ಹುನಗುಂದ : 14 ರಂದು ವಿದ್ಯುತ್ ವ್ಯತ್ಯಯ
ಬಾಗಲಕೋಟೆ: ಹುನಗುಂದ 110/11 ಕೆವಿ ಉಪ ಕೇಂದ್ರದಲ್ಲಿ ದೋಷಪೂರಿತ ಸಿ.ಟಿ ಬದಲಾವಣೆ ಕೆಲಸವು ಅತೀ ಅವಶ್ಯವಾಗಿದೆ. ಸದರಿ ದೋಷಪೂರಿತ ಸಿಟಿ 11 ಕೆವಿ ಮಾರ್ಗಗಳಲ್ಲಿ ತೊಂದರೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಗೃಹ ಮಂಡಳಿ ಬಾಗಲಕೋಟೆ ಅವರು ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಪ್ರಯುಕ್ತ ಜುಲೈ 14 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ 110/11 ಕೆವಿ ಉಪ ಕೇಂದ್ರದಿಂದ ಸರಬರಾಜು ಆಗುವ ಎಲ್ಲ 11 ಕೆವಿ ಮಾರ್ಗಗಲ ವ್ಯಾಪ್ತಿಯಲ್ಲಿ ಬರುವಂತಹ ಎಚ್.ಟಿ/ಐ.ಪಿ.ಪಿ/ನಗರ/ಗ್ರಾಮ/ಕೃಷಿ ಗ್ರಾಹಕರುಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.