ಮನಸ್ಸು, ಆರೋಗ್ಯ ಚೆನ್ನಾಗಿರಲು ಯೋಗ ಅವಶ್ಯ:ಗಲಗಲಿ
ಮುಂಡಗೋಡ:ಯೋಗವನ್ನು ಕೇವಲ ಒಂದು ದಿನ ಮಾತ್ರ ಮಾಡಿ ಬಿಡುವುದಲ್ಲ ಜೀವನ ಪೂರ್ತಿ ಮಾಡುತ್ತಿರಬೇಕು ಎಂದು ಸರಕಾರಿ ಆಯುರ್ವೇದ ಆಸ್ಪತ್ರೆ ವೈದ್ಯ ಸಂಜೀವ ಗಲಗಲಿ ಹೇಳಿದರು.
ಪಟ್ಟಣದ ಲೊಯೋಲ ವಿಕಾಸ ಕೇಂದದಲ್ಲಿ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಯೋಗ ಸಪ್ತಾಹ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯೋಗ ಮಾಡುವುದರಿಂದ ಮನಸ್ಸು ಹಾಗೂ ಆರೋಗ್ಯ ಚೆನ್ನಾಗಿರುತ್ತದೆ. ಕಲಿಕೆ ಜೊತೆಗೆ ಮಕ್ಕಳು ತಮ್ಮ ಜೀವನದಲ್ಲಿ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಆದಿಜಾಂಭವ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಡಿ.ಮುಡೆಣ್ಣವರ ಮಾತನಾಡಿ ಯೋಗ ಪುರಾತನ ಕಾಲದಿಂದಲೂ ಬಂದಿರುತ್ತದೆ. ಅದು ಮರೆಯಾಗಬಾರದು ನಿರಂತರವಾಗಿರಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾ.ಅನಿಲ್ ಡಿಸೋಜಾ ಕಲಿಕೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನ ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ನಾಗರಾಜ ಸಿ., ಆರ್ಯುರ್ವೇದ ಆಸ್ಪತ್ರೆ ಸಿಬ್ಬಂದಿ ಪ್ರತಿಮಾ ಹಿರೇಮಠ, ಜ್ಯೋತಿ ಸಮಾಜ ಸೇವಾ ಕೇಂದ್ರದ ಐರಿನ್ ಡಿಸೆಲ್ವ ಉಪಸ್ಥಿತರಿದ್ದರು. ತುಂಗಾ ನಾಯ್ಕ ಸ್ವಾಗತಿಸಿದರು. ಮಂಗಳಾ ಮೋರೆ ಕಾರ್ಯಕ್ರಮ ನಿರೂಪಣೆ ಮಾಡಿದರು. ತೇಜಸ್ವಿನಿ ವಂದಿಸಿದರು. ಶಿಬಿರದಲ್ಲಿ ಒಟ್ಟು 58 ಮಕ್ಕಳು ಭಾಗವಹಿಸಿದ್ದರು.