ಸರಕಾರಿ ಉರ್ದು ಸಹಕಾರಿ ಸಂಘ ಅಧ್ಯಕ್ಷರಾಗಿ ಜೆಡ್.ಎಸ್ ಮನಿಯಾರ ಆಯ್ಕೆ
Z.S. Maniyar elected as President of Government Urdu Cooperative Society
ಸಿಂದಗಿ 31: ಸರಕಾರಿ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘ ನಿ. 2026 ರಿಂದ 2031ರ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಜೆಡ್ ಎಸ್. ಮುನಿಯಾರ ಉಪಾಧ್ಯಕ್ಷರಾಗಿ ಆಶ್ರಫ್ ಅಲಿ ಡಿ. ಭೂಸನೂರ. ಅವಿರೋಧವಾಗಿ ಆಯ್ಕೆಗೊಂಡರು .ನಿರ್ದೇಶಕರಾಗಿ ಅಲ್ತಾಫ್ ಎಂ. ಸಾಲೋಟಗಿ. ಡಿ. ಎಲ್. ಮರ್ತೂರ. ರೌಫ್ ಎಸ್. ಬಗಲಿ. ಎಂ. ಎ. ನಾಯೋಡಿ. ಎಂ. ಎಚ್. ಮರ್ತೂರ. ಆರ್. ಎಂ. ಹಳ್ಳಿ ಮಹಿಳಾ ನಿರ್ದೇಶಕರಾಗಿ ಎನ್. ಆರ್. ಮಕಾನದಾರ. ಆರ್. ಜಿ. ತಾಂಬೋಳಿ ಸೇರಿದಂತೆ ನಿರ್ದೇಶಕರಾಗಿ ಹಾಗೂಆಡಳಿತ ಮಂಡಳಿ ಚುನಾವಣೆಯ ಪ್ರಕ್ರೀಯ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುಣಾವಣೆ ಅಧಿಕಾರಿ ತಿಳಿಸಿದರು.
ಸಮಾರಂಭದಲ್ಲಿ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ವಿಶ್ರಾಂತ ಮುಖ್ಯ ಶಿಕ್ಷಕ ಯು ಆಯ್ ಶೇಖ ಮಾತನಾಡಿ ಶಿಕ್ಷಕರ ಪತ್ತಿನ ಸಹಕಾರ ಸಂಘಗಳು ಶಿಕ್ಷಕರ ಆರ್ಥಿಕ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ, ಶಿಕ್ಷಕರಿಂದಲೇ ನಿರ್ವಹಿಸಲ್ಪಡುವ ಸ್ವಾವಲಂಬಿ ಸಂಸ್ಥೆಗಳಾಗಿವೆ. ಇವು ಸಾಲ ಸೌಲಭ್ಯ, ಉಳಿತಾಯ ಯೋಜನೆಗಳು, ಮತ್ತು ತುರ್ತು ಆರ್ಥಿಕ ನೆರವು (ಆಪತ್ಪಾಂಧವ) ಒದಗಿಸುವ ಮೂಲಕ ಶಿಕ್ಷಕರ ಆರ್ಥಿಕ ಭದ್ರತೆಗೆ ಸಹಕರಿಯಾಗಿದೆ ಎಂದರು. ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಂ ಎಸ್ ಚೌಧರಿ ಮಾತನಾಡಿ ಶಿಕ್ಷಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ತುರ್ತು ಸಾಲ ಒದಗಿಸಬೇಕು ಎಂದು ಸಲಹೆ ನೀಡಿದರು.ಸಂಘದ ಪ್ರದಾನ ಕಾರ್ಯದರ್ಶಿ ಗುಲಾಬ ನಧಾಪ ಮಾತನಾಡಿ ಚುನಾಯಿತ ಆಡಳಿತ ಮಂಡಳಿಯು ಸಂಘದ ದೈನಂದಿನ ಚಟುವಟಿಕೆಗಳನ್ನು ತಿಳಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 