ಶಿಗ್ಗಾವ್

ವೈಷ್ಣವಿ ಲೇಔಟನಲ್ಲಿ ವಿಶ್ವ ಪರಿಸರ ದಿನಾಚರಣೆ

ವೈಷ್ಣವಿ ಲೇಔಟನಲ್ಲಿ ವಿಶ್ವ ಪರಿಸರ ದಿನಾಚರಣೆ

ಲೋಕದರ್ಶನ ವರದಿ

ಶಿಗ್ಗಾವಿ06 : ಪಟ್ಟಣದ 6 ನೇ ವಾಡರ್ಿನ ಶಬರಿಗಿರಿ ಮತ್ತು ವೈಷ್ಣವಿ ಲೇಔಟನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಬಗೆಯ ಸಸಿಗಳನ್ನು ಮಹಿಳೆಯರು ಮತ್ತು ಮಕ್ಕಳು ಸೇರಿ ಹಚ್ಚಿದರು.

ಸಸಿಗಳನ್ನು ಹಚ್ಚಿ ನೀರುಣಿಸಿ ಅನುರಾಧ ಪಾಟೀಲ ಮಾತನಾಡಿಶಬರಿಗಿರಿ ಮತ್ತು ವೈಷ್ಣವಿ ಲೇಔಟನ್ನು ಹಸಿರುವನವನ್ನಾಗಿ ಮಾಡಬೇಕೆಂಬ ಸಂಕಲ್ಪ ಮಾಡಿದ್ದು ಆ ನಿಟ್ಟಿನಲ್ಲಿ ವಾಡರ್ಿನಎಲ್ಲ ಮಹಿಳಾ ಸದಸ್ಯರು ಸೇರಿ ವಿವಿಧ ಬಗೆಯ ಗಿಡಗಳನ್ನು ಹಚ್ಚಿ ಬರುವ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಬೇಕು ಎಂಬ ಉದ್ದೇಶವನ್ನು ಹೊಂದಿದ್ದೇವೆಎಂದರು.

ಕಾವ್ಯಾ ಬಸರೀಕಟ್ಟಿ ಮಾತನಾಡಿ ಎಲ್ಲರೂ ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂದಿನ ಸಸಿ ಹಚ್ಚುವ ಕಾರ್ಯಕ್ರಮವೇ ಸಾಕ್ಷಿ ಆದ್ದರಿಂದ ಏನೇ ಮಾಡಿದರೂ ಎಲ್ಲರ ಸಹಾಯ ಸಹಕಾರದಿಂದ ಒಗ್ಗಟ್ಟಿನಿಂದ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಸರೋಜಾ ವಡಕಮ್ಮನವರ, ದೀಪಾ ಪಾಟೀಲ, ಪ್ರೇಮವ್ವ ವಡವಟ್ಟಿ, ಮಂಜುಳಾ ಅಗಸಿಮನಿ, ಕುಸುಮಾ ಮುಳಗುಂದ, ಪ್ರೀತಿಕಟ್ಟಿಮನಿ, ನಾಗರತ್ನ ನೆಲೋಗಲ್ಲ, ಕಮಲಾಬಾಯಿ ಪಾಟೀಲ ಸೇರಿದಂತೆ ಮಕ್ಕಳಾದ ನೈನಾ, ಕೃತಿ, ಅನೂಫ್, ಅನನ್ಯಾ, ಧವನ, ದರ್ಶನಲೇ ಔಟನಗುರು ಹಿರಿಯರು ಉಪಸ್ಥಿತರಿದ್ದರು 

ಸುದ್ದಿ ಓದಿ