ನಾಳೆಯಿಂದ ರಾಘವೇಂದ್ರಸ್ವಾಮಿಗಳ ಆರಾಧನೆ
ಲೋಕದರ್ಶನ ವರದಿ
ಕಂಪ್ಲಿ 21: ಇಲ್ಲಿನ ಸತ್ಯನಾರಾಯಣಪೇಟೆಯ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಶಾಖಾಮಠದ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ,ರಾಯರ ಸಹಯೋಗದಲ್ಲಿ ಆ.23ರಿಂದ ಆ.25ರತನಕ ಗುರುಸಾರ್ವಭೌಮ ಶ್ರೀರಾಘವೇಂದ್ರ ತೀರ್ಥರ 350ನೇ ಆರಾಧನಾ ಮಹೋತ್ಸವ ಮತ್ತು ನೂತನ ರಜತ ಕವಚ ಸಮರಾ್ಣ ಸಮಾರಂಭ ಜರುಗಲಿದೆ. ಆ.22ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಆ.23ರಂದು ಪೂರ್ವಾರಾಧನೆ, ನೂತನ ರಜತ ಕವಚ ಸಮರೆ್ಣ, ಆ.24ರಂದು ಮಧ್ಯಾರಾಧನೆ, ಆ.25ರಂದು ಉತ್ತರಾಧನೆ ಸಮಾರಂಭ ಜರುಗಲಿದೆ. ಜಿಲ್ಲಾಡಳಿತ ಸೂಚನೆಯಂತೆ ಪ್ರತಿಯೊಬ್ಬ ಭಕ್ತರು ಕರೊನಾ ನಿಯಮಗಳನ್ನು ಪಾಲಿಸುವಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಿ ಸಕಲ ಸದ್ಭಕ್ತರು ಜಾಗೃತಿ ತೋರುವಂತೆ ಮಠದ ವಿಚಾರ ಕರ್ತರು.ವ್ಯವಸ್ಥಾಪಕರು ಪ್ರಕಟಿಸಿದ್ದಾರೆ.