ವರುಷ ವರುಷ ಕಳೆದರೂ ಮರಳಿ ಜಾತ್ರೆ ಬರುತಿದೆ...
ಇದೆ ಶಕೆ 1994 ನೇ ಶುಭಕೃತು ನಾಮ ಸಂವತ್ಸರ ಪುಷ್ಯ ಬಹುಳ ಬದಿಗಿ ತಾ: 08-01-2023 ಸೋಮವಾರ ದಂದು ಜರಗುವ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮಿಗಳ ರಥೋತ್ಸವ ಜರಗುವದು.
ವರುಷ ವರುಷ ಕಳೆದರೂ ಮರಳಿ ಜಾತ್ರೆ ಬರುತಿದೆ. ನವ ಚೇತನ ತರುತಿದೆ ಹೊಸ ಬೆಳಕು ಬೆಳಗುತಿದೆ. ಹಗಲು ಸೂರ್ಯಕಾಂತಿ ಇರುಳು ಚಂದ್ರಕಾಂತಿ ಭಕ್ತರ ಭಾವ ಭೂಮಿಯ ಬೆಳಗುತ್ತ ಮುಸುಕಿದ ಕತ್ತಲ ಕಳೆಯುತ್ತದೆೆಂಬ ನಾಡಿನ ಜನರ ಮನದ ನಂಬಿಕೆ, ಹರ, ಗುರು, ಚರ, ಮೂರ್ತಿಗಳ ಸಮಾ ಗಮಾ ಅನ್ನ ಅರಿವು ಆರೋಗ್ಯ ಜ್ಞಾನ ದಾಸೋಹ ನಿತ್ಯ ನಿರಂತರ ಶ್ರೀ ಗವಿಸಿದ್ದೇಶ್ವರ ಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಇಂದಿನ ಪೀಠಾದಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳವರ ಕರ್ತವ್ಯ ನಿಷ್ಠೆಯಲ್ಲಿ ಗುರು, ಲಿಂಗ, ಜಂಗಮ ಪ್ರೇಮಿಯಾಗಿ ಕಾಯಕಯೋಗಿಯಾಗಿದ್ದಾರೆ. ಭಕ್ತರ ಭಕ್ತಿಯ ಆಂತರ್ಯದಲ್ಲಿ ಭಗವಂತನನ್ನು ಕಾಣುತ್ತ ತಾನೆ ತಾನಾಗಿ ಮೂಲ ಗವಿಸಿದ್ದೇಶ್ವರನ ಸ್ವರೂಪನೆಂದು ಭಕ್ತರು ಬಲವಾದ ನಂಬಿಕೆಯಿಂದ ಕರೆಯುತ್ತಾರೆ. ಭಕ್ತರು ತಮ್ಮ ಜೀವನದ ಅನೇಕ ಆಯಾಮಗಳಲ್ಲಿ ಗವಿಸಿದ್ದನನ್ನೇ ಆಧಾರವಾಗಿಟ್ಟುಕೊಂಡು ಬದುಕಿನಲ್ಲಿ ಸಾಕ್ಷಿಕರಿಸಿ ಕೊಳ್ಳುತ್ತಾರೆ ಉದಾಹರಣೆ ಕೊಡುವ ಕೊಂಬಾಗಲಿ ನಡೆ ನುಡಿಗಳಲ್ಲಾಗಲಿ, ಮದುವೆ, ನಿಶ್ಚಿತಾರ್ಥಗಳಲ್ಲಾಗಲಿ. ಮತ್ತಾವದೆ ಶುಭ ಸಮಾರಂಭ, ವಾಣಿಜ್ಯ ಪ್ರಾರಂಭಗಳಾಗಲಿ, ಗವಿಸಿದ್ದನ ಸಾಕ್ಷಿಯಾಗಿಯಂತಲೇ ನಡದು ಕೊಳ್ಳುತ್ತಾರೆ. ಮಹಾ ಮಹಿಮ ಗವಿಸಿದ್ದ ಬೇಡಿದವರಿಗೆ ಬೇಡಿದ ಇಷ್ಟಾರ್ಥ ಕರುಣಿಸುವ ಕರುಣಾಳು, ಕಲ್ಪಿಸಿದವರಿಗೆ ಕಲ್ಪವೃಕ್ಷ, ಚಿಂತಾ ಜನಕೆ ಚಿಂತಾಮಣಿ, ಅನೇಕ ಶುಭ ಕಾಮನೆಗಳಿಗೆ ಕಾಮಧೇನುವಾಗಿ ಭಕ್ತರ ಮನದಲ್ಲಿ ನಿರಂತರವಾಗಿ ನೆಲೆ ನಿಂತಿದ್ದಾನೆ. ಪ್ರತಿ ವರುಷವೂ ಬಡವ ಬಲ್ಲಿದ ಎಲ್ಲರೂ ತಮ್ಮ ತಮ್ಮ ಶಕ್ತಾನುಸಾರ ಶ್ರೀ ಮಠಕ್ಕೆ ಭಕ್ತಿ ಕಾಣಿಕೆಯ ರೂಪದಲ್ಲಿ ಧವಸ, ಧಾನ್ಯಗಳನ್ನು ಅರ್ಿಸುತ್ತಾರೆ. ಜಾತ್ರೆಗೆ ಕನ್ನಡ ನಾಡಿನ ಮೂಲೆ ಮೂಲೆಗಳಿಂದ ಲಕ್ಷೊಪ ಲಕ್ಷ ಜನರು ಬರುವದನ್ನು ಕಂಡು ನಡೆದಾಡುವ ದೇವರೆಂದೇ ಕರೆಯಸಿಕೊಂಡಿದ್ದ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ದಕ್ಷೀಣ ಭಾರತದ ಕುಂಭ ಮೇಳವೆಂದು ಕರೆದರು. ಅವರ ವೈಖರಿ ವಾಣಿಯಿಂದ ಬಂದ ಈ ವಚನ ಇತಿಹಾಸ ಪುಟ ಸೇರಿದೆ. ಕಳೆದೆರಡು ವರುಷದಲ್ಲಿ ಮಾನವ ಕುಲಕ್ಕೆ ಮಹಾಮಾರಿ ಕರೋನದಿಂದ ಸಂಕಿಪ್ತಗೊಂಡಿದ್ದ ಅಜ್ಜನ ಜಾತ್ರೆ ಈ ವರ್ಷ ಪೂರ್ಣ ಕುಂಭದೊಂದಿಗೆ ಸಂಪನ್ನಗೊಂಡಿರುವದು ಇಡಿ ನಾಡಿಗೆ ಸಂತಸ ತಂದಿದೆ.
ನಮ್ಮ ಭಾರತದ ಉದ್ದ-ಅಗಲದಲ್ಲಿ ಎಷ್ಟೋ ಪುಣ್ಯಕ್ಷೇತ್ರಗಳಿವೆ, ಎಷ್ಟೋ ತೀರ್ಥ ಕ್ಷೇತ್ರಗಳಿವೆ. ಎಷ್ಟೋ ಪ್ರೇಕ್ಷಣಿಯ ತಾಣಗಳಿವೆ. ಇವುಗಳ ಸಾಲಿನಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಪುಣ್ಯ ಕ್ಷೇತ್ರವು ಒಂದು. ಇಂದಿನ ಪೀಠಾಧಿಪತಿಗಳಾದ ಅಭಿನವ ಶ್ರೀಗಳು ಬರುವ ಯಾತ್ರಿಗಳಿಗೆ ವಸತಿ, ದಾಸೋಹ ನೀಡಿ ಸತ್ಕರಿಸುವದು ಸ್ತುತ್ಯಾರ್ಹ, ಘನ ಮಠದ ಓದಾರ್ಯತೆಯನ್ನು ನೆನಪಿಸಿಕೊಂಡವರು ಕಣ್ಣಂಚಿನ ಹನಿಗಳನ್ನು ಸುರಿಸದೇ ಇರಲಾರರು. ಅಭಿನವ ಶ್ರೀಗಳು ಜ್ಞಾನ ಚಿಂತನಾ ಸಭೆಯಲ್ಲಿ ಆಶಯ ನುಡಿಗಳಲ್ಲಿ ಹೇಳಿದ ಮಾತು ನಾವು ಇನ್ನೋಬರ ಕಣ್ಣಿರನ್ನು