ಮುಂದಗೋಡ

ಸಮಾಜಕ್ಕೆ ತನ್ನದೆ ಆದ ಕೊಡುಗೆ ಕೊಟ್ಟ ಮಹಾನ್ ಸಾಧಕಿ ಶಿವಶರಣೆ ಅಕ್ಕಮಹಾದೇವಿ: ಬಸವೇಶ್ವರಿ

ಸಮಾಜಕ್ಕೆ ತನ್ನದೆ ಆದ ಕೊಡುಗೆ ಕೊಟ್ಟ ಮಹಾನ್ ಸಾಧಕಿ ಶಿವಶರಣೆ ಅಕ್ಕಮಹಾದೇವಿ: ಬಸವೇಶ್ವರಿ

ಲೋಕದರ್ಶನ ವರದಿ

ಮುಂಡಗೋಡ:ಗಂಡು ಹೆಣ್ಣು ಎಂಬ ಭೇದಭಾವವಿಲ್ಲದೆ ಐಹಿಕ ಪ್ರಪಂಚವನ್ನು ಯಾವ ಹಂಗಿಲ್ಲದೆ ತೊರೆದು ಸಮಾಜಕ್ಕೆ ತನ್ನದೆ ಆದ ಕೊಡುಗೆ ಕೊಟ್ಟ ಮಹಾನ್ ಸಾಧಕಿ ಶಿವಶರಣೆ ಅಕ್ಕಮಹಾದೇವಿ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.

ಪಟ್ಟಣದ ನಂದೀಶ್ವರ ನಗರದ ವೀರಭದ್ರಪ್ಪ ಐಹೊಳೆ ಅವರ ಮನೆಯಲ್ಲಿ ಗುರುವಾರ ಸಂಜೆ ಜರುಗಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದವರು. ಕಲ್ಯಾಣದತ್ತ ಪಯಣ ಬೆಳೆಸಿ ಬದುಕಿನ ಮಾರ್ಗವನ್ನು ಅನುಭವ ಮಂಟಪದಲ್ಲಿ ಪಡೆದವರು.  ತಾನು ಅನುಭವಿಸಿದ ಹಲವಾರು ಬದುಕಿನ ಜಟಿಲತೆಗಳು, ಬದುಕಿಗೆ ಹೊಂದಿಕೊಂಡ ಸೂತ್ರಗಳನ್ನು, ಲಿಂಗಾಚರಣೆ, ಕಾಯಕ, ದಾಸೋಹ ಪಾಲಿಸಿಕೊಂಡು ಬಂದ ಇತಿಹಾಸದ ಶಿವ ಶರಣೆ. ತನ್ನ ಮನೋಸಂಕಲ್ಪಕ್ಕೆ ವಿರುದ್ಧವಾದ ಯಾವ ಆಚರಣೆಯನ್ನು ಕೂಡ ಮಾಡದೆ ಬದುಕಿನಲ್ಲಿ ಸಾರ್ಥಕತೆ ಕಂಡುಕೊಂಡ ಹಲವಾರು ನಿದರ್ಶನಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ ಎಂದರು. 

ಈ ವೇಳೆ ಪಾಂಡುರಂಗ ಟಿಕ್ಕೋಜಿ, ಅನ್ನಪೂರ್ಣ ಅಂಕಲಕೋಟಿ, ದಯಾನಂದ ನಾಯ್ಕ, ದಿಲೀಪ್ ಶರ್ಮ, ಎಂ.ಬಿ.ಲಿಂಗದಾಳ, ಎಸ್.ಕೆ.ಕೋಳೂರು, ಎಸ್.ಬಿ.ಹೂಗಾರ, ದಿನೇಶ ವೆರ್ಣೇಕರ್, ವಿನಾಯಕ ಶೇಟ್, ಪ್ರಕಾಶ ಮೊಸಳಗಿ, ಶ್ರೀಶೈಲ ಐನಾಪುರ, ಬಿ.ಕೆ.ಪಾಟೀಲ, ಸುಭಾಸ ಡೋರಿ, ಉಪಸ್ಥಿತರಿದ್ದರು. ನೇಹಾ ಐಹೊಳೆ ಅಕ್ಕಮಹಾದೇವಿ ಛದ್ಮವೇಷ ಧರಿಸಿದ್ದರು 

ಸುದ್ದಿ ಓದಿ