ಬಳ್ಳಾರಿ

ಯುವಕ ಕಾಣೆ: ಪ್ರಕರಣ ದಾಖಲು

ಯುವಕ ಕಾಣೆ: ಪ್ರಕರಣ ದಾಖಲು



ಬಳ್ಳಾರಿ 01: ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಮಲ್ಲಿಕ್ ವೆಂಕಟೇಶ್ ಎಂಬ ಯುವಕ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ನಗರದ ಕಂಟೋನ್‌ಮೆಂಟ್‌ನಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರದ ಮಲ್ಲಿಕ್ ವೆಂಕಟೇಶನು ನ.29ರಂದು ಬೆಳಗ್ಗೆ 5.15ಕ್ಕೆ ರಕ್ಷಕರ ಕಣ್ಣು ತಪ್ಪಿಸಿ ಹೋಗಿರುತ್ತಾನೆ ಎಂದು ಬಾಲಮಂದಿರದ ಅಧೀಕ್ಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಕಲಾಗಿರುತ್ತದೆ.  

ಕಾಣೆಯಾದ ಯುವಕನ ಚಹರೆ ಗುರುತು: ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕ್ರೀಂ ಬಣ್ಣದ ಚೆಕ್ಸ್‌ ಶರ್ಟ್‌ ಮತ್ತು ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್ ಧರಿಸಿರುತ್ತಾನೆ. ಬಾಲಕನು ಬುದ್ದಿಮಾಂದ್ಯನಾಗಿದ್ದು, ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. 

ಯುವಕನ ಕುರಿತು ಮಾಹಿತಿ ದೊರೆತಲ್ಲಿ 08392-240731 ಅಥವಾ ಮೊ:9480803047ಗೆ ಸಂಪರ್ಕಿಸಲು ಕೋರಿದೆ.   

*-*-* 


ಸುದ್ದಿ ಓದಿ