ಮನರಂಜನೆ

"ತಲೈವಿ" ದರ್ಶನಕ್ಕೆ ದಿನಗಣನೆ

"ತಲೈವಿ" ದರ್ಶನಕ್ಕೆ ದಿನಗಣನೆ


ಬೆಂಗಳೂರು/ಚೆನ್ನೈ, ಸೆ.06 : ಬಾಲಿವುಡ್ ಕ್ವೀನ್ ಕಂಗನಾ ರನೋತ್ ಅಭಿನಯದ ತಲೈವಿ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. 


ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಜೀವನಾಧಾರಿತ ಚಿತ್ರವು ಇದೇ 10ರಂದು ಬಿಡುಗಡೆಯಾಗಲಿದ್ದು, ಇನ್ನು ನಾಲ್ಕೇ ದಿನ ಬಾಕಿಯಿದೆ. ಕಳೆದ ಕೆಲ ದಿನಗಳಿಂದ ಕಂಗನಾ ರನೋತ್ ಹಾಗೂ ಚಿತ್ರತಂಡ ಬಿರುಸಿನ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ಕಂಗನಾ. ಜಯಲಲಿತಾ ಅವರ ಜೀವನಾಧಾರಿತ ಸಿನಿಮಾದ ಮೇಲೆ ಕಂಗನಾ ಹಾಗೂ ಚಿತ್ರತಂಡ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ಹಾಡು, ಪೋಸ್ಟರ್​ ಹಾಗೂ ವಿಡಿಯೋ ತುಣುಕುಗಳೂ ಸಹ ತಲೈವಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.  ಕಳೆದ ಶನಿವಾರಷ್ಟೆ ಕಂಗನಾ ಹಾಗೂ ತಲೈವಿ ನಿರ್ದೇಶಕ  ಎ. ಎಲ್​. ವಿಜಯ್​ ಅವರು ದಿ. ಜೆ. ಜಯಲಲಿತಾ ಅವರ ಸ್ಮಾರಕಕ್ಕೆ ಭೇಟಿಯಿತ್ತು ಪುಷ್ಪ ನಮನ ಸಲ್ಲಿಸಿದ್ದರು. ಜೊತೆಗೆ ಎಂಜಿಆರ್​ ಅವರ ಸ್ಮಾರಕಕ್ಕೂ ಪುಷ್ಪಗುಚ್ಛ ಸಮರ್ಪಿಸಿದ್ದರು. 

ಸುದ್ದಿ ಓದಿ