ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಯುವಕರು ಕೈಜೋಡಿಸಿ: ಜುಮನಾಳ
ತಾಳಿಕೋಟೆ31: ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಪಟ್ಟಣದ ಸೌಂದರ್ಯವನ್ನು ಹಾಳು ಮಾಡದೆ ಪುರಸಭೆಯ ವಾಹನದಲ್ಲಿ ಕಸವನ್ನು ಹಾಕಿ ನಿಮ್ಮ ಮನೆಯ ಮುಂದಿನ ಚರಂಡಿ ಸ್ವಚ್ಛ ಬಳಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ ಎಂದು ಪುರಸಭೆ ಕಿರಿಯ ಆರೋಗ್ಯ ಸಹಾಯಕ ಶಿವಾನಂದ ಜುಮನಾಳ ಹೇಳಿದರು
ಪಟ್ಟಣದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ. ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ ಆಯೋಜಿಸಿದ ಅನೈರ್ಮಲ್ಯದಿಂದ ಸ್ವಚ್ಛತೆ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯಕೀಯ ತ್ಯಾಜ್ಯ ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು ಜಾಗೃತಿಯಿಂದ ಅದನ್ನು ವಿಲೇವಾರಿ ಮಾಡುವ ತಿಳಿವಳಿಕೆ ನಮ್ಮಲ್ಲಿರಬೇಕು. ಕಸದಿಂದಲೇ ಮನೆಯಲ್ಲೇ ಗೊಬ್ಬರ ತಯಾರಿಸಿ ಮನೆಯಲ್ಲಿ ಬೆಳೆಸಿರುವ ನಾನಾ ಬಗೆಯ ಸಸ್ಯಗಳಿಗೆ ಗೊಬ್ಬರ ಬಳಸಬಹುದು. ಕಸದಿಂದ ರಸ ತೆಗೆಯುವ ಕಾರ್ಯಕ್ಕೆ ನಾವೆಲ್ಲರೂ ಒತ್ತು ನೀಡೋಣ ಪಟ್ಟಣದ ಜನತೆ ಆರೋಗ್ಯದಿಂದ ಜೀವನ ನಡೆಸಲು ಕಾರಣಿಭೂತರಾದ ಪೌರಕಾಮರ್ಿಕರ ಬಗ್ಗೆ ಗೌರವ ಇರಲಿ ಎಂದರು.
ಪ್ರಶಿಕ್ಷಣಾಥರ್ಿಗಳಾದ ಚೇತನ್ ಹಾಗೂ ಗಣಪತಸಿಂಗ್ ಹಜೇರಿ ಮಾತನಾಡಿ, ಯುವ ಪೀಳಿಗೆ ಮನಸ್ಸು ಮಾಡಿದ್ರೆ ಪ್ಲಾಸ್ಟಿಕ್ ಮುಕ್ತ ನಗರ ಮಾಡುವುದು ದೊಡ್ಡ ಮಾತಲ್ಲ. ಪ್ಲಾಸ್ಟಿಕ್ ಬಳಕೆ ಇಂದಿನ ಯುಗದಲ್ಲಿ ಅನಿವಾರ್ಯವಾಗಿದೆ. ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಯುವಪೀಳಿಗೆಯಿಂದ ನಡೆಯಬೇಕಿದೆ ಎಂದರು.
ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಮೇಶ ಬಂಟನೂರ ಮಾತನಾಡಿ, ಆರೋಗ್ಯ ಇದ್ದರೆ ಮನುಷ್ಯ ಏನನ್ನು ಏನೆಲ್ಲಾ ಸಾಧಿಸಬಹುದು. ಆ ಭಾಗ್ಯ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಭಾವಿ ಶಿಕ್ಷಕರು ಇಂದು ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಮತ್ತು ನಾವು ಉಪಯೋಗಿಸುವ ವಸ್ತುಗಳನ್ನು ಒಂದೇ ಕಡೆ ಸಂಗ್ರಹಿಸಿ ವಿಲೇವಾರಿ ಮಾಡಿದಾಗ ಮಾತ್ರ ನೈರ್ಮಲ್ಯ ಮುಕ್ತ ಪರಿಸರ ಕಡೆಗೆ ನಾವೆಲ್ಲರೂ ಸಾಗಲು ಸಾಧ್ಯ ಎಂದು ಹೇಳಿದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ವೈ.ಎಚ್.ಅಂಗಡಗೇರಿ, ಐಕ್ಯೂಎಸಿ ಘಟಕದ ಸಂಯೋಜಕರಾದ ಉಮೇಶ ಮಂಗೊಂಡ ಉಪನ್ಯಾಸಕರಾದ ಎ.ಎ.ಗಂಗನಗೌಡರ ಕವಿತಾ ಜಯಲಕ್ಷ್ಮಿ, ಮಾಂತೇಶ ಹುಣಶ್ಯಾಳ, ಪುರಸಭೆಯ ಸಿಬ್ಬಂದಿಗಳಾದ ಬಸವರಾಜ ಬಿಜ್ಜೂರ. ರಾಜು ಚಿತ್ತಾಪುರ, ಸಿದ್ದಪ್ಪ ಕೋಳಿ ಹಾಗೂ ಪ್ರಶಿಕ್ಷಣಾಥರ್ಿಗಳು ಉಪಸ್ಥಿತರಿದ್ದರು. ಅಕ್ಷತಾ ಬಿರಾದಾರ ನಿರೂಪಿಸಿದರು.