ಸಿರುಗುಪ್ಪ

ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜನ್ಮದಿನ

ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜನ್ಮದಿನ

ಸಿರುಗುಪ್ಪ-ಶಿಕ್ಷಣ ಎಂದರೆ ತಿಳಿಯದ ಅಕ್ಷರಗಳೆಂದರೆ ಗೊತ್ತಿಲ್ಲದವರಿಗಾಗಿ ಶಾಲೆಗಳನ್ನು ತೆರೆದು ದೇಶದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಜನ ಅಭಿಪ್ರಾಯ ಮುಖಂಡರಾದ ಅಬ್ದುಲ್ ನಬಿಯವರು ಹೇಳಿದರು.

 ಸಿರುಗುಪ್ಪ ದಲ್ಲಿ ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ 192ನೇ ಜನ್ಮದಿನವನ್ನು ನೆನಪಿಸಿ ಗೌರವಿಸಿ ಸನ್ಮಾನಿಸಿ ಮಾತನಾಡುತ್ತಾ ಅಕ್ಷರ ಕ್ರಾಂತಿಗೆ ಸಾವಿತ್ರಿಬಾಯಿ ಪುಲೆ ಅವರ ಕೊಡುಗೆ ಅಪಾರ ಎಂದರು.   

  ಆಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಬಾಯಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಇಸಿ ಓ ಬಸವರಾಜ್ ಅವರು ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಹಮ್ಮಿಕೊಂಡ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡುತ್ತಾ ಸಾಮಾಜಿಕ ಸಂಘಟನೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಬದುಕಿನ ಸಂಕುಲಕ್ಕೆ ಶೈಕ್ಷಣಿಕ ರಹಧಾರಿಯನ್ನು ತೋರಿಸಿದ ಮಹಾನ್ ನಾಯಕಿ ಸಾವಿತ್ರಿಬಾಯಿ ಪುಲೆ ಎಂದರು  ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಮ್ಮ, ಉಪಾಧ್ಯಕ್ಷ ನೀಲಮ್ಮ, ಪಿಡಿಒ ಮೌನೇಶ ಆಚಾರಿ, ಸದಸ್ಯರಾದ ಸುನಿತಾ, ಹಂಪಮ್ಮ, ಸುಮಂಗಲಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ, ರಾಜ್ಯ ಮಾನವ ಹಕ್ಕುಗಳ ಸದಸ್ಯರಾದ ರಾಘವೇಂದ್ರ, ವೀಣಾ, ಸಿಆರ್ ಪಿ ಮಹಾಂತೇಶ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಶಾಲಾ ಮಕ್ಕಳು ಗ್ರಾಮಸ್ಥರು ಇದ್ದರು.


ಸುದ್ದಿ ಓದಿ