ಕ್ರೀಡೆಗೆ ಕೊಪ್ಪದ ಪ್ರೋತ್ಸಾಹ ದೊಡ್ಡದು
ತಾಳಿಕೋಟೆ: ಪಟ್ಟಣದ ಅತಿ ಹೆಚ್ಚು ಕ್ರೀಡಾಪಟುಗಳನ್ನು ತರಬೇತಿಗೊಳಿಸಿ ಅವರನ್ನು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಲ್ಲಿ ದೈಹಿಕ ಶಿಕ್ಷಕ ಆರ್.ಎಲ್.ಕೊಪ್ಪದ ಪಾತ್ರ ದೊಡ್ಡದು ಎಂದು ಚೈತನ್ಯ ಸ್ನೇಹಿತರ ಬಳಗದ ಅಧ್ಯಕ್ಷ, ಮಾಜಿ ಪುರಸಭೆ ಸದಸ್ಯ ಮಾನಸಿಂಗ ಕೊಕಟನೂರ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೈಹಿಕ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಆರ್.ಎಲ್.ಕೊಪ್ಪದ ಹಾಗೂ ಉಪ ಪ್ರಾಚಾರ್ಯ ವೃತ್ತಿಯಿಂದ ನಿವೃತ್ತರಾದ ಎಸ್.ಡಿ.ಕರ್ಜಗಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಕ್ರೀಡಾ ಪಟುಗಳಿಗೆ ತರಬೇತಿದಾರರು ಅವಶ್ಯಕ. ಗ್ರಾಮೀಣ ಮಟ್ಟದಲ್ಲಿ ಉನ್ನತವಾದ ಕ್ರೀಡಾ ತರಬೇತಿದಾರರು ಇಲ್ಲದ ಸಂದರ್ಭದಲ್ಲಿ ಪಟ್ಟಣದ ಎಸ್.ಕೆ ಪ್ರೌಢ ಶಾಲೆಗೆ ದೈಹಿಕ ಶಿಕ್ಷಕರಾಗಿ ಆಗಮಿಸಿದ ನಂತರ ಎಲ್ಲ ಕ್ರೀಡಾ ಪಟುಗಳನ್ನು ಅತ್ಯುನ್ನತ ತರಬೇತಿ ನೀಡಿದ್ದಾರೆ. ಅವರ ಗರಡಿಯಲ್ಲಿ ಬೆಳೆದವರು ಹಲವು ಕ್ರೀಡೆಗಳಲ್ಲಿ ಬೆಳೆಗಿದ್ದಾರೆ. ಎಲ್ಲ ಕ್ರೀಡೆಗಳಿಗೂ ಸಹ ಅಷ್ಟೆ ಮಹತ್ವ ನೀಡಿ ಎಲ್ಲರಲ್ಲೂ ಸಹ ಕ್ರೀಢಾಸಕ್ತಿಯನ್ನು ಬೆಳೆಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಕ್ರೀಡಗಳನ್ನು ಅಯೋಜಿಸಿ ಕ್ರೀಡೆಗೆ ಪಟ್ಟಣದಲ್ಲಿ ಸ್ಥಾ ಕಲ್ಪಿಸಿದ ಮೊದಲಿಗರು ಎಂದರು.
ಸನ್ಮಾನ ಸ್ವಿಕರಿಸಿದ ಮಾತನಾಡಿದ ನಿವೃತ್ತ ಶಿಕ್ಷಕ ಆರ್.ಎಲ್.ಕೊಪ್ಪದ, ನನ್ನ ಸಾಧನೆಗೆ ಪಟ್ಟಣದ ಪ್ರೋತ್ಸಾಹ ಮುಖ್ಯವಾಗಿತ್ತು. ಅಂತಹ ಪ್ರೋತ್ಸಾಹ ಸಿಕ್ಕಿದೆ. ವೃತ್ತಿಯಿಂದ ನಿವೃತ್ತಿಯಾದರೂ ಸಹ ಯಾವುದೇ ಕ್ರೀಡೆಗಳು ನಡೆದರೂ ಅದಕ್ಕೆ ನನ್ನ ಸಹಕಾರ ಇರುತ್ತದೆ ಎಂದರು.
ಮುಸ್ಲಿಂ ಬ್ಯಾಂಕಿನ ಅಧ್ಯಕ್ಷ ಇಬ್ರಾಹಿಂ ಮನ್ಸೂರ, ಮಾಜಿ ಪುರಸಭೆ ಸದಸ್ಯ ರಾಜು ಸಜ್ಜನ, ರವಿ ಚಂದುಕರ, ಸಿದ್ದು ಮಡಿವಾಳ, ಅಶೋಕ ಚಿನಗುಡಿ, ಜಗದೀಶ ಬಿಳೆಭಾವಿ, ಅಣ್ಣು ಹುಬ್ಬಳ್ಳಿ, ದತ್ತು ಉಭಾಳೆ, ಪುರಸಭೆ ಸದಸ್ಯ ನಿಂಗರಾಜ ಕುಂಟೋಜಿ, ಮಲ್ಲು ಪಾಲ್ಕಿ, ಅಪ್ಪು ಕಲ್ಲುರ, ಸೋಮು ಗೆಜ್ಜಿ, ಅನಿಲ್ ಕುಂಬಾರ, ಮುತ್ತು ಕಶೆಟ್ಟಿ ರಮೇಶ ಮಾಲಿಪಾಟೀಲ, ವಿಶ್ವನಾಥ ಪಾಟೀಲ, ವೀರೇಶ ಕಸಬೇಗೌಡ್ರು, ಬಳಗದ ಕಾರ್ಯದಶರ್ಿ ಮಾಂಹಾತೇಶ ಮುರಾಳ ಸೇರಿದಂತೆ ಇತರರು ಇದ್ದರು.