ಬಳ್ಳಾರಿ

ನೂತನ ಅಧ್ಯಕ್ಷರಾಗಿ ಏಳುಬೆಂಚಿ ರಾಜಶೇಖರ ಅಧಿಕಾರ ಸ್ವೀಕಾರ

ನೂತನ ಅಧ್ಯಕ್ಷರಾಗಿ ಏಳುಬೆಂಚಿ ರಾಜಶೇಖರ ಅಧಿಕಾರ ಸ್ವೀಕಾರ

ಬಳ್ಳಾರಿ 16: ವೀ.ವಿ ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ನೂತನ ಅದ್ಕಕ್ಷರಾಗಿ ಏಳುಬೆಂಚಿ ರಾಜಶೇಖರ ಅಧಿಕಾರ ಸ್ವೀಕಾರ ಜು.16ರಂದು ಕಾಲೇಜಿನಲ್ಲಿ ಜರುಗಿದ ಸಮಾರಂಭದಲ್ಲಿ ಕಾಲೇಜಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಏಳುಬೆಂಚಿ ರಾಜಶೇಖರ ಅವರು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಸ್‌. ಎಫ್‌. ಗಡ್ಡಿಯವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ವೀ.ವಿ ಸಂಘದ ಕಾರ್ಯದರ್ಶಿ ಬಿ.ವಿ. ಬಸವರಾಜ್ ಅವರು ಈ ಸಂದರ್ಭ ಉಪಸ್ಥಿತರಿದ್ದು ಶುಭಹಾರೈಸಿದರು.  

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬೈಲವದ್ದಿಗೇರಿ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೀ.ವಿ. ಸಂಘದ ಅಧ್ಯಕ್ಷ ಹೆಚ್‌.ಎಂ. ಗುರುಸಿದ್ದಸ್ವಾಮಿಯವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಕೆಯ ನುಡಿಗಳನಾಡಿದರು.  

ಕಾರ್ಯಕಾರಿ ಆಡಳಿತ ಮಂಡಳಿಯ  ಸಹಕಾರ್ಯದರ್ಶಿ ದರೂರು ಶಾಂತನಗೌಡರು, ಸದಸ್ಯ,  ಎಸ್‌. ಮಲ್ಲನಗೌಡ, ಕುಪ್ಪಗಲ್ ಗಿರಿಜ ಎಂ.ಕ್ಯಾತ್ಯಾಯನಿ ಮರಿದೇವಯ್ಯ , ಹೆಚ್‌.ಎಂ. ಕಿರಣ ಕುಮಾರ್, ಪಲ್ಲೇದ ದೊಡ್ಡಪ್ಪ, ಸಿದ್ದರಾಮ ಕಲ್ಮಠ್,  ಕೆರನಳ್ಳಿ ಚಂದ್ರಶೇಖರ್, ಡಾ.ಎಸ್‌.ಬಿ. ರಾಜಶೇಖರ ಅಸುಂಡಿ ನಾಗರಾಜ ಗೌಡ, ಯಾಳ್ಪಿ ಮೇಟಿ ಪಂಪನಗೌಡ  ಇವರುಗಳೆಲ್ಲ ಉಪಸ್ಥಿತರಿದ್ದರು. ಖಾಜ ಬಂದೇ ನವಾಜ್   ಡೀಮ್ಡ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಹೆಚ್‌.ಎಂ. ರಾಜಶೇಖರ್ ಸ್ವಾಮಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಸನ್ಮಾನಿಸಿಲಾಯಿತು. ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್‌. ಮಂಜುನಾಥ ಸ್ವಾಗತಿಸಿದರೆ. ಕನ್ನಡ ಉಪನ್ಯಾಸಕರಾದ ಎ.ಎಂ.ಪಿ. ವೀರೇಶಸ್ವಾಮಿ ಕಾರ್ಯಕ್ರಮ ನಿರೂಪಿಸಿದರು 


ಸುದ್ದಿ ಓದಿ