ವಿಶ್ವ ಜಾನಪದ ದಿನಾಚರಣೆ: ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 20: ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರ, ಮಾರುತಿ ಕರಡಿ ಸಂಘ, ಜಾನಪದ ಕಲಾವಿದರ ಬಳಗ ಇವರ ಸಹಯೋಗದಲ್ಲಿ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪದಲ್ಲಿ ವಿಶ್ವಜಾನಪದ ದಿನಾಚರಣೆಯ ಅಂಗವಾಗಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಗ್ಗಾವಿ ತಾಲೂಕಿನ ಕಬನೂರಿನ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಕ್ರೀಡಾ ಯುವ ಸಂಘದ ಗದಿಗೆಯ್ಯ ಹಿರೇಮಠ ನೇತೃತ್ವದಲ್ಲಿ ಜೋಗತಿ ನೃತ್ಯವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಲಡ್ಡು ಮುತ್ತ್ಯಾ ಅಜ್ಜನವರು, ಅಧ್ಯಕ್ಷತೆ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಮಾತಾ ಬಿ ಮಂಜಮ್ಮ ಜೋಗತಿ, ಜಿ.ಪ. ಸದಸ್ಯ ಗದಿಗೆಪ್ಪ ಕಳ್ಳೀಮನಿ, ಗ್ರಾ.ಪಂ. ಅಧ್ಯಕ್ಷ ಸಂತೋಷಕುಮಾರ ಹೊಸಮನಿ, ಮಂಜುನಾಥಗೌಡ ಮುರಳ್ಳಿ, ಶಿಗ್ಗಾವಿ ತಾಲೂಕಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೊಟ್ರೇಶ ಮಾಸ್ತರ ಬೆಳಗಲಿ, ಸಮಾಜಸೇವಕ ಬಸನಗೌಡ ರಾಮನಗೌಡ್ರ, ಜಾನಪದ ಅಕಾಡೆಮಿ ಸದಸ್ಯ ಸಂಚಾಲಕ ಶಂಕರ ಅರ್ಕಸಾಲಿ, ಜಾನಪದ ತಜ್ಞ ಬಸವರಾಜ ಶಿಗ್ಗಾವಿ, ಪಕ್ಕೀರೇಶ ಕೊಂಡಾಯಿ, ಬಸವರಾಜ ಗೊಬ್ಬಿ ಸೇರಿದಂತೆ ಕಲಾವಿದರು, ಗ್ರಾಮಸ್ಥರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ.ಜಾ.ವಿ.ವಿ.ಸಹಾಯಕ ಪ್ರಾದ್ಯಾಫಕಿ ಡಾ.ವಿಜಯಲಕ್ಷ್ಮೀ ಗೇಟಿ ಉಪನ್ಯಾಸ ನೀಡಿದರು. ಕ.ಜಾ.ವಿ.ವಿ.ಸಹಾಯಕ ಪ್ರಾದ್ಯಾಫಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.