ಯೋಗವು ಭಾರತೀಯ ಸಂಸ್ರ್ಕತಿಯ ಪ್ರತೀಕ: ಕೆ.ಎಚ್.ಬಂಡಿವಡ್ಡರ
ಶಿಗ್ಗಾವಿ/ಗೊಟಗೋಡಿ 21: ಯೋಗವೆಂಬ ಅರ್ಥವು ಸಾಮಾನ್ಯವಾಗಿ ಒಂದೂಗೂಡಿಸು, ಕಟ್ಟು, ಒಂದಾಗುವುದು ಎನ್ನುವ ಅರ್ಥವನ್ನು ಕೊಡುತ್ತದೆ ಅಂದರೆ ಯೋಗವು ಮನಸ್ಸುಗಳನ್ನು ಕಟ್ಟುವ ದೇಹವನ್ನು ಶಿಸ್ತುಬದ್ದಗೊಳಿಸುವ ಒಂದು ಪ್ರಕೀಯೆಯಾಗಿದೆ ಎಂದು ಯೋಗ ಶಿಕ್ಷಕ ಕೆ.ಎಚ್.ಬಂಡಿವಡ್ಡರ ಹೇಳಿದರು.
ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿವಿಯಲ್ಲಿ ಅಂತರಾಷ್ರ್ಟೀಯ ಯೋಗ ದಿನದ ಅಂಗವಾಗಿ ನಡೆದ ಯೋಗ ಪ್ರಾತ್ಯಕ್ಷೀಕೆ ಹಾಗೂ ಉಪನ್ಯಾಸ ನೀಡಿ ಮಾತನಾಡಿ ಯೋಗವು ಯಾವತ್ತು ಹಿಂಸೆ ನೀಡುವ ಕ್ರಿಯೆಯಲ್ಲ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕಾಗಿ ಅನೇಕ ಆಸನಗಳು ನೆಮ್ಮದಿಯನ್ನು ಉಂಟುಮಾಡುತ್ತವೆ ಹಾಗಾಗಿ ಯೋಗವು ಸರ್ವ ರೋಗಕ್ಕು ಯೋಗ ಮದ್ದು ಎಂದರು.
ಮುಖ್ಯ ಅತಿಥಿ ಆಢಳಿತ ವೈದ್ಯಾಧಿಕಾರಿ ಡಾ?ಹನುಮಂತಪ್ಪ ಮಾತನಾಡಿ ವೈದ್ಯರಿಗೆ ನಿಜವಾದ ಸಂತೋಷದ ಸಮಯವೆಂದರೆ ಅದು ರೋಗಿಯ ಆರೈಕೆ ಮಾಡಿದಾಗ ಆ ರೋಗಿಯು ಗುಣಮುಖವಾದಾಗ ಹಾಗಾಗಿ ಯೋಗಕ್ಕೂ ವೈಧ್ಯಕೀಯ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ ಇತ್ತಿಚಿನ ದಿನಗಳಲ್ಲಿ ಜಗತ್ತಿನಲ್ಲಿ ಕಂಡು ಬಂದ ಕರೋನಾ ರೋಗಕ್ಕೆ ಓಷದಿ ಇಲ್ಲ ಎಂದಾಗ ನಮ್ಮ ಭಾರತೀಯರು ಯೋಗವನ್ನೆ ಮುಖ್ಯ ಓಷಧವಾಗಿ ಅಳವಡಿಸಿಕೊಂಡಿರುವದರಿಂದ ಆ ನಿಟ್ಟಿನಲ್ಲಿ ಮನುಷ್ಯನಿಗೆ ಯೋಗ ಅಭ್ಯಾಸ ಅತಿ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ.ಸಿ.ಟಿ.ಗುರುಪ್ರಸಾದ್ ಮಾತನಾಡಿ ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ ಮನುಷ್ಯನಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ ಹಾಗೆಯೇ ಆಂತರಿಕ ಸೌಂದರ್ಯವು ಅಷ್ಟೆ ಮುಖ್ಯ ಪ್ರತಿ ನಿತ್ಯ ಯೋಗ ಅಭ್ಯಾಸದಿಂದ ದೇಹವನ್ನು ಸದ್ರಢವಾಗಿರಿಸಿಕೊಳ್ಳಲು ಸಾದ್ಯ ಹಾಗೂ ಯೋಗ ಶಿಕ್ಷಕ ಕೆ.ಎಚ್.ಬಂಡಿವಡ್ಡರ ಯಶಸ್ವಿಯಾಗಿ ಶಿಭಿರವನ್ನು ನಡೆಸಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೌಲ್ಯಮಾಪನ ಕುಲಸಚಿವ ಎನ್.ಎಮ್.ಸಾಲಿ, ಕಲಾ ಅದ್ಯಾಪಕ ಬಸವರಾಜ ಜವಳಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಂಶೋಧನಾದಿಕಾರಿ ಡಾ.ಕೆ.ಪ್ರೇಮಕುಮಾರ, ಡಾ.ಚಂದ್ರ್ಪ ಸೊಬಟಿ ಶರೀಫ ಮಾಕಪ್ಪನವರ ಹಾಗೂ ಬೋದಕ ಬೋದಕೇತರರು, ವಿದ್ಯಾರ್ಥಿಗಳು ಹಾಜರಿದ್ದರು.ಸಹಾಯಕ ಕುಲಸಚಿವ ಷಹಜಾನ್ ಮುದಕವಿ ವಂದಿಸಿದರು. ಸಹಾಯಕ ಪ್ರಾದ್ಯಾಪಕೆ ಡಾ.ವಿಜಯಲಕ್ಷ್ಮೀ ಗೇಟಿ ನಿರೂಪಿಸಿದರು.