ಒರೆಸುವದಾಗದಿದ್ದರೂ ಇನ್ನೋಬ್ಬರ ಕಣ್ಣಲ್ಲಿ ಕಣ್ಣಿರು ತರಿಸಬಾರದು ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಲೇ ಬೇಕಾಗುತ್ತದೆ. ಕೆಲವು ದಿನಗಳ ಹಿಂದೆ ಬಡ ಮಕ್ಕಳು ವಿಧ್ಯಾರ್ಜನೆಗಾಗಿ ಬರುವ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ವಸತಿಗಾಗಿ ವಸತಿಗೃಹ ಸಕಾಗಲ್ಲ ಎಂಬ ಕೊರಗು ಅವರ ಕಣ್ಣೀರ ರೂಪದಲ್ಲಿ ಹೋರ ಹಾಕಿದ್ದು ಇಡಿ ವಿಶ್ವವೇ ಬೆರಗಾಗಿ ಕಣ್ಣೀರ ಕೋಡಿಯಲ್ಲಿ ತೇಲಾಡಿದ್ದು ವಾಸ್ತವ. ಒಂದೆರಡು ದಿನಗಳಲ್ಲಿ ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವರಾದ ಮಾನ್ಯ ಆನಂದ ಸಿಂಗ್ ಇವರು 10 ಕೋಟಿ ರೂಪಾಯಿಗಳನ್ನು ಸರಕಾರದಿಂದ ಮಂಜೂರು ಮಾಡಿಸಿದ್ದಲ್ಲದೆ. ವಯಕ್ತಿಕವಾಗಿ 1 ಕೋಟಿ 8 ಸಾವಿರ ರೂಪಾಯಿಗಳನ್ನು ಶ್ರೀ ಮಠಕ್ಕೆ ಅರ್ಿಸಿದ್ದು ನಾಡಿನ ಎಲ್ಲಾ ದಿನಪತ್ರಿಕೆೆಗಳಲ್ಲಿ ಪ್ರಕಟಿತಗೊಂಡಿರುವದು ನಾಡಿಗೆ ತಿಳಿದಿದೆ. ಆದರೂ ಜಾತ್ರೆಯ ಮಹತ್ವವನ್ನು ಅರಿಯಲೇ ಬೇಕೆಂಬಾಸೆ ಭಕ್ತ ಸಮುದಯದಲ್ಲಿ ಸಂಪನ್ನವಾಗಿದೆ.
ಹೋಗೋಣ ಜಾತ್ರೆಗೆ, ನೋಡೋಣ ಜಾತ್ರೆಯನ್ನು ನೆನೆಯೋಣ ಗವಿಸಿದ್ದನನ್ನು, ಕುಣಿಯುತ್ತಾ ಜಗ್ಗೋಣ ಬಾಳಿನ ಹಗ್ಗವನ್ನು, ಅಣ್ಣ, ತಮ್ಮ, ಅಕ್ಕಾ, ತಂಗಿ, ಎಲ್ಲರೂ ಒಂದದಾಗಿ ಬಾಳ ಬನದ ತುಂಬೆಲ್ಲ ಬೆಳೆದ ಕಳೆಯನ್ನು ಕೀಳೋಣ ಕಿತ್ತು ಮತ್ತೆ ಎಳೆಯೋಣ ಬಾಳಿನ ತೇರನ್ನು ಈ ಸಿರಿನಾಡ ಕೊಪ್ಪಳ ನಾಡಿಗೆ ದೊಡ್ಡ ಜಾತ್ರೆ ಕರುನಾಡ ಸೀಮೆಯಲಿ ಹೆಸರಾದ ಮಹಾಜಾತ್ರೆ ಹಸಿದು ಬಂದವರಿಗೆ ಅನ್ನ ನೀಡುವ ಜಾತ್ರೆ, ನೋವು, ಸಂಕಟಮ ಮರೆಸಿ ನಲಿವು ತೋರುವ ಜಾತ್ರೆ ಪಾವನಕೆ ಪಾವನವು ಈ ಕೊಪ್ಪಳ ಕ್ಷೇತ್ರ ಜಾತ್ರೆ.
