ಬಳ್ಳಾರಿ

ಗಂಡ ಹೆಂಡಿರೆಂದರೆ ಬದುಕಿನ ಬಂಡಿಯ ಎರಡು ಗಾಲಿಗಳು ಇದ್ದಂತೆ

ಗಂಡ ಹೆಂಡಿರೆಂದರೆ ಬದುಕಿನ ಬಂಡಿಯ ಎರಡು ಗಾಲಿಗಳು ಇದ್ದಂತೆ

ಬಳ್ಳಾರಿ 21: ಗಂಡ ಹೆಂಡಿರೆಂದರೆ ಬದುಕಿನ ಬಂಡಿಯ ಎರಡು ಗಾಲಿಗಳು ಇದ್ದಂತೆ. ಗಾಲಿಗಳು ಸಮನಾಗಿದ್ದರೆ, ಪಯಣ ಸುಖಮಯವಾಗಿರುತ್ತದೆ. ಸುಖ ಪಯಣಕ್ಕೆ ಬಂಡಿಯ ಗಾಲಿಗಳು ಪ್ರಧಾನವಾದಂತೆ, ಸುಖ ಸಂಸಾರದಲ್ಲಿ ದಂಪತಿಗಳ ಪಾತ್ರ ಅಷ್ಟೇ ಮುಖ್ಯವಾದುದು ದೆಂದು ನಿವೃತ್ತ ಆರಕ್ಷಕ ಅಧಿಕಾರಿ ನಾಗರಾಜ್  ರವರು ನುಡಿದರು.

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಗುಗ್ಗರಹಟ್ಟಿಯಲ್ಲಿ ಆಯೋಜಿಸಿದ್ದ 273ನೇ ಮಹಾಮನೆ, ಲಿಂ. ಬಿ.ಎಂ.ಬಸವರಾಜ ದತ್ತಿ, ಲಿಂ. ಫಕೀರಪ್ಪ ತಲವಾರ ದತ್ತಿ ಮತ್ತು ಚಿಲಗೋಡು ತಗ್ಗಿನಕೇರಿ ಮಠದ ಲಿಂ. ಚನ್ನಬಸಯ್ಯ ದಂಪತಿಗಳ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡುತ್ತ ಶರಣರ ಆದರ್ಶ ದಾಂಪತ್ಯ ಇಂದು ನಮಗೆ ಮಾದರಿಯಾಗಿದೆ ಎಂದರು. ಗುಗ್ಗರಹಟ್ಟಿಯ 5ನೇ ವಾರ್ಡ್ನಲ್ಲಿ ವನಜಾಕ್ಷಿ ಯವರ ಮಗಳು ಎಂ.ಭವಾನಿಯ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಆದರ್ಶ ದಾಂಪತ್ಯ ಕುರಿತ ಸತಿಪತಿಗಳೊಂದಾದ ಭಕ್ತಿ ವಿಷಯ ಕುರಿತು ಸತ್ ಚಿಂತನೆ ನಡೆಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ಎಸ್,ಪಿ,ಹೊಂಬಳ ರವರು ಸತಿಪತಿಗಳು ಪರಸ್ಪರ ಅರಿತು, ಭಾವನೆಗಳನ್ನು ಗೌರವಿಸುವುದರಿಂದ ಬಾಂಧವ್ಯ ಗಟ್ಟಿಗೊಳ್ಳುತ್ತದೆ ಎಂದರು.

ವೀರಾಂಜನೇಯ ದೇವಸ್ಥಾನ ಭಕ್ತಿ ಮಂಡಳಿ ಮಹಿಳೆಯರು ವಚನ ಪ್ರಾರ್ಥನೆ ಮಾಡಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಪರಿಚಯಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀರಾಂಜನೇಯ ದೇವಸ್ಥಾನ ಭಕ್ತಿ ಮಂಡಳಿ ಅಧ್ಯಕ್ಷೆ ಅಂಜಿನಮ್ಮ ಅತಿಥಿ ನುಡಿಗಳನ್ನಾಡಿದರು. ಶಾಲಾ ಸುಧಾರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ನವದಂಪತಿಗಳಾದ ಭವಾನಿ ಶ್ರೀಕಾಂತ್ರಾವ್ ರವರನ್ನು ಹರಸಿ ಸನ್ಮಾಸುವ ಮೂಲಕ ಕಾರ್ಯಕ್ರಮ ಮಂಗಲವಾಯಿತು 

ಸುದ್ದಿ ಓದಿ