ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ವತಿಯಿಂದ ವಿಶ್ವ ಸಾಕ್ಷರತಾ ದಿನಾಚರಣೆ
ಬಳ್ಳಾರಿ 13: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಭವನದಲ್ಲಿ ನಡೆಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸ್ಥಳೀಯ ಕಾರ್ಯದರ್ಶಿ ಚಂದ್ರಯ್ಯ ಮಠದ್ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಸಾಕ್ಷರತೆಯ ಮಹತ್ವದ ಪಾತ್ರವನ್ನು ಮತ್ತು ಸ್ವಯಂ ಪ್ರೇರಣೆಯಿಂದ ಕಲಿಕೆಯ ವಿವಿಧ ಅಭಿವೃದ್ಧಿಯ ವಿಚಾರಗಳ ಕುರಿತು ವಿವರಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಮೊದಲಿನಿಂದಲೂ ಎಲ್ಲ ರೀತಿಯ ಸಾಕ್ಷರತೆ ವಿಷಯದ ಕುರಿತು ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಭಾಸ್ಕರ್ ರೆಡ್ಡಿ ಅವರು ಶಿಕ್ಷಣ ಸಾಕ್ಷರತೆಯ ವಿವಿಧ ಕಾರ್ಯಕ್ರಮಗಳು ಅನುಷ್ಠಾನಗೊಳಿಸುತ್ತಿರುವುದರ ಕುರಿತು ವಿವರಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಅಧಿಕಾರಿ ಭಾಷಾ ಅವರು ಅನಾಚರಗಳು ತಡೆಯುವಲ್ಲಿ ಸಾಕ್ಷರತೆ ಅತ್ಯಂತ ಸಹಕಾರಿ ಎಂದು ಅವರು ಹೇಳಿದರು.
ಬಳ್ಳಾರಿ ಎಎಸ್ಎಮ್ ಕಾಲೇಜಿನ ರೇಂಜರ್ ಲೀಡರ್ ಮಂಗಳ ಭೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಎಸ್ಓಸಿಗಳಾದ ಮಲ್ಲೇಶ್ವರಿ ಜೂಜಾರೆ, ಸ್ಕೌಟ್ಸ್ ಮಾಸ್ಟರ್ ನಾಗೇಶ್ವರ ರಾವ್, ರೋವರ್ ಸ್ಕೌಟ್ಸ್ ಲೀಡರ್ ಜಿ.ಚಂದ್ರಶೇಖರ ರೆಡ್ಡಿ ಮತ್ತು ವಿವಿಧ ಶಾಲೆಯ ಸ್ಕೌಟ್ಸ್ ಮಕ್ಕಳು, ವಿವಿಧ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ಗಳು ಭಾಗವಹಿಸಿದ್ದರು.