ತಾಳಿಕೋಟಿ

ಮುದ್ದೇಬಿಹಾಳ ಮತಕ್ಷೇತ್ರಕ್ಕೆ ನಿಮ್ಮ ಶಾಶ್ವತ ಕೊಡುಗೆ ಏನು?: ಮಾಜಿ ಸಚಿವ ನಾಡಗೌಡ ವಾಗ್ದಾಳಿ

ಮುದ್ದೇಬಿಹಾಳ ಮತಕ್ಷೇತ್ರಕ್ಕೆ ನಿಮ್ಮ ಶಾಶ್ವತ  ಕೊಡುಗೆ ಏನು?: ಮಾಜಿ ಸಚಿವ ನಾಡಗೌಡ ವಾಗ್ದಾಳಿ
ಮಾಜಿ ಸಚಿವ ಸಿ.ಎಸ್.ನಾಡಗೌಡ

ತಾಳಿಕೋಟೆ19: ಮುದ್ದೇಬಿಹಾಳ ಮತಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ ಶಾಸ್ವತವಾದ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ನನ್ನ ಅವಧಿಯಲ್ಲಿ ಮಾಡಿದ ಶೇ.10 ಕೆಲಸ ನಿಮ್ಮ ಅವಧಿಯಲ್ಲಿ ಮಾಡಿಲ್ಲ. ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದಪಡಿಸಿದರೆ ದಾಖಲೆಗಳನ್ನು ತೋರಿಸುತ್ತೇನೆ. ಸುಳ್ಳು ಹೇಳುವದನ್ನ ನಿಲ್ಲಿಸಿ. ಮುದ್ದೇಬಿಹಾಳ ಮತಕ್ಷೇತ್ರಕ್ಕೆ ನಿಮ್ಮ ಶಾಸ್ವತವಾದ ಯೋಜನೆ ಯಾವದು ಎನ್ನುವದನ್ನು ತಿಳಿಸಲಿ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಬಹಿರಂಗ ಸವಾಲ ಹಾಕಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಮಾಡಿದ ಅವಧಿಯ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಿರಿ. ಪಡೆಕನೂರ, ಇಂಗಳಗೇರಿ, ಹೊಕ್ರಾಣಿ, ತಮದಡ್ಡಿ, ಬಸರಕೋಡ ಕೆರೆ ನೀರು ತುಂಬಿದ್ದು, ನಾಲತವಾಡ, ಮುದ್ದೇಬಿಹಾಳ, ತಾಳಿಕೋಟೆ ಬಸ್ ನಿಲ್ದಾಣ ನಿಮರ್ಾಣ, ಪುರಸಭೆ ಕಾರ್ಯಾಲಯ, ವ್ಯಾಪಾರ ಮಳಿಗೆಗಳು, ಕೋರ್ಟ ಕಟ್ಟಡ, ಮಿನಿ ವಿಧಾನ ಸೌಧ, ಬೂದಿಹಾಳ ಪಿರಾಪೂರ, ನಾಗರಬೆಟ್ಟ ಏತ ನೀರಾವರಿ, ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳು, ರಾಜ್ಯ ಹೆದ್ದಾರಿಗಳು, ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿ ಸೇತುವೆ ಸೇರಿದಂತೆ ಹಲವು ಶಾಸ್ವತ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ನಿಮ್ಮ ಅವಧಿಯಲ್ಲಿ ಸಿಸಿ ರಸ್ತೆಗಳನ್ನು ಬಿಟ್ಟರೆ ಏನು ಅಭಿವೃದ್ಧಿ ಮಾಡಿದ್ದಿರಿ ಹೇಳಿ, ಒಂದು ಏಕರೆ ನೀರಾವರಿ ಹೆಚ್ಚಿಸಿದ ನೀವು ಅಭಿವೃದ್ಧಿ ಹರಿಕಾರು ಎಂದು ಹೇಳಿಕೊಂಡು ತಿರುಗಾಡುತ್ತೀರಿ. ತಾಳಿಕೋಟೆ, ಮುದ್ದೇಬಿಹಾಳ ನಾಲತವಾಡ ಪಟ್ಟಣಗಳಿಗೆ 24*7 ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಆದರೂ ಸಹ ಇನ್ನುವರೆಗೂ ಆರಂಭಿಸಿಲ್ಲ ಯಾಕೆ?. 