ವಿಶ್ವ ಕಿವುಡ ಮಕ್ಕಳ ದಿನಾಚರಣೆ
ಮಾನವನ ಬೌದ್ಧಿಕ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಳೆಲ್ಲವೂ ಒಂದಕ್ಕೊಂದು ಸಂಬಂಧಪಟ್ಟಂತೆ ಬೆಳೆಯುತ್ತವೆೆ. ಮಾತಿನ ಬೆಳವಣಿಗೆಗೂ ಕಿವಿಯ ರಚನೆ ಹಾಗೂ ಕಾರ್ಯಗಳಿಗೂ ಅನ್ಯೋನ್ಯ ಸಂಬಂಧವಿರುತ್ತದೆ. ಶಬ್ಧಗಳನ್ನು ಕೇಳುವುದು ಮತ್ತು ದೇಹದ ಸಮತೋಲನ ಸ್ಥಿತಿಯನ್ನು ಕಾಪಾಡುವುದೆ ಕಿವಿಯ ಕೆಲಸ. ಕಿವಿಯಲ್ಲಿ ಹೊರಕಿವಿ, ಮಧ್ಯಕಿವಿ ಹಾಗೂ ಒಳಕಿವಿ ಎಂಬ ಮೂರು ಭಾಗಗಳಿವೆ.
ಹೊರಕಿವಿ :- ಮೃದುವಾದ ಚರ್ಮದಿಂದ ಆವರಿಸಲ್ಪಟ್ಟ ಕಿವಿಯ ಹಾಲೆ ಅಥವಾ ಪಿನ್ನವು ಶಬ್ಧಗಳನ್ನು ಸಂಗ್ರಹಿಸಿ ಹೊರ ಕಿವಿಯ ನಾಳಕ್ಕೆ ನಿದರ್ೆಶಿಸುತ್ತದೆ. ನಾಳದ ಒಳ ತುದಿಯಲ್ಲಿ ಓರೆಯಾಗಿ ಕಿವಿಯ ತಮಟೆ ಇದೆ. ಇದು 0.1 ಮಿಲಿ ಮೀಟರ್ ದಪ್ಪವುಳ್ಳ ಒಂದು ತೆಳುವಾದ ಪೊರೆ ನಾಳದ ದ್ವಾರದಲ್ಲಿರುವ ಸೂಕ್ಷ್ಮವಾದ ಕೂದಲುಗಳು, ಹೊರವಸ್ತುಗಳು ಮತ್ತು ಸಣ್ಣ ಜೀವಿಗಳು ಧೂಳಿನ ಕಣಗಳನ್ನು ತಡೆಯುತ್ತವೆ. ಹೀಗಾಗಿ ಕೂದಲು ಮತ್ತು ಮೇಣವು (ವ್ಯಾಕ್ಸ್) ಕಿವಿಗೆ ರಕ್ಷಣೆ ನೀಡುತ್ತದೆ.
