ಯೋಗ ತರಬೇತುದಾರರ ಹುದ್ದೆ : ಅರ್ಜಿ ಆಹ್ವಾನ
ಬಳ್ಳಾರಿ, ಸೆ.10: ರಾಷ್ಟ್ರೀಯ ಆಯುಷ್ ಅಭಿಯಾನದ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಸರ್ಕಾರಿ ಆರ್ಯುವೇದ ಚಿಕಿತ್ಸಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಅರೇ ಕಾಲಿಕ ಯೋಗ ತರಬೇತುದಾರರ ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆರ್ಯುವೇದ ಚಿಕಿತ್ಸಾಲಯಗಳಾದ ಸಂಡೂರು ತಾಲೂಕಿನ ಹೆಚ್.ವೀರಾಪುರ, ಹಡಗಲಿ ತಾಲೂಕಿನ ಉತ್ತಂಗಿ, ಕುರುಗೋಡುಗಳಲ್ಲಿ ತಲಾ 1 ಹುದ್ದೆಯಂತೆ 3 ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಕನಿಷ್ಠ 21 ರಿಂದ 60 ವರ್ಷದ ವಯೋಮಿತಿ ಹೊಂದಿರಬೇಕು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಹತೆಯೊಂದಿಗೆ ಯೋಗ ಕೇಂದ್ರದಿಂದ ಪಡೆದ ಯೋಗ ಪ್ರಮಾಣಪತ್ರ ದಾಖಲೆಗಳು ಪಡೆದಿರಬೇಕು. ಅರ್ಜಿಯನ್ನು ಜಿಲ್ಲಾ ಆಯುಷ್ ಕಚೇರಿಯಲ್ಲಿ ಪಡೆದು ಅದೇ ಕಚೇರಿಗೆ ಸೆ.18ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದವರು ಸೆ.22ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಆಯುಷ್ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 8 ಸಾವಿರ ರೂ.ಗಳನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿ, ನಗರದ ಕೆ.ಸಿ ರಸ್ತೆ, ಬಳ್ಳಾರಿ ಕಚೇರಿಗೆ ಅಥವಾ ದೂ.ಸಂ.08392-272775ಗೆ ಸಂಪರ್ಕಿಸಬಹುದು ಎಂದು ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.