ನೀರು ಜೀವ ಜಲ: ಅಬ್ದುಲ್ ನಬಿ
ಸಿರುಗುಪ್ಪ 23: ನೀರು ಸರಕಲ್ಲ ಅದು ನೀರು ಜೀವ ಜಲ ಎಂದು ಸಾಮಾಜಿಕ ಕಾರ್ಯಕರ್ತ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಎ ಅಬ್ದುಲ್ ನಬಿ ಅಭಿಪ್ರಾಯಪಟ್ಟರು.
ಇಬ್ರಾಹಿಮ್ ಮಂಜಿಲ್ನಲ್ಲಿ ಅವರು 29ನೇ ವಿಶ್ವ ಜಲ ದಿನವನ್ನು ನೆನಪಿಸಿ ಮಾತನಾಡುತ್ತಾ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ವಿಶ್ವ ಸಂಸ್ಥೆಯು 1993 ಮಾರ್ಚ್ 22 ರಿಂದ ಜಗತ್ತಿನಾದ್ಯಂತ ವಿಶ್ವ ಜಲ ದಿನವನ್ನು ಆಚರಿಸ ಲಾಗುತ್ತದೆ ಎಂದು ಅಬ್ದುಲ್ ನಬಿ ನುಡಿದರು.ಸಿರುಗುಪ್ಪ ನಗರದ ಕೃಷಿ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಜಲ ದಿನದ ಅಂಗವಾಗಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಬಸವಣ್ಣೆಪ್ಪ ಸಸಿಗೆ ನೀರು ಎರೆದು ಚಾಲನೆ ನೀಡಿ ಮಾತನಾಡುತ್ತಾ ಜಲ ರಕ್ಷಣೆ ಎಲ್ಲರ ಹೊಣೆ ಪ್ರತಿ ಜೀವಿಗೂ ನೀರು ಅವಶ್ಯ ಮುಂದಿನ ಪೀಳಿಗೆಗೆ ಮೌಲ್ಯ ಯುತ ನೀರು ಹಾಗೂ ಫಲ ವತ್ತಾದ ಮಣ್ಣು ಉಳಿಸ ಬೇಕಿದೆ ಎಂದರು ಮಣ್ಣು ತಜ್ಞ ಅಶೋಕ್ ಕುಮಾರ್ ಆರ್ಥಿಕತಜ್ಞ ಪ್ರಭು ಲಿಂಗ ತವರಿ ಶಿಕ್ಷಕ ಲಿಂಗಣ್ಣ ಇದ್ದರು.