ತಾಳಿಕೋಟಿ

ಸಮಾಜ ಸೇವಕ ಮುರಾಳಗೆ ನಡಹಳ್ಳಿ ಸನ್ಮಾನ

ಸಮಾಜ ಸೇವಕ ಮುರಾಳಗೆ ನಡಹಳ್ಳಿ ಸನ್ಮಾನ

ತಾಳಿಕೋಟಿ: ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕ್ರೀಯಾಶೀಲ ಸಮಾಜ ಸೇವಕ ಮಹಾಂತೇಶ ಮುರಾಳ ಅವರು ಜಗಜ್ಯೋತಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನಾ ಕಾರ್ಯದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ (ನಡಹಳ್ಳಿ) ಅವರು ಸನ್ಮಾನಿಸಿ ಗೌರವಿಸಿದರು.

ಪಟ್ಟಣದಲ್ಲಿ ಇತ್ತೀಚಿಗೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಸಮಾಜ ಸೇವಕ ಮಾಹಾಂತೇಶ ಮುರಾಳ ಅವರಿಗೆ ನಡಹಳ್ಳಿ ಅವರು ಈ ಸನ್ಮಾನ ನೀಡಿದರು.

ಸನ್ಮಾನಿಸಿ ಮಾತನಾಡಿದ ಶಾಸಕ ನಡಹಳ್ಳಿ ಅವರು ಪಟ್ಟಣದಲ್ಲಿ ಜಗದ್ಗುರು ಬಸವೇಶ್ವರರು ಒಂದು ಭವ್ಯವಾದ ಮೂರ್ತಿ  ಪ್ರತಿಷ್ಠಾಪಿಸಬೇಕೆಂಬುದು ಇಲ್ಲಿಯ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಹಾಗೂ ಸಾವಿರಾರು ಬಸವಾಭಿಮಾನಿಗಳ ಆಸೆಯಾಗಿತ್ತು. ನಾನು ಇದಕ್ಕೆ ಆಸಕ್ತಿ ವಹಿಸಿ ಸುಮಾರು ರೂ.70 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದ್ದೆ ಇವತ್ತು ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು ಲೋಕಾರ್ಪಣೆಗೊಳಿಸಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಮಹಾನ್ ಕೆಲಸ ಕಾರ್ಯರೂಪಲ್ಲಿ ಬರಲು ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಮಹಾಂತೇಶ ಮುರಾಳ ಅವರ ಸೇವೆ ಅಪಾರವಾಗಿದೆ ಅದನ್ನು ನಾನೆಂದೂ ಮರೆಯುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿ ಬಹಳ ಸಹನೆಯಿಂದ ಆಸಕ್ತಿವಹಿಸಿ ಎಲ್ಲರ ಸಲಹೆ-ಸೂಚನೆ ತೆಗೆದುಕೊಂಡು ಅವರು ಕೆಲಸ ಮಾಡಿದ್ದಾರೆ ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದರು.

ಈ ಸಮಯದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ), ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಮುಖಂಡರಾದ ಮಹಾಂತಗೌಡ ಪಾಟೀಲ (ನಾಲತವಾಢ), ಕಾಶಿನಾಥ ಮುರಾಳ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ದತ್ತು ಹೆಬಸೂರ, ಎಂ.ಎಸ್. ಸರಶೆಟ್ಟಿ, ಕಾಶಿನಥ ಸಜ್ಜ, ಗಂಗಾಧರ ಕಸ್ತೂರಿ, ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಜಯಸಿಂಗ್ ಮೂಲಿಮನಿ, ಅಣ್ಣಪ್ಪ ಜಗತಾಪ ಇದ್ದರು.

ಸುದ್ದಿ ಓದಿ