ಬಳ್ಳಾರಿ ಜಿಪಂ ಮಾಜಿ ಸಿಇಒ ನೆತ್ತಿಯ ಮೇಲೆ ಅಕ್ರಮ ಆರೋಪದ ತೂಗುಗತ್ತಿ
ಬಳ್ಳಾರಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ದಿಢೀರನೆ ಬೇರೆಡೆಗೆ ವರ್ಗಾವಣೆಗೊಂಡ ಮಾಜಿ ಸಿಇಒ ಕೆ.ನಿತೀಶ್ ಅವರ ನೆತ್ತಿಯ ಮೇಲೆ ಅಕ್ರಮದ ತೂಗುಗತ್ತಿ ನೇತಾಡುತ್ತಿದೆ.ಬಳ್ಳಾರಿ ಜಿಪಂನ ಸಿಇಒ ಆಗಿ ಕಾರ್ಯನಿರ್ವಹಿಸಿದ ಕೆ.ನಿತೀಶ್ ಅವರ ಅಧಿಕಾರದ ಅವಧಿಯಲ್ಲಾದ ಅಕ್ರಮಗಳ ಬಗ್ಗೆ ಆರೋಪ ಸಾಬೀತು ಆದ್ರೆ ರಾಜ್ಯ ಸರ್ಕಾರ ಕೈಗೊಳ್ಳುವ ಶಿಸ್ತು ಕ್ರಮಕ್ಕೆ ಕೆ.ನಿತೀಶ್ ಒಳಗಾಗುವ ಸಾಧ್ಯತೆ ಇದೆ. ರಾಣೆಬೆನ್ನೂರಿನ ಎಂ.ಪಿ.ಎಂ.ಶಿವಾನಂದ ಎಂಬುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಡಿ.ನಾಗೇಂದ್ರ ಅವರಿಗೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾಗ ಮಾಜಿ ಸಿಇಒ ಕೆ.ನಿತೀಶ್ ನಡೆಸಿರುವ ಅಕ್ರಮಗಳ ಕುರಿತು ದೂರು ನೀಡಿದ್ದಾರೆ.
ದೂರುದಾರರು ದೂರು ಲಗತ್ತಿಸಿರೋದರ ಕುರಿತು ಮಾಹಿತಿ ನೀಡಿರುವ ಪ್ರತಿ ಲೋಕದರ್ಶನ ಪತ್ರಿಕೆಗೆ ಲಭ್ಯವಾಗಿದೆ.ಮಾಜಿ ಸಿಇಒ ಕೆ.ನಿತೀಶ್ ಅಧಿಕಾರ ಅವಧಿಯಲ್ಲಿ ನಡೆದಿರೋ ಅಕ್ರಮಗಳಾದ್ರೂ ಏನೆಂಬುದನ್ನು ದೂರುದಾರ ಶಿವಾನಂದ ಅವರೇ ಹೇಳಬೇಕಾಗಿದೆ. ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿ ಅವರಿಗೂ ಈ ಪ್ರತಿಯನ್ನು ನೀಡಿದ್ದಾರೆ. ಅಕ್ರಮ ನಡೆಸಿರುವುದು ಸಾಬೀತಾದಲ್ಲಿ ಶಿಸ್ತು ಕ್ರಮ ಜರುಗಿಸುವಂತೆ ಶಿವಾನಂದ ದೂರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ .