ಯುವಕ ಕಾಣೆ ಪ್ರಕರಣ ದಾಖಲು
ಬಳ್ಳಾರಿ 13: ಕುಡತಿನಿ ಪೊಲೀಸ್ ಠಾಣೆ ವ್ಯಾಪ್ತಿಯ
ಹಳೇ ಮಾದಾಪುರ ಗ್ರಾಮದ ನಿವಾಸಿಯಾದ 19ವರ್ಷದ ಹೆಚ್.ಗಣೇಶ್ ಎಂಬ ಯುವಕ ಡಿ.06ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕುಡತಿನಿ ಪೊಲೀಸ್ ಠಾಣೆಯ ಸಹಾಯಕ ಉಪನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.06ರಂದು ಬೆಳಗ್ಗೆ 9.30ಕ್ಕೆ ತಮ್ಮ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಅದೇ ದಿನ ಸಂಜೆ 6ಗಂಟೆಯಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. ತನ್ನ ಮಗನನ್ನು ಹುಡುಕಾಡಿದರೂ ಸಿಕ್ಕಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಯುವಕನ ಗುರುತಿನ ಚಹರೆ: 5.7ಅಡಿ ಎತ್ತರ, ಕೋಲು ಮುಖ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣವಿದ್ದು, ಬಲಗೈ ಮೇಲೆ ಅಮ್ಮ ಮತ್ತು ಉಖ ಅಂತ ಹಚ್ಚೆ ಇರುತ್ತದೆ. ಗ್ರೇ ಕಲರ್ ತುಂಬು ತೋಳಿನ ಟೀ ಶರ್ಟ್, ನೀಲಿ ಬಣ್ಣದ ಫ್ಯಾಂಟ್ ಧರಿಸಿರುತ್ತಾನೆ. ಕನ್ನಡ ಬಾಷೆಯಲ್ಲಿ ಮಾತನಾಡುತ್ತಾನೆ.
ಕಾಣೆಯಾದ ಯುವಕನ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.ಸಂ.08392-258100 ಹಾಗೂ ಕುಡತಿನಿ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.