ಕೆಎಲ್ಇ ಸಿಬಿಎಸ್ಇ ಶಾಲೆಯಲ್ಲಿ ವೈದ್ಯರ ದಿನಾಚರಣೆ
ಮಾಂಜರಿ 02: ಜುಲೈ 1ರಂದು ವೈದ್ಯರ ದಿನಾಚರಣೆಯ ಅಂಗವಾಗಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಸಿಬಿಎಸ್ಇ ಶಾಲೆ ಮತ್ತು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಮತ್ತು ರಕ್ತಗುಂಪು ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಪಾಲಕರು ಹಾಗೂ ಶಿಕ್ಷಕರು ಪಾಲ್ಗೊಂಡು ರಕ್ತದಾನ ಮಾಡಿದರು. ವಿದ್ಯಾಥರ್ಿಗಳು ಈ ಶಿಬಿರದಲ್ಲಿ ಭಾಗವಹಿಸಿ ತಮ್ಮ ರಕ್ತದ ಗುಂಪು ತಪಾಸಣೆ ಮಾಡಿಸಿಕೊಂಡರು.
'ರಕ್ತದಾನ ಮಹಾದಾನ' ಎಂಬ ತತ್ವದಡಿಯಲ್ಲಿ ಕೆಎಲ್ಇ ಸಿಬಿಎಸ್ಇ ಶಾಲೆ ಅಂಕಲಿ ಮತ್ತು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ ಜೊತೆಗೂಡಿ ಶಾಲೆಯ ಪ್ರಾಂಶುಪಾಲೆ ಡಾ. ಭಾರತಿ ಪಾಟೀಲ್ ಮತ್ತು ಕೆಎಲ್ಇ ಆಸ್ಪತ್ರೆಯ ರಕ್ತ ಸಂಗ್ರಹಣಾ ಘಟಕದ ಪ್ರಬಂಧಕ ಎಸ್.ವಿ.ವಿರಗಿ ಮತ್ತು ಸಿಬ್ಬಂದಿಗಳ ಸಹಾಯದಿಂದ ಶಿಬಿರವನ್ನು ಯಶಸ್ವಿಗೊಳಿಸಲಾಯಿತು.
ಫೋಟೋ: 1ಮಾಂಜರಿ3
ವೈದ್ಯರ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಸಿಬ್ಬಂದಿ