ಯವಕ ಕಾಣೆ ಪ್ರಕರಣ ದಾಖಲು
ಬಳ್ಳಾರಿ 15: ಕುಡುತಿನಿ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಮಾದಾಪುರ ಗ್ರಾಮದ ನಿವಾಸಿಯಾದ ಹೆಚ್.ಗಣೇಶ್ ಎನ್ನುವ 19 ವರ್ಷದ ಯುವಕ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಕುಡುತಿನಿ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಯುವಕನ ಚಹರೆ ಗುರುತು: 5.7 ಅಡಿ ಎತ್ತರ, ಕೋಲು ಮುಖ, ಎಣ್ಣೆ ಗೆಂಪು ಮೈಬಣ್ಣ, ತೆಳುವಾದ ಮೈಕಟ್ಟು, ಬಲಗೈ ಮೇಲೆ ಅಮ್ಮ ಮತ್ತು ಉಖ ಅಂತ ಹಚ್ಚೆ ಗುರುತು ಇರುತ್ತದೆ, ಕನ್ನಡ ಭಾಷೆಯನ್ನು ಮಾತನಾಡುತ್ತಾನೆ, ಕಾಣೆಯಾದ ಸಂದರ್ಭದಲ್ಲಿ ಗ್ರೆ ಕಲರ್ ತುಂಬು ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ಯುವಕನ ಮಾಹಿತಿ ದೊರೆತಲ್ಲಿ ಕುಡತಿನಿ ಪೊಲೀಸ್ ಠಾಣೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.