ಶಿಗ್ಗಾವ್

27 ರಂದು ಉತ್ಸವ ರಾಕ್ ಗಾರ್ಡನ್‌ಲ್ಲಿ ವಿಶ್ವ ಪ್ರವಾಸೋದ್ಯಮ ದಿನ

27 ರಂದು ಉತ್ಸವ ರಾಕ್ ಗಾರ್ಡನ್‌ಲ್ಲಿ ವಿಶ್ವ ಪ್ರವಾಸೋದ್ಯಮ ದಿನ

ಶಿಗ್ಗಾವಿ 25: ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನ ಜಾನಪದ ರಂಗಮಂದಿರದಲ್ಲಿ ಸೆಪ್ಟೆಂಬರ್ 27 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಉತ್ಸವ ರಾಕ್ ಗಾರ್ಡನ್ ಸಮಿತಿ ಗೊಟಗೋಡಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022 ಸಮಾರಂಭ  ನಡೆಯಲಿದೆ ಎಂದು ಹಾವೇರಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಆರ್‌.ವಿ.ಚಿನ್ನಿಕಟ್ಟಿ ತಿಳಿಸಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಎಸ್‌.ಬೊಮ್ಮಾಯಿಯವರು ಸಮಾರಂಭ ಉದ್ಘಾಟಿಸುವರು ಹಾಗೂ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪ್ರವಾಸೋದ್ಯಮ ಸಚಿವ ಆನಂದಸಿಂಗ್, ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ , ಶಾಸಕ ನೆಹರು ಸಿ.ಓಲೇಕಾರ, ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ.ಬಣಕಾರ, ಹಾವೇರಿ ಸಂಸದ ಶಿವಕುಮಾರ ಸಿ.ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ. ಪ್ರೊ.ಎಸ್‌.ವಿ.ಸಂಕನೂರ, ಪ್ರದೀಪ ಶೆಟ್ಟರ,ಆರ್‌.ಶಂಕರ,ಸಲೀಂ ಅಹ್ಮದ್, ಶಾಸಕ ವಿರುಪಾಕ್ಷಪ್ಪ ಆರ್‌.ಬಳ್ಳಾರಿ, ಶಾಸಕ ಅರುಣಕುಮಾರ ಗುತ್ತೂರ, ಶಾಸಕ ಶ್ರೀನಿವಾಸ ಮಾನೆ,ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಪ್ಪವ್ವ ಎಂ.ಮಣಿಕಟ್ಟಿ, ಉಪಾಧ್ಯಕ್ಷ ಯಲ್ಲಪ್ಪ ಶಿಂಧೆ ಹಾಗೂ ದಾಸನೂರ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ ದಾಸನೂರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. 

ಉತ್ಸವ ರಾಕ್ ಗಾರ್ಡನ್ ಸಮಿತಿ ಅಧ್ಯಕ್ಷೆ ವೇದಾರಾಣಿ ದಾಸನೂರ “ಪ್ರವಾಸೋದ್ಯಮ ಪುನರಾವಲೋಕನ” ಕುರಿತು ಉಪನ್ಯಾಸ ನೀಡುವರು. 


ಸುದ್ದಿ ಓದಿ