ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಶಾಸಕ ನಡಹಳ್ಳಿ ಚಾಲನೆ
ತಾಳಿಕೋಟಿ: ಇಂದು ದೇಶಿಯ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಖೋಖೋ ಹಾಗೂ ಓಟದ ಸ್ಪರ್ಧೆಗಳು ನಶಿಸಿಹೋಗುತ್ತಿವೆ. ಅವುಗಳನ್ನು ಉಳಿಸಿ ಬೆಲೆಸುವ ಅಗತ್ಯ ಇದೆ ಎಂದು ಶಾಸಕ ಹಾಗೂ ಅಧ್ಯಕ್ಷ ಕರ್ನಾಟಕ ಆಹಾರ ನಿಗಮ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಬುಧವಾರ ಪಟ್ಟಣದಲ್ಲಿ ಹಜರತ್ ಬಾವಾ ಪ್ಯಾರೆ ಉರುಸು ಅಂಗವಗಿ ಕಮೀಟಿ ವತಿಯಿಂದ ಹಮ್ಮಿಕೊಂಡ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಸೂಫಿ ಸಂತರ ದೇಶ, ಸಮಾಜದ ಎಲ್ಲ ವರ್ಗದವರ ಮಧ್ಯೆ ಶಾಂತಿ ಸಾಮರಸ್ಯ ಮೂಡಿಸಲು ಈ ಮಹಾನ್ ಶರಣರು ಹಲವಾರು ತ್ಯಾಗಗಳನ್ನು ನೀಡಿ ಕೆಲಸ ಮಾಡಿದ್ದಾರೆ. ಅವರು ಹಾಕಿಕೊಟ್ಟ ಶಾಂತಿಯ ಹಾದಿಯಲ್ಲಿಯೇ ನವೆಲ್ಲರೂ ಮುನ್ನಡೆಯಬೇಕಗಿದೆ. ಮಹಾನ್ ಶರಣ ಬಾವಾ ಪ್ಯಾರೆ ಅವರು ತೋರಿಸಿಕೊಟ್ಟ ಶಾಂತಿಯ ಹಾದಿಯಲ್ಲಿಯೇ ನಾವೆಲ್ಲರೂ ನಡೆದಾಗ ಈ ಆಚರಣೆಗಳಿಗೊಂದು ಅರ್ಥ ಬರುತ್ತದೆ ಎಂದರು.
ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರನ್ನು ಉರುಸು ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಬಾವಾ ಪ್ಯಾರೆ ಉರುಸು ಸಮೀತಿಯ ಗೌರವ ಅಧ್ಯಕ್ಷ ಗೈಬೂಶಾ ನಿರಂಜನಶಾ ಮಕಾನದಾರ, ಬಿಜೆಪಿ ಅಲ್ಪಸಂಖ್ಯಾತ ಮುಖಂಡ ನಿರಂಜನಶಾ ಮಕಾನದಾರ, ಡಿಸಿಸಿ ಬ್ಯಾಂಕ ನಿರ್ದೇಶಕ ಸೋಮನಗೌಡ ಬಿರಾದಾರ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಜಯಸಿಂಗ್ ಮೂಲಿಮನಿ, ಯುವ ದುರೀಣ ಮಹೆಬೂಬ ಲಾಹೋರಿ, ಖ್ಯಾತ ವರ್ತಕ ರಾಜು ಹಂಚಾಟೆ, ಹಾಶೀಮಶಾ ಮಕಾನದಾರ, ಆದಮ್ಶಾ ಮಕಾನದಾರ, ಸಲಿಂ ಮಕಾನದಾರ, ಟಿಪುಶಾ ಮಕಾನದಾರ, ಉಸ್ಮಾನ ಪಟೇಲ, ಇಸ್ಮಾಯಿಲಶಾ ಮಕಾನದಾರ ಇದ್ದರು