ತಾಳಿಕೋಟಿ

ಅಂಜುಮನ್ ಶಿಕ್ಷಣ ಸಂಸ್ಥೆ ವತಿಯಿಂದ ನಡಹಳ್ಳಿಗೆ ಸನ್ಮಾನ

ಅಂಜುಮನ್ ಶಿಕ್ಷಣ ಸಂಸ್ಥೆ ವತಿಯಿಂದ ನಡಹಳ್ಳಿಗೆ ಸನ್ಮಾನ

ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಮತಕ್ಷೇತ್ರದಲ್ಲಿ ವಿಶೇಷವಾಗಿ ಪಟ್ಟಣದಲ್ಲಿ ಮಾಡಿರುವ ಅಭಿವೃದ್ಧಿಯ ಕಾರ್ಯಗಳಿಗೆ ಮೆಚ್ಚಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಇತ್ತೀಚೆಗೆ ಸಂಸ್ಥೆಗೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ ಸನ್ಮಾನ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕತಿಸಿ ಮಾತನಾಡಿದ ಶಾಸಕ ನಡಹಳ್ಳಿ ಅವರು ನೀವು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ನನಗೆ ಸಿಕ್ಕ ಈ ನಾಲ್ಕುವರೆ ವರ್ಷಗಳಲ್ಲಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ.

ನಾನೆಂದೂ ಜಾತಿರಾಜಕಾರಣ ಮಾಡಿಲ್ಲ. ನನ್ನ ಕ್ಷೇತ್ರದಲ್ಲಿರುವ ಎಲ್ಲ ಜಾತಿ-ಜನಾಂಗದವರ ಅಭಿವದ್ಧಿ ನನಗೆ ಮುಖ್ಯವಾಗಿದೆ. ಕ್ಷೇತ್ರದ ನೂರಾರು ಅಲ್ಪಸಂಖ್ಯಾತ ಬಡ ವಿದ್ಯಾಥರ್ಿಗಳಿಗೂ ಆಥರ್ಿಕ ಸಹಾಯ ಮಾಡಿದ್ದೇನೆ ಮುಂದೆಯೂ ನನಗೆ ನಿಮ್ಮ ಆಶೀರ್ವಾದ ಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಅಬ್ದುಲ್ರಜಾಕ್ ಮನಗೂಳಿ ಮಾತನಾಡಿ ಶಾಸಕ ನಡಹಳ್ಳಿ ಅವರು ಅಪ್ಪಟ ಜಾತ್ಯಾತೀತ ವ್ಯಕ್ತಿಯಾಗಿದ್ದಾರೆ. ಅವರು ನಮ್ಮ ಸಂಸ್ಥೆಗೆ ಈ ಮೊದಲು ಸಹಾಯ ಮಾಡಿದ್ದಾರೆ. ಅವರೊಬ್ಬ ಅಭಿವೃದ್ಧಿಯ ಹರಿಕಾರರಾಗಿದ್ದು, ಸರ್ವ ಸಮಾಜದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.

ಈ ಸಮಯದಲ್ಲಿ ಉಪಾಧ್ಯಕ್ಷ್ಷ ಬಾಬುಸಾಬ ಬಡಗಣ, ಕಾರ್ಯದಶರ್ಿ ರಾಜಅಹ್ಮದ್ ಒಂಟಿ, ಡಿ.ಎಡ್. ಕಾಲೇಜ ಅಧ್ಯಕ್ಷ ಸಿಕಂದರ ವಠಾರ, ಆಡಳಿತ ಮಂಡಳಿ ಸದಸ್ಯರಾದ ಹಸನ್ಸಾಬ ಮನಗೂಳಿ, ದಾವೂದ ಲಾಹೋರಿ, ನಿರಂಜನಶಾ ಮಕಾನದಾರ, ಖಾಸೀಮ ಅವಟಿ, ರಜಾಕ್ ನಾಡಗೌಡ, ಕಾಸೀಮ ಅಬಾಲೆ, ಅಲ್ಲಾಬಕ್ಷ ಮನಿಯಾರ, ಸಮಾಜ ಸೇವರಕ ಮಹೆಬೂಬ ಲಾಹೋರಿ, ಶಫೀಕ ಇನಾಮದಾರ, ಸಂಸ್ಥೆಯ ಶಿಕ್ಷಕವರ್ಗ ಹಾಗೂ ಸಿಬ್ಬಂದಿಗಳು ಇದ್ದರು 

ಸುದ್ದಿ ಓದಿ