ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ರಚನೆ ಕಾರ್ಯಕ್ರಮ
ಹೊಸಪೇಟೆ 07: ಹೊಸಪೇಟೆ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಯಾತ್ರಿ ನಿವಾಸದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಮಾ. 07ರಂದು ಬೆಳಿಗ್ಗೆ ನೂತನ ವಿಜಯನಗರ ಜಿಲ್ಲಾ ಸಮಿತಿ ರಚನೆ ಹಾಗೂ ಮಹಿಳಾ ದಿನಾಚರಣೆ ನಿಮಿತ್ತ ಶೋಷಿತ ಸಮುದಾಯದ ಧ್ವನಿ, ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆಯವರ ನೆನಪಿನ ಅಂಗವಾಗಿ ಅವರ ಕುರಿತು ವಿಚಾರಗೋಷ್ಠಿಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಮುಖ್ಯ ಉದ್ಘಾಟಕರಾಗಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಹೆಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿ ರವರು ಭಾಗವಹಿಸಿ ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಸ್ತಕ ವಿತರಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ವೇಳೆ ಅವರು ಮಾತಾನಾಡಿ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂಬ ಬಿರುದನ್ನು ಪಡೆದ ಇವರನ್ನು ಅಕ್ಷರದವ್ವ ಎಂದು ಕರೆಯುತ್ತಾರೆ ಸಾವಿತ್ರಿಬಾಯಿ ಪುಲೆ ಯವರು ದಮನಿತರ ಪರ ನಿಂತ ಮೊದಲ ಧ್ವನಿಯಾಗಿದ್ದಾರೆ, ಈಗ ಅವರನ್ನು ನಾವು ಕಂಡಿಲ್ಲದಿದ್ದರೂ ಅವರು ಮಾಡಿದ ಸಮಾಜ ಸುಧಾರಣಾ ಕಾರ್ಯಗಳು ಇಂದಿಗೂ ನಮ್ಮ ಕಣ್ಣ ಮುಂದೆ ಇವೆ, ಶೋಷಿತರ ಪರ ನಿಂತು ಅವರ ಅಕ್ಷರದ ಹಸಿವನ್ನು ನೀಗಿಸಿದ ಮಹಾತಾಯಿ ಸಾವಿತ್ರಿಬಾಯಿ ಪುಲೆಯವರು. 19ನೇ ಶತಮಾನದ ಸಾಮಾಜಿಕ ಅನಿಷ್ಟಗಳಾದ ಸತಿ ಪದ್ದತಿ, ಬಾಲ್ಯ ವಿವಾಹ ಪದ್ಧತಿ, ವಿಧವಾ ಹಿಂಸಾ ಪದ್ಧತಿಯಂತಹ ಅನೇಕ ನಿಕೃಷ್ಟ ಪದ್ದತಿಗಳನ್ನು ಹೋಗಲಾಡಿಸಿ ಶಿಕ್ಷಣದಲ್ಲಿಯೂ ಸಹ ಸಮಾನತೆಯನ್ನು ತಂದರು ನಂತರ ಅವರೇ ಯಾರಾ ಸಹಾಯವಿಲ್ಲದೆ ಸ್ವತಃ ಶಾಲೆಗಳನ್ನು ತೆರೆದು ಅನೇಕರಿಗೆ ವಿದ್ಯಾರ್ಜನೆ ಮಾಡಿದರು ಇಂತವರ ಜೀವನವು ನಮಗೆಲ್ಲಾ ಮಾರ್ಗದರ್ಶಿಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ಸೋಮಕ್ಕ, ಚಿಂತಕರು, ಸಂಘಟನಾ ಸಂಚಾಲಕರುಗಳಾದ ಗ್ಯಾನಪ್ಪ ಬಡಿಗೇರ, ಯಲ್ಲಪ್ಪ ಹಳೆಮನೆ, ರಾಜ್ಯ ಸಮಿತಿ ಸದಸ್ಯರಾದ ಚಿದಾನಂದ, ತಾಲೂಕು ಸಂಚಾಲಕರಾದ ಗೋಪಿನಾಥ್, ಮಹಿಳಾ ಒಕ್ಕೂಟದ ತಾಲೂಕು ಸಂಚಾಲಕರಾದ ವಿ.ಯಮೂನಮ್ಮ, ದೇವರಾಜ್ ಆರ್ ಭಾಸ್ಕರ್ ರಾಮ್ ಇನ್ನೂ ಹಲವಾರು ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.