2014 ರಲ್ಲಿಯೇ ತಾಳಿಕೋಟೆ ವಿದ್ಯುತ್ ಘಟಕ ಉದ್ಘಾಟನೆ ಆಗಿದೆ. ಅದು ಜನ ಸಾಮಾನ್ಯರಿಗೂ ಗೊತ್ತು ಆದರೆ ನೀವು ನಾಲತವಾಡದಲ್ಲಿ ಮತ್ತೊಮ್ಮೆ ಉದ್ಘಾಟನೆ ಮಾಡಲು ಹೊರಟಿರುವದು ಹಾಸ್ಯಾಸ್ಪದವಾಗಿದೆ. ನಿಮ್ಮ ಅಧಿಯಲ್ಲಿ ಒಂದು ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದಾರಾ?. ನೂತನ ಆಸ್ಪತ್ರೆ ಸ್ಥಾಪಿಸಿದ್ದಿರಾ? ಯಾವ ಕಾಲೇಜುಗಳನ್ನು ಮಂಜೂರಿಸಿಕೊಂಡಿದ್ದಾರೆ.  ವಸತಿ ಶಾಲೆಗಳು, ಆಟಿಆಯ್ ಕಾಲೇಜು, ಡಿಪ್ಲೋಮಾ ಕಾಲೇಜು ಮಾಡಿದ್ದಾರಾ? ಮತಕ್ಷೇತ್ರದಲ್ಲಿ ನಿಮರ್ಾಣವಾಗುತ್ತಿರುವ ಮಹಾಪುರುಷರ ಮೂರ್ತಿಗಳು ಪುರಸಭೆ ಅನುದಾನದಲ್ಲಿ. ಆದರೆ ನೀವು ಹೇಳುತ್ತಿರುವದು ಸ್ವಂತ ಹಣದಲ್ಲಿ ಅಂತಾ. ಯಾಕೆ ಸುಳ್ಳು ಹೇಳುತ್ತಿರಿ. ಯಾವ ಮುಖ್ಯಾಧಿಕಾರಿಗಳಿಗು ಕಾನೂನು ಜ್ಞಾನ ಇಲ್ಲ. ಪುರಸಭೆ ಸದಸ್ಯರಿಗೆ, ಅಧ್ಯಕ್ಷರಿಗೆ ಅಧಿಕಾರ ಕೊಡುವದಿಲ್ಲ. ಎಲ್ಲವನ್ನು ನೀವೇ ಮಾಡುತ್ತಿರಿ. ಪಟ್ಟಣದಲ್ಲಿ ಸಬ್ ರೀಜಿಸ್ಟಾರ್ ಕಚೇರಿ ತೆರೆಯಲು 2014 ರಿಂದಲೇ ಪ್ರಕ್ರೀಯೇ ಆರಂಭಿಸಲಾಗಿತ್ತು. ಈಗ ಮಂಜೂರಾಗಿದೆ. ತಾಲೂಕು ಕೇಂದ್ರಕ್ಕೆ ನಿಮ್ಮ ಯಾವ ಕಟ್ಟಡಗಳು ಕಟ್ಟಿದ್ದಿರಿ, ಯಾವ ಕಚೇರಿಗಳು ಆರಂಭಿಸಿರಿ, ಡೋಣಿ ನದಿಗೆ ಸೇತುವೆ ಕುಸಿದು ಎರಡು ವರ್ಷವಾದರೂ ಸಹ ಸೇತುವೆ ಮಂಜೂರು ಆಗಿಲ್ಲ. ಕೆಳಗಡೆ 2 ಕೋಟಿ ವೆಚ್ಚದಲ್ಲಿ ರಸ್ತೆ ಮಾಡಿಸಿದ್ದಿರಿ. ಅದರಲ್ಲಿ ಸೇತುವೆ ದುರಸ್ಥಿ ಮಾಡಬಹುದಿತ್ತು. ಮೂಕಿಹಾಳ ಬಳಿ ಸೋಗಲಿ ಸೇತುವೆ ಒಂದು ಮಳೆಗೆ ಕೊಚ್ಚಿ ಹೋಗಿದ್ದು ನಿಮ್ಮ ಶೇ.40 ಕಮಿಷನ್ಗೆ ಉದಾಹರಣೆಯಾಗಿದೆ. ನಿಮ್ಮ ಪಕ್ಷದವರೆ ನಿಮ್ಮ ಕಮಿಷನ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಕರೋನಾದಲ್ಲಿಯೂ ಸಹ ಅಧಿಕಾರಿಗಳಿಂದ, ಗುತ್ತಿಗೆದಾರರಿಂದ ಹಣ ಎತ್ತಿ ಕಿಟ್ ವಿತರಣೆ ಮಾಡಿದ್ದಿರಿ. ಯುವ ಸಂಕಲ್ಪ ಯಾತ್ರೆಯಲ್ಲಿ ಹಣ ವಸೂಲಿ ಮಾಡಿದ್ದಾರೆ. ಬಿಜೆಪಿ ಧ್ವಜ ಕಟ್ಟಿಸಿಕೊಳ್ಳದವರಿಗೆ ಪೊಲೀಸ್ ಕೇಸ್ ಹಾಕಿಸಿದ್ದಾರೆ. ಧಾರ್ಮಿಕ ಕಾರ್ಯದಲ್ಲಿಯೂ ಸಹ ರಾಜಕೀಯ ಮಾಡಿದ್ದಿರಿ. ಶ್ರೀಶೈಲ ಜಗದ್ಗುರುಗಳ ಕಾರ್ಯಕ್ರಮದಲ್ಲಿ ಸಹ ದುಡ್ಡು ಸಂಗ್ರಹ ಮಾಡಿದ್ದಿರಿ. ಅಪವಿತ್ರ ದುಡ್ಡು ತೆಗೆದುಕೊಂಡು ಜಗದ್ಗುರುಗಳಿಗೆ ಮೋಸ ಮಾಡಿದ್ದಾರೆ. ಅಂಗನವಾಡಿ ಮಕ್ಕಳ ಆಹಾರದಲ್ಲಿ ಕಳಪೆ ಮಟ್ಟದ ಆಹಾರ ಪೂರೈಸಿ ಮಕ್ಕಳಿಗೆ ವಿಷವನ್ನು ಉಣಿಸಿದ್ದಿರಿ. ಯಾರು ಹಣ ನೀಡುವದಿಲ್ಲ ಅವರಿಗೆ ಬೆದರಿಕೆ ಹಾಕಿದ್ದಿರಿ. ರಾತ್ರಿ ಪೋನ್ ಮಾಡಿ ಕಾರ್ಯಕರ್ತರಿಗೆ ಹೆದರಿಸುವ ಕಾರ್ಯ ಮಾಡುತ್ತಿರಿ. ವ್ಯಾಪಾರಸ್ಥರಿಗೆ ಹೆದರುಸುತ್ತಿರಿ. ಮನಸ್ಸಿನಲ್ಲಿ ಕೊಳಕು ತುಂಬಿಕೊಂಡು ವ್ಯಕ್ತಿ ನೀವಾಗಿದ್ದಿರಿ. ಜನಸೇವೆ ಮಾಡುವ ವ್ಯಕ್ತಿಯ ವಿಶಾಲ ಹೃದಯ ಇರಬೇಕು. ತಾಳಿಕೋಟೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ 1000 ಜನ ಇದ್ದಿಲ್ಲ. ಜನ ಉತ್ತರಿಸಿದ್ದರೂ ಸಹಿತ ನಿಮ್ಮ ಗರ್ವ ಇಳಿದಿಲ್ಲ.  ಸುಳ್ಳು ಆಸ್ವಾಸನೆಗಳಿಗೆ ಬೆಲೆ ನೀಡಬೇಡಿ. ಎಸ್.ಸಿ.ಪಿ ಟಿಎಸ್.ಪಿ ಅನುದಾನ ಎಲ್ಲಿ ಹೋಯಿತು. ಸಿಸಿರಸ್ತೆ ಮಾಡಿದರೆ ಮುಗಿತಾ, ವಿದ್ಯಾಭ್ಯಾಸ, ಉದ್ಯೋಗಕ್ಕೆ, ಆರೋಗ್ಯಕ್ಕೆ ಏನು ಮಾಡಿದ್ದಾರೆ. ಇವರಷ್ಟು ದುಡ್ಡು ಯಾರು ತಂದಿಲ್ಲಾ ಅಂತಾ ಮಂತ್ರಿಗಳು ಹೇಳುತ್ತಾರೆ. 35 ಸಾವಿರ ಕೋಟಿ ಅಂತಾ ಹೇಳುತ್ತಾರೆ. ಲೆಕ್ಕ ಕೊಡಿ. ಕಾಂಗ್ರೆಸ್ ಪಕ್ಷ ಸುಳ್ಳ ಆಶ್ವಾಸನೆಗಳನ್ನು ನೀಡುವದಿಲ್ಲ. ಕೊಟ್ಟ ಭರವಸೆಯಂತೆ ನಡೆದುಕೊಂಡಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವದು ನಿಶ್ಚಿತ. ಆಗ ಮುದ್ದೇಬಿಹಾಳದಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸುತ್ತೇನೆ. ಅವ್ಯವಹಾರದಲ್ಲಿ ಭಾಗವಹಿಸಿದ ಅಧಿಕಾರಿಗಳು, ಗುತ್ತಿಗೆದಾರರನ್ನು ಕೃಷ್ಣನ ಆಸ್ಥಾನಕ್ಕೆ ಕಳಿಸುವದು ನಿಶ್ಚಿತ ಎಂದರು.

ಬ್ಕಾಲ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ವಿಜಯಸಿಂಗ ಹಜೇರಿ, ಮಲ್ಲನಗೌಡ ಯಾತಗಿರಿ, ಮಾಸುಮ ಕೆಂಬಾವಿ, ಸಿದ್ದನಗೌಡ ಪಾಟೀಲ, ಬಸನಗೌಡ ಜೈನಾಪೂರ, ಕಾತರ್ಿಕ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.



ಸುದ್ದಿ ಓದಿ