ಮಧ್ಯ ಕಿವಿ :- ಇದು ಸುಮಾರು 2 ಕ್ಯುಬಿಕ್ ಸೆಂಟಿಮೀಟರ್ನಷ್ಟು ಇರುತ್ತದೆ. ಇಲ್ಲಿ ಮ್ಯಾಲಿಯಸ್, ಇಂಕಸ್ ಮತ್ತು ಸ್ಟೇಪಿಸ್ ಎನ್ನುವ ಮೂರು ಮೂಳೆಗಳಿವೆ. ಸ್ಟೇಪಿಸ್ ಮೂಳೆಯ ತುದಿಯು ಅಂಡಾಕಾರದ (ಠತಚಿಟ ತಿಜಠತಿ) ಕಿಟಕಿಯಲ್ಲಿ ಸೇರಿರುತ್ತದೆ. ಈ ಮೂರು ಮೂಳೆಗಳನ್ನು ಶರೀರದಲ್ಲಿ ಅತೀ ಸಣ್ಣದಾದ ಟೆಂಪೇನಿಕ್ ಮತ್ತು ರಿಕಾಪು ಸ್ನಾಯುಗಳು ಒಂದಕ್ಕೊಂದು ಸರಿಯಾದ ರೀತಿಯಲ್ಲಿ ಚಲಿಸಲು ಸಹಾಯ ಮಾಡುತ್ತವೆ. ಬಹಳ ಜೋರಾದ ಶಬ್ಧ ಉಂಟಾದಾಗ ಈ ಸ್ನಾಯುಗಳು ಸಂಕುಚಿಸಿ ಹೆಚ್ಚು ಶಬ್ಧ ಒಳಕಿವಿಯೊಳಗೆ ಹೋಗದಂತೆ ಕಾಪಾಡುತ್ತದೆ. ಮಧ್ಯಕಣರ್ಾಂತರನಾಳ (ಯುಸ್ಟೇಶಯನ್ ಟ್ಯುಬ್) ಗಂಟಲು ಮತ್ತು ಮಧ್ಯದ ಕಿವಿಯನ್ನು ಸಂಪಕರ್ಿಸುತ್ತದೆ. ಮಧ್ಯಕಿವಿಯಲ್ಲಿ ಉಂಟಾಗುವ ಪೊಳ್ಳು ಅಂಗ ಅಗರ್ಭ (ಸಿಸ್ಟ) ಗಾಯಗಳು ಶ್ರವಣ ನ್ಯೂನ್ಯತೆಯನ್ನು ಉಂಟುಮಾಡಬಹುದು.
ಒಳ ಕಿವಿ :- ಇದು ಬಹು ಮುಖ್ಯವಾದ ಅಂಗ. ಪೆರಿಲಿಂಪ್ ಎಂಬ ದ್ರವ್ಯವು ಒಳಕಿವಿಯನ್ನು ಆವರಿಸಿದೆ. ಒಳಕಿವಿಯಲ್ಲಿ ಯುಟ್ರಿಕ್ಯುಲಸ್ ಮತ್ತು ಸ್ಯಾಕ್ಯುಲಸ್ ಎಂಬ ಎರಡು ಭಾಗಗಳಿವೆ. ಮೇಲಿನ ಭಾಗವಾದ ಯುಟ್ರಕ್ಯೂಲಸ್ಗೆ ಮೂರು ಅರ್ಧಚಂದ್ರಾಕಾರದ ನಾಳಗಳಲ್ಲಿ ಸಾಕ್ಯುಲಸ್ ಕೆಳ ಭಾಗದಲ್ಲಿ ಕಾಕ್ಲಿಯರ್ ಇದೆ. ಇವೆರೆಡರ ಮಧ್ಯೆ ವೆಸ್ಟಿಬ್ಯೂಲ್ ಇದೆ. ಇಡೀ ಒಳಕಿವಿಯ ಎಂಡೋಲಿಂಪ್ ಎಂಬ ದ್ರವದಿಂದ ತುಂಬಿದೆ. ಅರ್ಧ ಚಂದ್ರಕಾರದ ನಾಳಗಳು ನಮ್ಮ ದೇಹವನ್ನು ಸಮತೋಲನದಲ್ಲಿರಿಸುತ್ತವೆ. ಇದರ ಒಳಭಾಗದಲ್ಲಿ ಕಪಾಲ ಮೂಲ ಪೊರೆ ಎಂಬ ಒಂದು ತೆಳುವಾದ ಪೊರೆ ಇದೆ. ಇದರ ಮೇಲ್ಭಾಗದಲ್ಲಿ ಸುರುಳಿ ಸುತ್ತಿಕೊಂಡಿರುವ ಕಾಟರ್ಿ ಅಂಗವಿದೆ. ಇದರೊಳಗೆ ಕೂದಲಿನಂತಹ ಜೀವಕೋಶಗಳು ಮತ್ತು ನರಾಗ್ರಗಳಿವೆ. ಇವು ವಿವಿಧ ವೇಗವುಳ್ಳ ಕಂಪನಗಳನ್ನು ಬೇರೆ- ಬೇರೆಯಾಗಿ ಗ್ರಹಿಸುತ್ತವೆ. ಈ ಜ್ಞಾನವಾಹಿ ನರಾಗ್ರಹಗಳು ನರತಂತುಗಳೊಂದಿಗೆ ಸೇರಿಕೊಂಡು ಶ್ರವಣ ನರಸಂದೇಶಗಳಾಗಿ ಪರಿವತರ್ಿಸಲ್ಪಟ್ಟು ಶ್ರವಣ ನರದ ಮೂಲಕ ಮೆದುಳಿಗೆ ತಲುಪಿದಾಗ ನಾವು ಶಬ್ಧಗಳನ್ನು ಕೇಳುತ್ತೇವೆ. ಆದರೆ ಒಳಕಿವಿಯಲ್ಲಿ ತೊಂದರೆಯಾದಾಗ ನರವಾಹಕ ಶ್ರವಣ ದೋಷ ಉಂಟಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಶ್ರವಣೋಪಕರಣ ಬಳಕೆ ಒಂದೆ.