ತ್ರ್ರಿವಿಧ ದಾಸೋಹಿ
ಅನ್ನ, ಜ್ಞಾನ, ಆರೋಗ್ಯ, ಶ್ರೀ ಮಠದ ಪರಂಪರೆ, ಭಕ್ತಿ, ಶಕ್ತಿ, ಮುಕ್ತಿ, ಸಾಧಕರಿಗೆ ಜ್ಞಾನ ಪೀಠ ಈ ಗವಿಮಠ, ಮುಕ್ತಿದಾಯಕ ಗವಿಸಿದ್ದೇಶ ಅವರವರ ಭಾವನೆಗೆ ಅವರಂತೆ ಇರುತಿಹನು, ಬನದ ಹುಣ್ಣಿಮೆಯಿಂದ ಅವರಾತ್ರಿ ಅಮವಾಸ್ಯೆವರೆಗೂ ಮಹಾ ಪ್ರಸಾದ. ನಾಡಿನ ಹಳ್ಳಿ ಹಳ್ಳಿಗಳಿಂದ ಜೋಳದ ರೊಟ್ಟಿ, ಮಾದಲಿ, ಬುಂದಿ, ಕರ್ಜಿಕಾಯಿ, ಇನ್ನೂ ತರ ತರದ (ಪಕ್ಚನ್ನು) ಅಡುಗೆ ಮಾಡಿಕೊಂಡು ಎತ್ತಿನ ಬಂಡಿ, ಟ್ಯಾಕ್ಟ್ರಗಳ ಮೂಲಕ ಭಜನೆ, ಮಜಲು, ಡೊಳ್ಳು ಬಾರಿಸುತ್ತ ಭಕ್ತ್ತಿ ಭಾವದಿಂದ ಗವಿಮಠಕ್ಕೆ ದಾಸೋಹಕ್ಕಾಗಿ ಅರ್ಿಸುವದು ಭಕ್ತಿಯ ವಿನಯತೆ, ಇನ್ನೂ ಅನೇಕರು ಶ್ರೀ ಗವಿ ಸಿದ್ದೇಶ್ವರನಲ್ಲಿ ಶೃದ್ಧೆ ಇಟ್ಟಿರುವರು ಈ ಸ್ಥಾನ ಸಾಮಾನ್ಯವಾದ ಸ್ಥಾನವಲ್ಲ ಇದೊಂದು ಶಕ್ತಿಸ್ಥಾನ ಅಘಾದವಾದ ಶಕ್ತಿವಂತನೀತ, ಅನೇಕ ದಿನಗಳಿಂದ ರೋಗ ರುಜಿನದಿಂದ ಬಳಲುತ್ತಿರುವವರು ಗವಿಸಿದ್ದೇಶ್ವರನ ಪ್ರಸಾದ ಮಹೀಮೆಯಿಂದ ಗುಣಮುಖರಾದೆವೆಂದು ಭಕ್ತಜನರ ಉಧ್ಘಾರ ಶ್ರೀಮಠದ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿ ವರುಷ ತೆರ್ಗಡೆಹೊಂದಿ ಮುಂದೆ ಉನ್ನತ ಶಿಕ್ಷಣ ಪಡೆದು ದೇಶ, ವಿದೇಶಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ಪಡೆದು ಶಕ್ತಿವಂತರಾಗಿದ್ದಾರೆ. ಅಂಥವರು ತಮ್ಮ ಬದುಕಿನುದ್ದಕ್ಕು ಗವಿಸಿದ್ದೇಶ್ವನ ಮಹಿಮಾ ಶಕ್ತಿಯೇ ನನ್ನನ್ನೂ ವಿದ್ಯಾವಂತನ್ನಾಗಿ ಮಾಡಿದೆ ಎಂದು ಪ್ರತಿ ವರುಷವೂ ಶ್ರೀ ಸನ್ನಧಾನಕ್ಕೆ ತಮ್ಮ ಭಕ್ತಿಯನ್ನು ಸಮರ್ಿಸುತ್ತೇರೆ. ಆಶಿಕ್ಷಿತ, ಸುಶಿಕ್ಷತ, ಸಾಮಾನ್ಯ, ಅಸಾಮಾನ್ಯ, ಬಡವ, ಶ್ರೀಮಂತ ಎಂಬ ಭಾವನೆ ಇಲ್ಲದೆ ಎಲ್ಲರಲ್ಲೂ ನಗು ಮೊಗದ ಹೊನಲಿನಿಂದಲೇ ಬನ್ನಿ ಪ್ರಸಾದ ಸ್ವೀಕರಿಸಿ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ವಿನಯ ವಾಣಿಯಿಂದ ಕೇಳುತ್ತೇರೆ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಮೂರು ದಾಸೋಹ ಮಠಗಳಿವೆ ಅವು ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ, ಚಳ್ಳಗುರ್ಕಿ ಎರಿ ತಾತ, ಮತ್ತು ಕೊಪ್ಪಳದ ಗವಿಮಠ. ಭಕ್ತಿ, ಶಕ್ತಿ, ಮುಕ್ತಿಗೆ ಒಂದಾಗಿ ಬೆಳೆದು ಬಂದಿವೆ. ನಿರಂತರ ಪ್ರಸಾದ ಸೇವೆ ಯಾತ್ರಿಗಳಿಗೆ ವಸತಿ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ಭಾಗ್ಯ ಕರುಣಿಸುವ ಕೇಂದ್ರವೆಂದರೆ ಅದು ಕೊಪ್ಪಳ ಗವಿಮಠ, ಶ್ರೀಮಠ ಗುರು, ಲಿಂಗ, ಜಂಗಮ, ಪರಂಪರೆ ಬಸವಾದಿ ಶರಣ ಕಾಯಕ ನಿಷ್ಠೆ ದಾಸೋವ ಮಹಾಮನೆ ಜ್ಞಾನ ದೀಪ್ತಿಯ ಮೂಲಕ ಗವಿ ದೀಪ್ತಿ ಬೆಳಕನ್ನು 3 ದಿನಗಳ ಕಾಲ (ಧರ್ಮ ಸಭೆ) ಜ್ಞಾನ ಸಭೆಯ ಮೂಲಕ ಮಾನವ ಜನ್ಮ ಕರುರಿತು ಅನೇಕ ವಿದ್ವತ್ ಸಂಪದರಿಂದ ಜ್ಞಾನ ದಾಸೋಹ ನೀಡುತ್ತಾರೆ. ಜಾತ್ರೆಯಲ್ಲಿ ವಿನೂತನ ಮಾದರಿಯ ಪ್ರಸಾಸ ಸವಿದಂತೆ ನೂತನ ಶೈಲಿಯ ಹಾಸ್ಯ ಭರಿತ ಕಾರ್ಯಕ್ರಮಗಳನ್ನು ನೀಡುವ ಈ ಜಾತ್ರೆ ಗವಿಸಿದ್ದೇಶ್ವರ ಜಾತ್ರೆ.
