ಜಮಖಂಡಿ

ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಲೋಕದರ್ಶನ ವರದಿ,

ಜಮಖಂಡಿ 13: ತಾಲೂಕಿನ ಹುನ್ನೂರ ಗ್ರಾಮದ ಚಿಕ್ಕಾರ ಓಣಿಯ ಬಸವಣ್ಣದೇವರ ದೇವಸ್ಥಾನ ಗಾಣಿಗ ಸಮಾಜದ ಲೆಕ್ಕ ಪತ್ರದ ಪರಿಷ್ಕರಣೆ ಹಾಗೂ ಸಲಹೆ ಸೂಚನೆಗಳಿಗಾಗಿ ಸಭೆ ನಡೆಸಲಾಯಿತು

ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿವಿದ್ಯಾರ್ಥಿನಿಯರಿಗೆ ಗೌರವಿಸಿ ಸನ್ಮಾನಿಸಲಾಯಿತು. ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ನೀಡಿದಂತಾಯಿತು ಎಂದು ಸಮಾಜ ಹಿರಿಯ ಹೇಳಿದರು.

ಇದೇ ಸಂದರ್ಭದಲ್ಲಿ ಅಗಲಿದ ಪೂಜ್ಯ ಸಿದ್ಧೇಶ್ವರ ಅಪ್ಪಾಜಿ ಹಾಗೂ ಸಮಾಜದ ಹಿರಿಯರಾದ ಬಸವರಾಜ ಗಣಿ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ವರ್ಷದ ಲೆಕ್ಕ ಪತ್ರವನ್ನು ಪರಿಶೀಲಿಸುತ್ತ, ಸಮಾಜದ ಅಭಿವೃದ್ಧಿ ಕಾರ್ಯಗಳ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. ಅಲ್ಲದೇ ಸಮಾಜಕ್ಕಾಗಿ ಖಾಲಿ ಜಾಗೆಯೊಂದನ್ನು ಖರೀದಿಸುವದಕ್ಕಾಗಿ ಚರ್ಚೆ ನಡೆಸಿದರು. 



ಸುದ್ದಿ ಓದಿ