ಮನುಷ್ಯನಿಗೆ ಹೇಗೆ ಎರಡು ಕಣ್ಣುಗಳಿದ್ದರೂ, ಒಂದು ವಸ್ತುವನ್ನ ನೋಡಿದಾಗ ಎರೆಡೆರಡು ಕಾಣುವುದಿಲ್ಲವೊ ಹಾಗೆ ಎರಡು ಕಿವಿಗಳಿದ್ದರು ಒಂದೆ ರೀತಿಯ ಶಬ್ಧವನ್ನು ಗ್ರಹಿಸುವುದಿಲ್ಲ. ಎರಡು ಕಿವಿಗಳು ಪರಸ್ಪರ ಹೊಂದಿಕೊಂಡು ಕಾರ್ಯನಿರ್ವಹಿಸುತ್ತವೆ. ಶಬ್ಧ ತೀವ್ರತೆಯಲ್ಲಿ ಅಥವಾ ಗುಣಮಟ್ಟದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೇರೆ ಶಬ್ಧಗಳನ್ನು ಗ್ರಹಿಸುತ್ತವೆ. ಹಾಗೆಯೆ ಶಬ್ಧ ಯಾವ ದಿಕ್ಕಿನಿಂದ ಬರುತ್ತಿದೆಯೆಂಬುದನ್ನು ಗುರುತಿಸುತ್ತವೆ. ಈ ಕಾರಣದಿಂದಲೆ ಕಿವುಡು ಮಕ್ಕಳಿಗೆ ಒಂದೇ ಶ್ರವಣೋಪಕರಣದಿಂದ ಹೊರಟ ಎರಡು ಗ್ರಾಹಕಗಳನ್ನು ಅಳವಡಿಸುವುದಕ್ಕಿಂತಲೂ, ಒಂದೊಂದು ಕಿವಿಗೂ ಒಂದೊಂದು ಶ್ರವಣೋಪಕರಣಗಳನ್ನು ಅಳವಡಿಸುವುದು ಉತ್ತಮ. ಇದರಿಂದ ಶಬ್ಧಗಳ ದಿಕ್ಕನ್ನು ಮತ್ತು ವಿವಿಧ ಶಬ್ಧಗಳ ವ್ಯತ್ಯಾಸಗಳನ್ನು ಗುರುತಿಸಲು ಅನುಕೂಲವಾಗುತ್ತದೆ.
