ಮಹಿಳೆಯರ ಆರ್ಥಿಕ ಪ್ರಗತಿಗೆ ನರೇಗಾ ಯೋಜನೆ ಸಹಕಾರಿ
ತಾಳಿಕೋಟೆ: ಮಹಿಳೆಯರ ಆರ್ಥಿಕ ಪ್ರಗತಿಗೆ ನರೇಗಾ ಯೋಜನೆ ಸಹಕಾರಿಯಾಗಿದ್ದು, ಪ್ರತಿಯಬ್ಬರು ಸದುಪಯೋಗ ಪಡೆದುಕೋಳ್ಳಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಬಿರಾದಾರ ಹೇಳಿದರು.
ಅವರು ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಮನರೇಗಾ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತಾಲೂಕ ಮಟ್ಟದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನರೇಗಾ ಯೋಜನೆಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ವಿಪುಲ ಅವಕಾಶಗಳಿವೆ. ಯೋಜನೆಯಿಂದ ವಂಚಿತರಾಗದೆ ಎಲ್ಲೂರೂ ಸೌಲಭ್ಯಗಳನ್ನು ಪಡೆಯಬೇಕು. ಕೇವಲ ಗ್ರಾಮ ಪಂಚಾಯತಿ ಮಾತ್ರವಲ್ಲದೆ ಅನುಷ್ಠಾನ ಇಲಾಖೆಗಳಾದ ಕೃಷಿ,ತೋಟಗಾರಿಕೆ, ರೇಷ್ಮೆ,ಅರಣ್ಯ ಇಲಾಖೆಯಲ್ಲೂ ನರೇಗಾ ಯೋಜನೆಯನ್ನು ಒಗ್ಗೂಡಿಸಲಾಗಿದೆ ಉದ್ಯೋಗ ಚೀಟಿ ಹೊಂದಿದ ಫಲಾನುಭವಿಗಳು ಇಲಾಖೆಗಳಲ್ಲಿ ಕೆಲಸ ಮಾಡಬಹುದು. ಅಲ್ಲದೆ ತಮ್ಮ ವ್ಯಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಅವಕಾಶವಿದೆ ಎಂದರು.
ತಾಪಂ ಸಹಾಯಕ ನಿದರ್ೇಶಕಿ ಸಾವಿತ್ರಿ ಬಿರಾದಾರ, ಮನರೇಗಾ ಯೋಜನೆಯ ಮಾಹಿತಿ, ಉದ್ಯೋಗ ಚೀಟಿ ಪಡೆವ ವಿಧಾನ ಮತ್ತು ಕೆಲಸಕ್ಕೆ ಅಜರ್ಿ ಸಲ್ಲಿಸು ವಿಧಾನದ ಕುರಿತು ತಿಳಿಸಿದರು. ತಾಲೂಕಾ ಐಇಸಿ ಸಂಯೋಜಕ ಮಲಕಪ್ಪ.ಬಿಎಮ್ ಮಾತನಾಡಿ, ಮನರಾಗಾ ಯೋಜನೆಯಡಿ ವ್ಯಯಕ್ತಿಕ ಕಾಮಗಾರಿಗಳ ಮತ್ತು ಸಮುದಾಯ ಕಾಮಗಾರಿಗಳ ಮಾಹಿತಿ ಹೇಳಿ. ಕಾಯಕ ಸಂಘಗಳ ರಚನೆ ಮತ್ತು ಕಾಯಕ ಬಂಧುಗಳ ಆಯ್ಕೆ ಮಾಡುವುದು ಹಾಗೂ ಅವರ ಕಾರ್ಯಗಳ ಕುರಿತು ತಿಳಿ ಹೇಳಿದರು
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ, ಕೃಷಿ ಇಲಾಖೆಯಡಿ ಮನರೇಗಾ ಯೋಜನಯಲ್ಲಿ ಇರುವ ಸೌಲಭ್ಯಗಳ ಕುರಿತು, ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಲಿಂಗಪ್ಪ ಕುಂಬಾರ, ತೋಟಗಾರಿಕಾ ಇಲಾಖೆಯಿಂದ ಮನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಸ್ವ-ಸಹಾಯ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು. ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡು , ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸ-ಸ್ವಹಾಸ ಸಂಘದ ಸದಸ್ಯರುಗಳಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಎನ್,ಆರ್,ಎಲ್,ಎಮ್ ಯೋಜನೆಯ ಟಿಪಿಎಮ್ ಯಶವಂತ ಕಲಾಲ, ಟಿಐಎಮ್ಎಸ್ ಭೀಮಾಶಂಕರ ಪಸೋಡಿ, ತಾಂತ್ರಿಕ ಸಂಯೋಜಕ ನಾಗರಾಜ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಬಸವರಾಜ ಅಗ್ನಿ. ಸಿದ್ದಮ್ಮ ಬ್ಯಾಲಾಳ, ಕಲ್ಪನಾ ಹೂಗಾರ. ನಂದಬಸಯ್ಯ ಹೂಗಾರ, ಕಾಯಕ ಮಿತ್ರರು, ತಾಲೂಕಿನ ಎಲ್ಲಾ ಎಮ್.ಬಿ.ಕೆ ಗಳು ಸೇರಿದಂತೆ ಇತರರು ಇದ್ದರು.