ಉತ್ತರ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಏನು ಸೌಲಭ್ಯ ಕೊಡುಗೆ ಕೊಟ್ಟಿದೆ: ಎನ್. ಗಂಗಿ ರೆಡ್ಡಿ
ಬಳ್ಳಾರಿ :ಫೆ (22)ರಂದು ನಗರದಲ್ಲಿ 2023-24ನೇ ಬಜೆಟ್, ಅಸಮಾಧಾನ ತಂದಿದೆ. ಬಳ್ಳಾರಿ ಜಿಲ್ಲೆ ನಗರಕ್ಕೆ ಮತ್ತು ಉತ್ತರ ಕರ್ನಾಟಕಕ್ಕೆ ಬಿ.ಜೆ.ಪಿ.ಸರ್ಕಾರ ಏನು ಸೌಲಭ್ಯ ಕೊಡುಗೆ ಕೊಟ್ಟಿದೆ ?ಈ ಜಿಲ್ಲೆಗೆ ಮತ್ತು ನಗರಕ್ಕೆ ಈಗಿರುವ ಸರ್ಕಾರ ಬಜೆಟ್ನಲ್ಲಿ ಏನು ಕೊಡುಗೆ ಕೊಟ್ಟಿರುತ್ತದೆ. ಈ ಜಿಲ್ಲೆದೊಳಗೆ ಕುಡಿಯುವ ನೀರು, ರಸ್ತೆಗಳು, ಸಾರ್ವಜನಿಕ ಶೌಚಾಲಯಗಳು, ಶಾಲೆಗಳಲ್ಲಿ ಕುಡಿಯುವ ನೀರು, ಮೈದಾನ, ಮತ್ತು ಶೌಚಾಲಯ, ಬಹಳ ತೊಂದರೆ ಇದೆ. ನಗರಕ್ಕೆ ಸೌಲಭ್ಯಗಳು ತಾವು ಏನು ಕೊಟ್ಟಿರುತ್ತೀರಿ ? 1978 ರಲ್ಲಿ,ದಿವಂಗತ ಬಾಸ್ಕರನಾಯ್ಡುರವರು ಅವತ್ತಿನ ಬಳ್ಳಾರಿ ನಗರದಲ್ಲಿ ಇರುವ ಜನಸಂಖ್ಯೆ ಆಧಾರದ ಮೇಲೆ ಒಳಚರಂಡಿಯನ್ನು, ನಿರ್ಮಾಣ ಮಾಡಿರುತ್ತಾರೆ. ಈಗಿನ ಜನಸಂಖ್ಯೆಯನ್ನು ಹಿಡಿದು | ಮೀಟರ್ ಪೈಪುಗಳನ್ನು ಒಳಚರಂಡಿಗೆ ಬಳಸಬೇಕು, ಬಳ್ಳಾರಿ ನಗರದಲ್ಲಿ ರಸ್ತೆಗಳು ಸರಿ ಇಲ್ಲ. ವಾರಕ್ಕೊಮ್ಮೆ ಕುಡಿಯುವ ನೀರು, ಆದರೂ ಸಹ ಕುಡಿಯುವ ನೀರು ಸರಿಯಾಗಿ ಸರಬರಾಜಿಲ್ಲ, ಬಳ್ಳಾರಿ ನಗರದಲ್ಲಿರುವ ವಿಮ್ಸ್ ಆಸ್ಪತ್ರೆಯಲ್ಲಿ ಕಂಟೋನ್ಮೆಂಟ್ ಹೊಸ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಹೊಸದಾಗಿ ಕಟ್ಟಡ ನಿಮರ್ಾಣ ಮಾಡಿರುತ್ತಾರೆ. ಹೊಸ ಕಟ್ಟಡ ನಿರ್ಮಾ ಣದೊಳಗಡೆ ವೈದ್ಯಕೀಯ ಪರೀಕ್ಷೆ ಹೊಸ ತಂತ್ರಜ್ಞಾನ ಸಾಮಗ್ರಿಗಳು ಸರಿಯಾಗಿ ಇರುವುದಿಲ್ಲ. ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯರು ಇರುವುದಿಲ್ಲ.
ನಿರ್ಲಕ್ಷತನ ವಹಿಸುತ್ತಾರೆ. ಜಿಲ್ಲಾ ಆಸ್ತಿ, ಬಳ್ಳಾರಿಯಲ್ಲಿ 100 ಹಾಸಿಗೆ ಖಾಲಿ ಇದೆ. ಇದರ ಬಗ್ಗೆ ಗಮನಹರಿಸಿಲ್ಲ. ಇದರ ಬಗ್ಗೆ ಗಮನಹರಿಸುವುದು ಬಿಟ್ಟು ಇವರು ಕೆ.ಎಂ.ಎಫ್.ಗೆ ಮೇಘಾ ಡೈರಿ ಅಂತಾ ಹೇಳಿ 100.00 ಕೋಟಿ: ಅವಶ್ಯಕತೆ ಇದೆಯಾ ? ರಾಯಲ್ ಸರ್ಕಲ್ನಲ್ಲಿ 700 ಕೋಟಿಯ ಟವರ ಅವಶ್ಯಕತೆ ಇದೆಯಾ? ಉತ್ತರ ಕರ್ನಾಟಕದಲ್ಲಿ ಇವತ್ತಿಗೂ ಮೂಲಭೂತ ಸೌಕರ್ಯಗಳು ಇಲ್ಲ, ಅದಕಾರಣ, ಈ ಉತ್ತರ ಕರ್ನಾಟಕವನ್ನು ವಿಭಜನೆ ಮಾಡಬೇಕು. ನಮ್ಮ ಕರ್ನಾಟಕದಲ್ಲಿ ವಿದ್ಯಾವಂತ ಯುವಕರಿಗೆ ಯುವತಿಯರಿಗೆ, ಯಾವುದೇ ಪದವೀದರರಾಗಲೀ, ಉದ್ಯೋಗ ಇಲ್ಲದೆ ಪರದಾಡುತ್ತಿದ್ದಾರೆ. ಇದರ ಬಗ್ಗೆ ಯಾವ ಸಕರ್ಾರನೂ ಗಮನ ಹರಿಸಲಿಲ್ಲ. ಆದಕಾರಣ ಈಗಿರುವ ಉದ್ಯೋಗ ನಿವೃತ್ತಿಯನ್ನು 56 ಮಾಡಬೇಕು. ಇದರೆ, ಬಗ್ಗೆ, ಎಲ್ಲ: ಯುವತಿ/ಯುವಕರಿಗೆ ಉದ್ಯೋಗ ಅವಕಾಶ ಸಿಗುತ್ತದೆ. ಚುನಾವಣೆ ಬಂದಾಗ, ಈ ರಾಜಕೀಯ ಪಕ್ಷಗಳು ನಾಗರೀಕರಿಗೆ ತುಟಿಗೆ ತುಪ್ಪ ಹಚ್ಚುತ್ತಾರೆ. ನಮ್ಮ ವೋಟು ಹಕ್ಕನ್ನ ನೋಟು ಕೊಟ್ಟು ವೋಟು ಹಕ್ಕನ್ನು ಪಡೆಯುತ್ತಾರೆ. ಎಂದು ರಾಜಕೀಯ ಪ್ರತಿನಿಧಿಗಳ ಕುರಿತು ವ್ಯಕ್ತಪಡಿಸಿದರು.