ಪ್ರಸ್ತುತ ವಿಶ್ವದಲ್ಲಿ 7.9 ಬಿಲಿಯನಷ್ಟು, ಭಾರತದಲ್ಲಿ 63 ಮಿಲಿಯನಷ್ಟು, 33 ಲಕ್ಷದಷ್ಟು ಕನರ್ಾಟಕದಲ್ಲಿ ಹಾಗೂ 2021 ರ ಮಾಹಿತಿಯ ಪ್ರಕಾರ ನಮ್ಮ ಹಾವೇರಿ ಜಿಲ್ಲೆಯಲ್ಲಿ 37,284 ರಷ್ಟು ವಿಕಲಚೇತನರಿದ್ದಾರೆ. ಅದರಲ್ಲಿ 6.244 ರಷ್ಟು ಶ್ರವಣದೋಷವುಳ್ಳವರು, ಅಂಧರು 4.765, ದೈಹಿಕ ವಿಕಲಚೇತನರು 22.391, ಬುದ್ಧಿಮಾಂದ್ಯರು 2.450, ಮಾನಸಿಕ ಅಸ್ವಸ್ಥರು 906 ಬಹುವಿಧ ವಿಕಲಚೇತನರು, 383 ಹಾಗೂ ಇತರರು 145 ರಷ್ಠಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 18 ವಿಶéೇಷ ಶಾಲೆಗಳಿವೆ. ಭಾರತದಲ್ಲಿ ಸುಮಾರು ಒಂದು ಶತಮಾನದ ಹಿಂದಿನಿಂದಲೂ ಶ್ರವಣ ನ್ಯೂನ್ಯತೆವುಳ್ಳವರ ಬಳಕೆಗೆ ಸನ್ನೆ ಭಾಷೆಯು ಅಸ್ಥಿತ್ವದಲ್ಲಿದೆ. ಸಕರ್ಾರವು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಸನ್ನೆ ಭಾಷೆ ನಿಘಂಟನ್ನು ಹೊರ ತಂದಿದೆ. ಸ್ಥಳೀಯ ಭಾಷೆಗಳಿಗೂ ಕೂಡ ಸನ್ನೆ ಭಾಷೆ ನಿಘಂಟಿನ ಅವಶ್ಯಕತೆಯಿದ್ದು, ಸಕರ್ಾರ ಈ ಬಗ್ಗೆ ಗಮನಹರಿಸಬೇಕಾಗಿದೆ. ವಿಶೇಷ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಸಮರ್ಪಕ ವೇತನ ತರಬೇತಿ ಹಾಗೂ ಸಾಮಾನ್ಯ ಶಾಲೆಗಳಂತೆ ಸೌಲಭ್ಯಗಳನ್ನು ನೀಡಿದ್ದಲ್ಲಿ ವಿಕಲಚೇತನ ಮಕ್ಕಳ ಸೇವೆ ದೇವರ ಸೇವೆ ಎಂದು ದುಡಿಯುತ್ತಿರುವವರ ಬದುಕು ಸಾರ್ಥಕವಾಗುತ್ತದೆ.
ಇತ್ತೀಚೆಗೆ ಕನರ್ಾಟಕ ಸಕರ್ಾರವು ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟಲು ವೈದ್ಯಕೀಯ ಮತ್ತು ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹಾವೇರಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ವಿಕಲಚೇತನ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಇವೆರೆಲ್ಲರೆ ಪ್ರಯತ್ನದಿಂದ ಹಾವೇರಿ ಜಿಲ್ಲೆಯು ಅರಿವು ಮೂಡಿಸುವ ಹಾಗೂ ವಿಕಲಚೇತನರಿಗೆ ಅನುಕೂಲ ಕಲ್ಪಿಸುವಲ್ಲಿ ರಾಜ್ಯಕ್ಕೆ ಮುಂಚೂಣಿಯಲ್ಲಿದೆ. ಇವರೆಲ್ಲರ ಸಹಕಾರದಿಂದ ಘನ ಸಕರ್ಾರವು ರಾಜ್ಯ ಮಟ್ಟದಲ್ಲಿ ಹಾವೇರಿ ಜಿಲ್ಲೆಗೆ ಪ್ರಶಸ್ತಿ ನೀಡಿದೆ.
- ಸೌಮ್ಯ ಶಿ ರಂಗಜ್ಜನವರ
ರೇಣುಕಾ ಎಲ್ಲಮ್ಮ ಕಿವುಡ ಮಕ್ಕಳ ವಸತಿ ಶಾಲೆ ರಾಣೆಬೆನ್ನೂರು