ಪ್ರಸಾದ ಮಹಿಮೆ
ವೇದಗಳಸಾರ ಶರಣರ ವಚನದಂತೆ ಪ್ರಸಾದವೇ ಸರ್ವ ದುಃಖಾಣಂ ಹಾನಿರ ಷ್ಯೋಪ ಚಾಯತೆ ಪ್ರಸಾದಲ್ಲಿಯ ಮಹತ್ವವನ್ನು ಜಗತ್ತಿಗೆ ತಿಳಿಸಿದ್ದಾರೆ. ಇದನ್ನೇ ಕುರಿತು ಹನ್ನೆರಡನೇ ಶತಮಾನದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣ ಒಂದು ಕಡೆ ಹೀಗೆ ಬಣ್ಣಿಸಿದ್ದಾನೆ. ಸಿದ್ಧ ಪ್ರಸಾದ, ಶುದ್ಧ ಪ್ರಸಾದ, ಪ್ರಶಿದ್ದ ಪ್ರಸಾದ, ಸಿದ್ಧ ಪ್ರಸಾದ ಗುರು ಮುಖದಿಂದ ಬಂದಿದು, ಶುದ್ಧ ಪ್ರಸಾದ ಲಿಂಗಮುಖದಿಂದ ಬಂದಿದು, ಪ್ರಸಿದ್ಧ ಪ್ರಸಾದ ಜಂಗಮ ಮುಖದಿಂದ ಬಂದಿದು ಇದರೊಳಗೆ ಅವುದು ಘನವೆಂಬೆ, ಅವುದು ಕಿರಿದೆಂಬೆ, ಮಹಕ್ಕೆ ಮಹ, ಘನಕ್ಕೆ ಘನ, ಮಹಾಘನ ಪ್ರಸಾದ, ಗುರು ಪ್ರಸಾದದಿಂದ ತನು ಶುದ್ಧವಾಯಿತು, ಲಿಂಗಪ್ರಸಾದದಿಂದ ಮನ ಶುದ್ಧವಾಯಿತು, ಜಂಗಮ ಪ್ರಸಾದದಿಂದ ಪ್ರಾಣ ಶುದ್ಧವಾಯಿತು, ಶರಣ ಸಂಘದಿಂದ ಪ್ರಸಾದ ಸಾಧ್ಯವಾಯಿತು ಕೊಡಲ ಚೆನ್ನಸಂಗಮ ದೇವಯ್ಯ, ಈ ತ್ರಿವಿಧ ಪ್ರಸಾದವ ಕೊಂಡನ್ನ ಭವಂ ನಾಸ್ತಿಯಾಯಿತ್ತು. ಅದರಂತೆ ಶ್ರೀಗವಿಸಿದ್ದೇಶ್ವರ ಪ್ರಸಾದ ಕೊಂಡು ನಮ್ಮೆಲ್ಲರ ತನು, ಮನ, ಪಾವನಗೊಂಡು ನಿಜ ಸುಖಿಗಳಾಗಿ ಗವಿಸಿದ್ಧನನ್ನೂ ನೆನೆಯೋಣ ಅಜ್ಜನ ಜಾತ್ರೆಗೆ ಬನ್ನಿ.
- ವೀರಣ್ಣ ಹುರಕಡ್ಲಿ, ಸಾಹಿತಿ
ಭಾಗ್ಯನಗರ