ವಿಜಯಪುರ

ಕುವೈತ್‌ನ ರಸ್ತೆ ಅಪಘಾತದಲ್ಲಿ ಹುಣಶ್ಯಾಳದ ಯುವಕ ಸಾವು

ಕುವೈತ್‌ನ ರಸ್ತೆ ಅಪಘಾತದಲ್ಲಿ ಹುಣಶ್ಯಾಳದ ಯುವಕ ಸಾವು

 ದೇವರಹಿಪ್ಪರಗಿ 09: ತಾಲೂಕಿನ ಹುಣಶ್ಯಾಳ ಗ್ರಾಮದ ಯುವಕ ಕುವೈತ್ ದೇಶದ ರಸ್ತೆ ಅಪಘಾತದಲ್ಲಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.  ಶಮಶುದ್ದಿನ್ ಮಹಿಬೂಬಸಾಬ ಸಿಪಾಯಿ(45) ಮೃತ ದುರ್ದೈವಿ. ಮೃತರಿಗೆ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದ ಎಂದು ತಿಳಿದು ಬಂದಿದೆ.  ತಾಯಿ, ಮೂವರು ತಂಗಿ ಮತ್ತು ಅಣ್ಣನಾದ ಕಮರುದ್ದಿನ ಸಿಪಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಮೃತರ ಕುಟುಂಬದಲ್ಲಿ ಅಕ್ರಂದನ ಮುಗಿಲುಮುಟ್ಟಿದೆ.  ಶುಕ್ರವಾರ ದಿ. 10ರಂದು ಮಧ್ಯಾಹ್ನ 1ಗಂಟೆಗೆ ಮೃತರ ಶರೀರ ಸ್ವಗ್ರಾಮಕ್ಕೆ ಮರಳಿದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ. 


ಸುದ್ದಿ ಓದಿ