ದಾನ ಎಂಬುದು ಹೆಸರಿಗೆ ಮಾತ್ರ ಕಂಡು ಬರುತ್ತಿದೆ: ಮಾತೆ ಬಸವೇಶ್ವರಿ
ಲೋಕದರ್ಶನ ವರದಿ
ಮುಂಡಗೋಡ:ಆತ್ಮತೃಪ್ತಿ, ಸಮಾಜ, ಮೋಕ್ಷಕ್ಕೋಸ್ಕರ ದಾನದಲ್ಲಿ ತೊಡಗಬೇಕು ದಾನದ ಮೂಲಕ ಪ್ರತಿಯೊಬ್ಬರೂ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ತಾಲೂಕಿನ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.
ಪಟ್ಟಣದ ಗಾಂಧಿನಗರದ ರಾಮಣ್ಣ ಮೊಸಳಗಿ ಅವರ ನಿವಾಸದಲ್ಲಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ದಾನದ ಕುರಿತು ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ದಾನ ಎಂಬುದು ಹೆಸರಿಗೆ ಮಾತ್ರ ಕಂಡು ಬರುತ್ತಿದೆ. ಬಹುತೇಕ ಹೆಸರುಗಳು ಅವರ ಕಾಯಕದ ವಿರುದ್ಧ ಇರುವುದನ್ನು ನಾವು ಕಾಣಬಹುದು. ದಾನಪ್ಪ ಎಂದು ಹೆಸರು ಇರುತ್ತದೆ ಆದರೆ ದಾನವೆಂದರೆ ಆತನಿಗೆ ಇಷ್ಟವಿರುವುದಿಲ್ಲ. ಲಕ್ಷ್ಮೀ ಎಂಬ ಹೆಸರಿನವರ ಕೆಲವರಲ್ಲಿ ದರಿದ್ರತನ ತಾಂಡವವಾಡುತ್ತಿರುತ್ತದೆ. ಸರಸ್ವತಿ ಎಂಬ ಹೆಸರು ಇದ್ದು ವಿದ್ಯೆ ಕೊರತೆ ಕಂಡು ಬರುತ್ತದೆ. ಮಹಾನ್ ಪುರುಷರು, ಶರಣರು, ತತ್ವಜ್ಞಾನಿಗಳು ತಮ್ಮ ಬದುಕಿನುದ್ದಕ್ಕೂ ದಾನದ ಮೂಲಕ ನಾವು ಇಂದಿಗೂ ಸ್ಮರಿಸುವ ಕಾಯಕ ಮಾಡಿದ್ದಾರೆ ಎಂದರು.
ಆನಂದ ಕೊರವರ, ಸುನೀತಾ, ಅನನ್ಯ ನಿಡಗುಂದಿ, ವೈ.ಜಿ.ಹಳ್ಳಿ ದಾನ ವಿಷಯದ ಕುರಿತು ಮಂಡಿಸಿದರು. ಪ್ರಕಾಶ ಮೊಸಳಗಿ, ಅನಸೂಯಾ ವಾಲಿಶೆಟ್ಟರ, ಎನ್.ಡಿ.ಕಿತ್ತೂರ, ಸೂರ್ಯಕಾಂತ ರಾಯ್ಕರ, ಎಸ್.ಕೆ.ಕೋಳೂರು, ವಸಂತ ಕೊಣಸಾಲಿ, ಆರ್.ಜೆ.ಬೆಳ್ಳೆನವರ, ಎಮ್.ಎಸ್.ಕಾರ್ಕಳ, ಮಹದೇಶ್ವರ ಲಿಂಗದಾಳ, ವಿನಾಯಕ ಶೇಟ್, ದಿನೇಶ ವೆಣರ್ೇಕರ, ಸುಭಾಸ ಡೋರಿ, ದಯಾನಂದ ನಾಯ್ಕ, ಶ್ರೀಶೈಲ ಐನಾಪುರ ಮುಂತಾದವರು ಉಪಸ್ಥಿತರಿದ್ದರು.