ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವಕಾಲೇಜಿನಲ್ಲಿ ಯೋಗ ದಿನಾಚರಣೆ
ಲೋಕದರ್ಶನ ವರದಿ
ವಿಜಯಪುರ 24 : ಅಂತರಾಷ್ಟ್ರೀಯಯೋಗ ದಿನದ ಪ್ರಯುಕ್ತ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವಕಾಲೇಜು ಹಾಗೂ ಈಶಾ ಫೌಂಡೇಷನ್ ಸಹಯೋಗದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದಯೋಗ ಶಿಬಿರದಲ್ಲಿ ಈಶಾ ಫೌಂಡೇಷನ್ ನ ಯೋಗ ಸಾಧಕರುಯೋಗದ ಮಹತ್ವದ ಜೊತೆಗೆ ಯೋಗ ಸಾಧನೆಯಿಂದಾಗುವ ಲಾಭಗಳನ್ನು ಮನದಟ್ಟಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಧ್ಯಾನ ಮಾಡುವ ವಿಧಾನ ಹಾಗೂ ಧ್ಯಾನದ ಮೂಲಭೂತ ತತ್ವಗಳನ್ನು ತಿಳಿಸುವುದರೊಂದಿಗೆ ಯೋಗಾಭ್ಯಾಸವನ್ನು ಹೇಳಿಕೊಟ್ಟರು. ವಿದ್ಯಾರ್ಥಿ ಜೀವನದಲ್ಲಿ ಚೇತೋಹಾರಿ ಬದಲಾವಣೆಕ ಆಣಬೇಕಾದರೆ ಅದು ಯೋಗದಿಂದ ಸಾಧ್ಯವಾಗುತ್ತದೆ.
ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಜೊತೆಗೆ ಏಕಾಗ್ರತೆಯನ್ನು ಕಂಡುಕೊಳ್ಳುವುದಕ್ಕೆ ಯೋಗವು ರಾಮಬಾಣವಾಗಿ ಕಾರ್ಯ ಮಾಡುತ್ತದೆ. ಹೀಗಾಗಿ ದಿನಕ್ಕೆ ಒಂದಷ್ಟು ಸಮಯವನ್ನು ಯೋಗಕ್ಕೆ ಮೀಸಲಾಗಿಟ್ಟರೆ ಬದುಕಿನಕಲ್ಲಿ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿದರು. ಹಲವಾರು ಆಸಗಳನ್ನು ಮಾಡುವುದರಿಂದ ಆಗುವ ಲಾಭಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು. ಕಾರ್ಯಕ್ರಮದಲ್ಲಿ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರ ಮಟ್ಟಿ, ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಸತಿನಿಯಗಳ ಮುಖ್ಯಸ್ಥರು, ನಿಲಯ ಪಾಲಕರುಗಳು ಉಪಸ್ಥಿತರಿದ್ದರು.