ಮುಂದಗೋಡ

ಗೋವಿನ ಜೋಳದ ಬೆಳೆ ಮೇಲೆ ಸೈನಿಕ ಹುಳು ದಾಳಿ, ಬೆಳೆ ಲೂಟಿ

ಗೋವಿನ ಜೋಳದ ಬೆಳೆ ಮೇಲೆ ಸೈನಿಕ ಹುಳು ದಾಳಿ, ಬೆಳೆ ಲೂಟಿ

ಮುಂಡಗೋಡ 27: ತಾಲೂಕಿನ ತಮ್ಯಾನಕೊಪ್ಪ ಗ್ರಾಮದ ಹೊಲಗಳ ಗೋವಿನ ಜೋಳದ ಬೆಳೆಗಳ ಮೇಲೆ ಸೈನಿಕ ಹುಳು(ಲದ್ದಿ ಹುಳು) ದಾಳಿ ನಡೆಸಿ ಬೆಳೆ ಲೂಟಿ ಮಾಡಿ ರೈತರಿಗೆ ಅಪಾರ ಹಾನಿ ಉಂಟಾಗಿದೆ. 

ಸನವಳ್ಳಿ ಗ್ರಾಮದ ಕೆಲವು ರೈತರು ತಮ್ಯಾನಕೊಪ್ಪ ಗ್ರಾಮದ ಹೊಲಗಳಲ್ಲಿ ಸುಮಾರು 30ಎಕರೆಯಷ್ಟು ಪ್ರದೇಶದಲ್ಲಿ ಬೆಳೆದ ಗೋವಿನ ಜೋಳದ ಬೆಳೆಗೆ ಕಳೆದ ಕೆಲವು ದಿನಗಳಿಂದ ಸೈನಿಕ ಹುಳು(ಲದ್ದಿ ಹುಳು)ವಿನ ಬಾಧೆ ಕಾಣಿಸಿಕೊಂಡಿದ್ದು 2-3 ಬಾರಿ ಓಷಧಿ ಸಿಂಪರಣೆ ಮಾಡಿದರೂ ಹತೋಟಿಗೆ ಬರಲಿಲ್ಲ. ಗಿಡದ ಎಲೆಯೊಳಗಿನ ರಸವನ್ನೆಲ್ಲ ತಿಂದು ಎಲೆಗಳಿಲ್ಲದೆ ಗಿಡ ಮಾತ್ರ ಉಳಿದಿದ್ದು ತೆನೆಗಳಲ್ಲಿಯೂ ಹುಳುಗಳು ಸೇರಿಕೊಂಡಿವೆ. ಇದರಿಂದ ತೆನೆಗಳು ಬಲಿಯದೆ ಕೊಳೆತು ಹೋಗುತ್ತವೆ. ಕಷ್ಟಪಟ್ಟು ಬೆಳೆದ ಫಸಲು ಕೈಗೆ ಸಿಗದಂತಾಗಿದೆ ಎಂದು ರೈತರಾದ ಮಂಜುನಾಥ ಕೋಣನಕೇರಿ, ದೇವರಾಜ ಹುನಗುಂದ, ಸುರೇಶ ಕೆರಿಹೊದವರ, ಮಾರುತಿ ಕಳಸಗೇರಿ, ನೀಲಪ್ಪ ಪೂಜಾರ, ಮಾರುತಿ ಕೋಣನಕೇರಿ, ಸಹದೇವಪ್ಪ ಕೆರಿಹೊಲದವರ, ರಮೇಶ ಕೆರಿಹೊಲದವರ ತಮ್ಮ ಅಳಲು ತೋಡಿಕೊಂಡರು.  

ಗಿಡದ ಎಲೆಯೊಳಗಿನ ರಸವನ್ನೆಲ್ಲ ತಿಂದು ಅಲ್ಲಿಯೇ ಲದ್ದಿ ಹಾಕುವುದಕ್ಕೆ ಲದ್ದಿ ಹುಳು ಅಥವಾ ಸೈನಿಕ ಹುಳು ಎಂದು ಕರೆಯಲ್ಪಡುವ ಹುಳುವಿನ ಬಾಧೆ ತಾಲೂಕಿನ ತಮ್ಯಾನಕೊಪ್ಪ ಗ್ರಾಮದಲ್ಲಿ ಸುಮಾರು 30ಎಕರೆಯಷ್ಟು ಪ್ರದೇಶದಲ್ಲಿ ಗೋವಿನ ಜೋಳದ ಬೆಳೆಗೆ ಕಾಣಿಸಿಕೊಂಡಿದ್ದು ರೈತರಿಗೆ ಹಾನಿ ಉಂಟು ಮಾಡಿದೆ. 


ಸುದ್ದಿ ಓದಿ