿ ಕೋವಿಡ್-19 ದೃಢ ಪಟ್ಟಿದ್ದರಿಂದ ನಗರದ ಮತ್ತು ಸುತ್ತಲಿನ ಪ್ರತಿ 5ಗ್ರಾಪಂ ಮಟ್ಟದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಯು ಜನರು ಮತ್ತಷ್ಟು ಜಾಗೃತಗೊಳ್ಳುವಂತೆ ಕ್ರಮ ಕೈಗೊಂಡಿದ್ದಾರೆ. ಆದಾಗ್ಯೂ ಸಹಿತ ಜನರು ಬೇಜವಾಬ್ದಾರಿಯಿಂದ ಮಾರುಕಟ್ಟೆಯಲ್ಲಿ ಅಂತರ, ಮಾಸ್ಕ ಮತ್ತು ಕಡ್ಡಾಯವಾಗಿ ಸೆನಿಟೈಸರ್ ಬಳಸುತ್ತಿಲ್ಲ. ಇನ್ಮುಂದೆ ಅಂತವರ ಮೇಲೆ ನಿಗಾ ಇಟ್ಟು ಪೊಲೀಸ್ ಪ್ರಕರಣ ದಾಖಲಿಸುವಂತೆ ಇಲಾಖೆಗೆ ಸೂಚಿಸಿದೆ. ಹುನಗುಂದ ನಗರದಲ್ಲಿ ಲಾಕ್ಡೌನ್ ಮಾಡುವ ಅಗತ್ಯವಿಲ್ಲದಿದ್ದರೂ ಜನ ಮತ್ತು ವ್ಯಾಪಾರಸ್ಥರು ಎಚ್ಚೆತ್ತುಕೊಂಡು ಸ್ವಯಂಪ್ರೇರಣೆಯಿಂದ ದಿನದ ಕೇವಲ 7ತಾಸುಗಳ ಕಾಲ ಮಾರಕಟ್ಟೆ ತೆರೆಯಲು ಒಪ್ಪಿಕೊಂಡು ರೋಗ ನಿಯಂತ್ರಣಕ್ಕೆ ಸ್ಪಂದಿಸುತ್ತಿದ್ದಾರೆ. ಆದಾಗ್ಯೂ ಸಹಿತ ಇಲಾಖೆಗಳು ತಮ್ಮ ಜವಾಬ್ದಾರಿ ಕೆಲಸ ನಿರ್ವಹಿಸುತ್ತಿವೆ ಎಂದು ತಹಶೀಲ್ದಾರ ನಾಗರಾಳ ತಿಳಿಸಿದರು.
ತಾಲೂಕಾ ವೈದ್ಯಾಧಿಕಾರಿ ಡಾ. ಪ್ರಶಾಂತ ತುಂಬಗಿ ಮಾತನಾಡಿ ಕೋವಿಡ್ದಿಂದ ಮೃತಪಟ್ಟ ವ್ಯಕ್ತಿಯ ಮೂಲ ಸಂಪರ್ಕವನ್ನು ಟ್ರೆಸ್ ಮಾಡಿ ಪತ್ತೆ ಹಚ್ಚಲಾಗುತ್ತಿದ್ದು, ಅವನು ವಾಸವಾಗಿದ್ದ ಮಲ್ಲಿಕಾಜರ್ುನ ನಗರವನ್ನು ಈಗಾಗಲೆ ಶೀಲ್ಡೌನ್ ಮಾಡಿ, ಮೃತನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ವೈಧ್ಯ ಸೇರಿ ಮತ್ತು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ 14ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಜುಲೈ 11ರವರೆಗೆ ಹುನಗುಂದ-ಇಲಕಲ್ ಸೇರಿ ಕಳಿಸಿದ್ದ 96 ಶ್ಯಾಂಪಲ್ ವರದಿ ಬರಬೇಕೆಂದು ತಿಳಿಸಿದರು.
ಬಾಕ್ಸ್; ಸಂಶೋಧನಾ ವರದಿಯಂತೆ ತಂಪಾದ ಹವೆಗೆ ಕೊರೊನಾ ರೋಗವು ಹೆಚ್ಚಿಗೆ ಹರಡುವ ಸಾಧ್ಯತೆ ಇದೆ. 50ವರ್ಷ ನಂತರದವರು ಮತ್ತು 10ವರ್ಷದ ಒಳಗಿನ ಮಕ್ಕಳು ಸಾಧ್ಯವಾದಷ್ಟು ಹೊರಬರಬಾರದು. ನಗರದ ಎಲ್ಲ ವ್ಯಾಪಾರಸ್ಥರು ಕೈ ತೊಳೆಯಲು ನೀರು ಮತ್ತು ಸಾಬೂನು ಇಲ್ಲವೆ ಸೆನಿಟೈಸರ್ನ್ನು ಕಡ್ಡಾಯವಾಗಿ ಅಂಗಡಿ ಮುಂದೆ ಇಟ್ಟು ಗ್ರಾಹಕರು ಬಳಸುವಂತೆ ತಿಳಿಸಬೇಕು.
ಅಯ್ಯನಗೌಡ ಪಾಟೀಲ ಸಿಪಿಐ.
ಬಾಕ್ಸ್; ಅಂಗಡಿ-ಮುಂಗಟ್ಟು, ಮಾರುಕಟ್ಟೆ, ಮದುವೆ ಸಮಾರಂಭ, ಶೀಮಂತ ಕಾರಣ ಮತ್ತು ಶವ ಸಂಸ್ಕಾರಕ್ಕೆ ಹೆಚ್ಚು ಜನ ಸೇರಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಲಾಗವದು. ಜನ ಸಮೂಹ ಹೆಚ್ಚು ಸೇರುವದರಿಂದ ಕೊವಿಡ್-19 ಉಲ್ಬಣ ಸಾಧ್ಯವಿದೆ. ಸಾಮಾಜಿಕ ಅಂತರ ಕಡ್ಡಾಯವಾಗಬೇಕು. ಬೇರೆ ಊರು, ಜಿಲ್ಲೆ ಮತ್ತು ರಾಜ್ಯದಿಂದ ಯಾರಾದರೂ ಬಂದರೆ ಅಂತಹವರು ಸ್ವಯಂಪ್ರೇರಣೆಯಿಂದ ಆಸ್ಪತ್ರೆಗೆ ಬಂದು ತಪಾಷಣೆ ಮಾಡಿಸಿಕೊಳ್ಳಬೇಕು. ಮತ್ತು ಸುತ್ತಲಿನ ಪ್ರದೇಶದವರು ಅಂತವರ ಬಗ್ಗೆ ತಾಲೂಕ ಆಡಳಿತಕ್ಕೆ ಮಾಹಿತಿ ನೀಡಬೇಕು.
ತಹಶೀಲ್ದಾರ ನಾಗರಾಳ.
16;ಎಚ್ಎನ್ಡಿ;1; ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಭಯ ಪಡದೆ ಜನ ಜಾಗೃತೆಗೆ ಕ್ರಮ ತೆಗೆದುಕೊಂಡ ಕುರಿತು ಪತ್ರಿಕಾಗೋಷ್ಟಿಯಲ್ಲಿ ತಹಶೀಲ್ದಾರ ಬಸವರಾಜ ನಾಗರಾಳ ಮಾತನಾಡುತ್ತಿರುವದು.