ವರ್ಲ್ದ ಡೆ ಆಫ್ ಸೋಷಿಯಲ್ ಜಷ್ಟೀಸ್ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 23: ಶ್ರೀರಾಮ್ ಪೈನಾನ್ಸ್ ಕಂಪನಿಯು ಸಾಮಾಜಿಕ ಕಾರ್ಯಗಳ ಮೂಲಕ ಕಳಕಳಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಿ ಸ್ವಯಂ ಸಾಮರ್ಥ್ಯವಂತರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಶ್ರಮ ಬಹಳವಿದ್ದು ಓದುವ ಹಂಬಲ ವಿದ್ಯಾರ್ಥಿಗಳಿಗೆ ಇರಬೇಕು ಎಂದು ಹಿರಿಯ ದಿವಾಣಿ ನ್ಯಾಯಾದಿಶರಾದ ಪೈರೋಜಾ ಹ ಉಕ್ಕಲಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶ್ರೀರಾಮ ಟ್ರಾನ್ಸಪೋರ್ಟ ಪೈನಾನ್ಸ್ ಲಿಮಿಟೆಡ್ ಶಿಗ್ಗಾವಿ ಮತ್ತು ತಾಲೂಕಾ ಲೀಗಲ್ ಸರ್ವಿಸ್ ಕಮೀಟಿ ಶಿಗ್ಗಾವಿ ಇವರ ವತಿಯಿಂದ ಶ್ರೀರಾಮ್ ಎಜುಕೇಷನ್ ಸ್ಕಾಲರ್ಶಿಫ್ ಪ್ರೋಗ್ರಾಮ್ ಮತ್ತು ವರ್ಲ್ದ ಡೆ ಆಫ್ ಸೋಷಿಯಲ್ ಜಷ್ಟೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂತರ್ಜಾಲದ ಸದುಪಯೋಗವಾಗಬೇಕೆ ಹೊರತು ದುರ್ಬಳಕೆಯಾಗಬಾರದು, ಈ ಕೋವಿಡ್ನಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಹಳ ಕಷ್ಟವಾಗಿದೆ, ಅಲ್ಲದೇ ವಿದ್ಯಾರ್ಥಿಗಳಿಗೆ ಬಡತನವು ಕೆಲವು ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಿ, ಎಲ್ಲ ಸವಾಲುಗಳನ್ನು ಎದುರಿಸುವಂತೆ ಮಾಡಿದೆ, ಅಂಬೇಡ್ಕರ್ ಜೀವನವನ್ನು ಸ್ಮರಿಸಿಕೊಳ್ಳಬೇಕು, ತಂದೆ-ತಾಯಿಯರ ಕಾಳಜಿಯಲ್ಲಿ ಓದಬೇಕು ಅವರಿಗೆ ಒಳ್ಳೆಯ ಹೆಸರನ್ನು ತರಬೇಕು, ವಿದ್ಯಾರ್ಥಿಗಳ ಛಲ ಮತ್ತು ಗುರಿ ಹೊಂದಿ ಕುಟುಂಬಕ್ಕೆ ಗೌರವ ತರುವ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಬೇಕು ಎಂದರು.
ಹಾವೇರಿಯ ಆರ್ಟಿಓ ವಾಸಿಂಬಾಬಾ ಮುದ್ದೆಬಿಹಾಳ ಮಾತನಾಡಿ ಶಿಕ್ಷಣ ಮತ್ತು ಆರೊಗ್ಯ ಕ್ಷೇತ್ರಕ್ಕೆ ಶಕ್ತಿ ತುಂಬಬೇಕು, ಅಂದಾಗ ದೇಶ ಬಲೀಷ್ಠವಾಗುತ್ತದೆ, ವಿದ್ಯಾರ್ಥಿಗಳು ಒಳ್ಳೆಯ ಉದ್ಯೊಗ ಪಡೆಯುಂತೆ ಓದಬೇಕು, ಶ್ರೀರಾಮ ಫೈನಾನ್ಸ್ನವರು ಒಳ್ಳೆಯ ಕೆಲಸದ ಜೊತೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿ ಧ್ಯರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ, ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವಾಗುತ್ತಿದೆ ಎಂದರು
ಸಿಪಿಐ ಬಸವರಾಜ ಹಳಬಣ್ಣವರ ಮಾತನಾಡಿ ಇದು ಅರ್ಥಪೂರ್ಣ ಕಾರ್ಯಕ್ರಮ,
ಮಕ್ಕಳಿಗೆ ಪ್ರೋತ್ಸಹ ನೀಡುವ ಕಾರ್ಯವಾಗಿದೆ, ಇದರಿಂದ ವಿದ್ಯಾರ್ಥಿಗಳು ಸ್ಪೂರ್ತಿ ಪಡೆಯಬೇಕು ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿ ಶ್ರೀನಿವಾಸ ಬಿ, ಹುಬ್ಬಳ್ಳಿಯ ಸುರೇಶ ಚೌವಾಣ, ಶಿಕ್ಷಣ ಇಲಾಖೆಯ ವಾಯ್ ಬಿ ಹುಚ್ಚಣ್ಣವರ ಮಾತನಾಡಿದರು.
ಕಾರ್ಯಕ್ರಮಲ್ಲಿ ಸುಮಾರು 282 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಫ್ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಧರ ಕುಲಕರ್ಣಿ, ಶಿಗ್ಗಾವಿ ಶಾಖೆಯ ಮುಖ್ಯಸ್ಥ ಹನುಮಂತಪ್ಪ ಹಡಪದ, ಪತ್ರಕರ್ತರ ಸಂಘದ ಅದ್ಯಕ್ಷ ವಿಶ್ವನಾಥ ಬಂಡಿವಡ್ಡರ, ಗಂಗಾಧರ ಕರಿಕಟ್ಟಿ, ಜಗದೀಶ ಕಣವಿ, ಜಗದೀಶ ಅಣ್ಣಿಗೇರಿ, ಮಂಜುನಾಥ ಚನ್ನಾಪೂರ, ಪ್ರಕಾಶ ಪದಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.