ಬಳ್ಳಾರಿ

ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಬಳ್ಳಾರಿ 09: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 08ರಂದು ವಿಶ್ವ ಮಹಿಳಾ ದಿನಾಚರಣೆ ಯನ್ನು ರಾಷ್ಟ್ರದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ" ಎಂಬುವ ಶೀರ್ಷಿಕೆಯಡಿ  ಜರುಗಿತು. 

ಡಾ. ಪಿ.ಸಂದ್ಯಾ  ಮಾತನಾಡುತ್ತಾ   ಪ್ರತಿ ವರ್ಷ್ ವಿಶ್ವದಾದ್ಯಂತ 08 ಮಾರ್ಚ್‍ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಚಾರಿಸಲಾಗುವುದು. ಇದರ ಮುಖ್ಯ ಉದ್ದೇಶಗಳು-ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ತೆಗೆದುಕೊಳುವ ವಿಧಿ ವಿಧಾನಗಳು, ಕ್ರಮಗಳು, ಮಹಿಳೆಯರ ಉನ್ನತಿಗಾಗಿ ಮಾಡಬೇಕಾದ ಮಾರ್ಪಾಟುಗಳು, ಸೂಚನೆಗಳು ಸಮೀಕ್ಷೆ ಮಾಡುವುದು. ವಿವಿಧ ದೇಶಗಳು ಹಾಗೂ ಅಲ್ಲಿನ ಸಂಸ್ಕೃತಿಗಳಲ್ಲಿ  ಸಹಾಸ ಕಾರ್ಯಾನಿರ್ವಾಹಣೆ, ಅಸಾಧಾರಣ ಪ್ರತಿಭೆÉ ತೋರಿಸಿದ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುವುದು. ಭಾರತ ದೇಶದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ  ಆರ್ಥಿಕ ಸಮಾನತೆ, ಪುರಷರ ಜೊತೆ ಸಮಾನ ಹಕ್ಕು ಮುಂತಾದ ಹಲವಾರು ವಿಷಯಗಳಲ್ಲಿ ಬದಲಾವಣೆಗಳು ಕೆಲವೊಂದು ದಶಕಗಳಿಂದ ಕಾನೂನು ಪರವಾಗಿ, ರಾಜ್ಯಾಂಗ ಪರವಾಗಿ ಮಾಡಲಾಗಿದೆ ಎಂದು ಚರ್ಚಿಸಿದರು. 

ಮುಖ್ಯ ಅತಿಥಿಗಳು ಡಾ. ಪಿ.ಸಂದ್ಯಾ , ಸ್ಪೆಷಲ್ ಆಫಿಸರ್, ಮೈಸೂರಿನ ವಿ.ತಾ.ವಿ.ಯ ಇ-ಲರ‍್ನಿಂಗ್ ವಿಭಾಗ, ಮಹಾವಿದ್ಯಾಲಯದ ಅಧ್ಯಕ್ಷ ಜೆ. ಎಸ್. ಬಸವರಾಜ, ಪ್ರಾಂಶುಪಾಲರಾದ ಡಾ. ಟಿ.ಹನುಮಂತರೆಡ್ಡಿ,  ಉಪಪ್ರಾಂಶುಪಾಲರು ಡಾ.  ಸವಿತಾ ಸೋನೋಳಿ ಯವರು, ಹಾಗೂ ಡಾ. ಶೋಭಾ.ಎಂ.ಎಸ್.  ಮಹಿಳಾ-ವಿಭಾಗ ಸಂಚಾಲಕರು, ಮಹಿಳಾ ಶಿಕ್ಷಕರು, ವಿದ್ಯಾರ್ಥಿ ವೃಂದದವರ  ಸಮ್ಮುಖದಲ್ಲಿ ಜರುಗಿತು.

ಮಹಾವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ  ಅರವಟಗಿ ಪ್ರಭು, ಕೆ.ಎಂ. ಶಿವಮೂರ್ತಿ, ಶುಭ ಹಾರೈಸಿದರು. ಈ ಸಮಾರಂಭದಲ್ಲಿ ಎಲ್ಲಾ ವಿಭಾಗಗಳಿಂದ, ಮಹೀಳಾ ಶಿಕ್ಷಕ ಮತ್ತು ವಿದ್ರ್ಯಾರ್ಥಿಗಳು ವೃಂದದವರು ಭಾಗವಹಿಸಿದರು ಡಾ. ಶ್ರೀಮತಿ ಎಂ.ಎಸ್. ಶೋಭ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