ಹುಂಡೇಕರ್ ರಾಜೇಶ್ ಹುಟ್ಟು ಹಬ್ಬ ಆಚರಿಸಿದ ಅಟೋ ಚಾಲಕರು
ಬಳ್ಳಾರಿ: ನಗರದ ಹಳೆ ಬಸ್ ನಿಲ್ದಾಣದ ಸಮೀಪದಲ್ಲಿ ಆಟೋ ಚಾಲಕರ ಸಂಘದವತಿಯಿಂದ ಬಳ್ಳಾರಿ ಜಿಲ್ಲಾ ಅಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಹುಂಡೇಕರ್ ರಾಜೇಶ್ ರವರ 36ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿದರು. ನಂತರ ಸ್ನೇಹಿತರು ಅಟೋ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಮ್ಮುಖದಲ್ಲಿ ಕೇಕನ್ನು ಕಟ್ ಮಾಡಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.
ಆಟೋ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ರಾಜೇಶ್ ನಮ್ಮ ಸಂಘಟನೆಯಲ್ಲಿರುವ ಚಾಲಕರು ಮತ್ತು ಮಾಲೀಕರು ಸೇರಿದಂತೆ ಪ್ರತಿಯೊಬ್ಬರು ನಿಯತ್ತಾಗಿ ಪ್ರಮಾಣಿಕ ಜೀವನ ನಡೆಸಬೇಕು. ಹಾಗೂ ಸಮಾಜದ ಜನರಿಗೆ ಸಮಯದ ಹಿತ ದೃಷ್ಟಿಯಿಂದ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಾವುಗಳು ಮಾನವೀಯ ಮೌಲ್ಯಗಳು ತೋರಿ ಸಾರ್ವಜನಿಕರಲ್ಲಿ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡು ಜೀವನವನ್ನು ನಡೆಸಬೇಕು. ನಮ್ಮ ಚಾಲಕರು ಪ್ರತಿಯೊಬ್ಬರು ಬಡವರು ತಮ್ಮ ಕುಟುಂಬವನ್ನು ನಿಭಾಯಿಸಲು ಬಹಳ ಕಷ್ಟಪಡುತ್ತಿದ್ದಾರೆ. ಸರ್ಕಾರದ ಕೆಲಸೌಲಭ್ಯಗಳನ್ನು ಬಳಸಿಕೊಂಡು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಮತ್ತು ಅತ್ಯಂತ ಮುಖ್ಯವಾಗಿ ಚಾಲಕರು ಕುಡಿತ, ಪಾನ್ ಮಸಾಲಾ, ಓ.ಸಿ ಇಸ್ಪಿಟ್ ಸೇರಿದಂತೆ ಯಾವುದೇ ದುಶ್ಬಟಗಳಿಗೆ ಬಲಿಯಾಗಿ ದಿನಪೂರ್ತಿ ದುಡಿದ ಹಣವನ್ನು ಕಳೆದುಕೊಳ್ಳಬಾರದೆಂದು ಕಿವಿ ಮಾತು ಹೇಳಿದರು. ನಿಮಗೇನಾದರೂ ತೊಂದರೆಯಾದಲ್ಲಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭರವಷೆ ನೀಡಿದರು.ಬೆಂಬಲಿಗರಾದ ಕೆ ನಾಗರಾಜ್ ರಹಿಂ ಮಿಥುನ್ ಧನಂಜಯ, ಪವನ್ ಮತ್ತು ಆಟೋ ಚಾಲಕರ ಸಂಘದ ಸ್ಟ್ಯಾಂಡ್ ಲೀಡರ್ ಡಿ ಗಾದಿಲಿಂಗಪ್ಪ,ಮಾರಣ್ಣ, ಶೇಖಣ್ಣ, ಸುಂಕಣ್ಣ, ನಾಗರಾಜ, ಉಪೇಂದ್ರ, ಬಿ ಎಸ್ ರವಿಕುಮಾರ್, ಜಯರಾಮ್ ಸೇರಿದಂತೆ ಹಲವಾರು ಚಾಲಕರಿದ್ದರು.