ಅನ್ನದಾತನಿಗೆ ಎರಡು ಸಾವಿರ ಬರಗಾಲ ಪರಿಹಾರ ಘೋರ ಅವಮಾನ: ಮ್ಯಾಗೇರಿ
ಲೋಕದರ್ಶನ ವರದಿ
ಶಿಗ್ಗಾವಿ 07: ಮಳೆ ಬಿಸಿಲು ಸಿಡಿಲು ಗುಡುಗು ಲೆಕ್ಕಿಸದೆ ರಾತ್ರಿ ಹಗಲು ನಿದ್ರೆ ಇಲ್ಲದೆ ಬೆವರು ಸುರಿಸಿ ವಿಶ್ರಾಂತಿ ಇಲ್ಲದೆ ದುಡಿಯುತ್ತಿರುವ ಬರಗಾಲದಿಂದ ತತ್ತರಿಸಿರುವ ಅನ್ನದಾತನಿಗೆ ಎರಡು ಸಾವಿರ ಬರಗಾಲ ಪರಿಹಾರಕೊಡಲು ನಿರ್ಧರಿಸಿ ಕಾಂಗ್ರೆಸ್ ಸರಕಾರ ಘೋರ ಅವಮಾನ ಮಾಡಿದೆಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರೂಂದಿಗೆ ಮಾತನಾಡಿದ ಅವರು ರೈತರಿಗೆ ಸ್ಪಂದಿಸಿ ರೈತರ ಕಣ್ಣೀರೊರೆಸುವ ಸರಕಾರ ಇದಲ್ಲ ಇದು ರೈತರನ್ನು ಓಲೈಸಲು ನಾಟಕೀಯ ಮೊಸಳೆ ಕಣ್ಣೀರು ಸುರಿಸುವರೈತ ವಿರೋಧಿ ಸರಕಾರ ಎಂಬುದನ್ನು ಇಂತಹ ನಿಧರ್ಾರದ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದ ಅವರು ಕುಣಿಯಲು ಬಾರದೆ ನೆಲ ಡೊಂಕಿದೆ ಎಂಬ ಗಾದೆ ಮಾತಿನಂತೆಕುಂಟು ನೆಪವಡ್ಡಿ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುವುದರಲ್ಲಿ ಆರು ತಿಂಗಳ ಕಾಲ ಹರಣ ಮಾಡಿದ ಅಯೋಗ್ಯ ಕಾಂಗ್ರೆಸ್ ಸರಕಾರ ರಾಜೀನಾಮೆ ಕೊಟ್ಟು ಅಧಿಕಾರ ಬಿಟ್ಟುತೊಲಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ 6000 ಜೊತೆಗ ಕೊಡುವ ರೈತರಿಗೆ 4000 ಹಾಗೂ ಮುಖ್ಯಮಂತ್ರಿ ವಿದ್ಯಾ ನಿಧಿ ಯೋಜನೆಯಂತಹ ಅನೇಕ ಯೋಜನೆಗಳನ್ನು ಬಂದ್ ಮಾಡುವ ಮೂಲಕ ರೈತ ವಿರೋದಿ ಧೋರಣೆಯನ್ನು ತೋರಿಸಿದ್ದೀರಿ. ಕೇವಲ ಗ್ಯಾರೆಂಟಿಗಳ ಅನುಷ್ಠಾನ ಮಾಡುವುದರಲ್ಲಿ ಮಾತ್ರ ಆಡಳಿತ ಮಾಡುತ್ತಿರುವುದು ಬಿಟ್ಟರೆ ರಾಜ್ಯದ ಅಭಿವೃದ್ಧಿ ರಾಜ್ಯದ ಜನರು ನೆಮ್ಮದಿ ಯಿಂದ ಬದುಕುವುದು ಇವರಿಗೆ ಬೇಡವಾಗಿದೆ ಎಂದು ದೂರಿದರು. ಕಾಂಗ್ರೆಸ್ ದುರಾಡಳಿತವನ್ನು ಕಂಡು ಪಂಚ ರಾಜ್ಯ ಚುನಾವಣೆಯಲ್ಲಿ ಗ್ಯಾರೆಂಟಿಗೆ ಮೋಸ ಹೋಗದೆ ಎಚ್ಚೆತ್ತು ಜನರು ದಿಟ್ಟ ನಿರ್ಧಾರವನ್ನು ಮಾಡಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಠೇವಣಿ ಉಳಿಯದಂತೆ ಮಾಡುವ ಕಾಲ ಸಮೀಪಿಸಿದೆ ಎಂದರು